ರಾಯಚೂರು: ವೀರೇಂದ್ರ ಪಪ್ಪಿ ಇರಲಿ, ಯಾರೇ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತೆ. ನ್ಯಾಯಯುತವಾಗಿ ಏನು ನಡೆಯಬೇಕೋ ಅದು ನಡೆಯುತ್ತದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
ರಾಯಚೂರಿನಲ್ಲಿ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಇಡಿ ಬಂಧನ ವಿಚಾರವಾಗಿ ಮಾತನಾಡಿದ ಅವರು, ಗ್ಯಾಂಬ್ಲಿಂಗ್ ಮಾಡ್ತಾರೋ ಅಥವಾ ಮತ್ತೊಂದೋ. ಯಾರೇ ಏನೇ ಮಾಡಿರಲಿ, ಕಾನೂನುಬಾಹಿರ ಚಟುವಟಿಕೆಗಳಿಗೆ ಸರ್ಕಾರ ಎಂದೂ ಅವಕಾಶ ಕೊಡುವುದಿಲ್ಲ. ಅವರು ಯಾರೇ ಇರಲಿ ಅವರ ಮೇಲೆ ಕ್ರಮ ತಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಮಗಳನ್ನು ಕೊಂದ ಪಾಪಿಯನ್ನು ಎನ್‌ಕೌಂಟರ್ ಮಾಡಿ: ನಿಕ್ಕಿ ತಂದೆ ಕಣ್ಣೀರು
ಇನ್ನೂ ಧರ್ಮಸ್ಥಳದ ಪ್ರಕರಣವು ಈಗಾಗಲೇ ಒಂದು ಹಂತಕ್ಕೆ ಬಂದಿದೆ. ಎಸ್‌ಐಟಿ ರಚನೆ ಮಾಡಿ ತನಿಖೆ ನಡೆದಿರುವುಕ್ಕೆ ಹೆಗ್ಗಡೆಯವರು ಸ್ವಾಗತ ಮಾಡಿದ್ದಾರೆ. ತನಿಖೆಯಿಂದ ಸತ್ಯ ಹೊರಬರಲಿ, ಕಾಂಗ್ರೆಸ್ ಒಳ್ಳೆಯ ಕೆಲಸ ಮಾಡಿದೆ ಅಂತ ಹೆಗ್ಗಡೆಯವರು ಹೇಳಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಈಗಾಗಲೇ ಎಫ್‌ಐಆರ್ ಮಾಡಿ, ಬಂಧನವೂ ಆಗಿದೆ. ಯಾವುದೇ ಸರ್ಕಾರ ಇರಲಿ ದೂರು ಬಂದರೆ ತನಿಖೆ ಮಾಡುವ ಜವಾಬ್ದಾರಿ ಇರುತ್ತದೆ. ಹಾಗಾಗಿ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಿದೆ. ಈಗ ಸತ್ಯ ಹೊರ ಬರುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ – ವೋಟರ್ ಲಿಸ್ಟ್‌ನಲ್ಲಿ ಇಬ್ಬರು ಪಾಕಿಸ್ತಾನಿ ಮಹಿಳೆಯರು ಪತ್ತೆ!
ಬಿಜೆಪಿಯವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಎಸ್‌ಐಟಿ ಮಾಡಿ ಒಂದುವರೆ ತಿಂಗಳ ಬಳಿಕ ಎಲ್ಲಿಯೂ ಏನೂ ಸಿಕ್ಕಿಲ್ಲ ಅಂತ ಈಗ ಮಾತನಾಡುತ್ತಿದ್ದಾರೆ. ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿಗಿಂತ ರಾಜಕೀಯ ಮುಖ್ಯ. ಶಾಂತಿ ನೆಮ್ಮದಿ ಅವರಿಗೆ ಬೇಕಿಲ್ಲ. ಧರ್ಮದ ಆಧಾರದ ಮೇಲೆ ಗಲಾಟೆ ಮಾಡಿಸುವುದು ಮೊದಲಿನಿಂದ ಬಂದಿದೆ. ಬಿಜೆಪಿ ಸರ್ಕಾರ ಇದ್ದಾಗಲೂ ಮಂಗಳೂರು, ಉಡುಪಿಯಲ್ಲಿ ಗಲಭೆಗಳಾಗಿವೆ ಎಂದು ಟಾಂಗ್ ಕೊಟ್ಟಿದ್ದಾರೆ.