ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಸಹಕಾರ: ಎನ್.ಎಸ್ ಬೋಸರಾಜು

Public TV
2 Min Read

– ಕ್ವಾಂಟಮ್ ಕ್ಷೇತ್ರದ ಪ್ರಮುಖ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ
– ಕ್ವಾಂಟಮ್ ಕ್ಷೇತ್ರದ ಬೆಳವಣಿಗೆಗಳು ಹಾಗೂ ಅಗತ್ಯತೆಗಳ ಬಗ್ಗೆ ಸಮಗ್ರ ಮಾಹಿತಿ

ಬೆಂಗಳೂರು: ದೇಶದಲ್ಲೇ ಮೊದಲ ಕ್ವಾಂಟಮ್ ಕಂಪ್ಯೂಟರ್ ನಿರ್ಮಾಣದ ಮೂಲಕ ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನ ಹೊಂದಿದೆ. ಈ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿ ಅಗತ್ಯವಿರುವಂತಹ ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧವಿದ್ದು, ಹೊಸ ನೀತಿ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು (N S Bosaraju) ಹೇಳಿದ್ದಾರೆ.

ಇಂದು ವಿಕಾಸಸೌಧದ ಕಚೇರಿಯಲ್ಲಿ ರಾಜ್ಯದ ಕ್ವಾಂಟಮ್ ಕ್ಷೇತ್ರದ ಪ್ರಮುಖ ಕಂಪನಿಗಳಾದ ಕ್ಯೂಪೈ ಎಐ (QπAi), ತಕ್ಷೈ ಲ್ಯಾಬ್ಸ್ (Takshaya Labs) ಸೇರಿದಂತೆ ಇತರ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ವಿಸ್ತ್ರುತ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಘಾನಾದಿಂದ ಬ್ರೆಜಿಲ್‌ವರೆಗೆ – ಆಪರೇಷನ್ ಸಿಂಧೂರ, ಗ್ಲೋಬಲ್ ಸೌತ್ ಸಂಬಂಧಕ್ಕೆ ಮೋದಿ ಒತ್ತು

ಈ ಬಗ್ಗೆ ಮಾತನಾಡಿದ ಅವರು ಶೀಘ್ರದಲ್ಲೇ ಬೃಹತ್ ಕೈಗಾರಿಕೆ ಹಾಗೂ ಐಟಿಬಿಟಿ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು. ಕ್ವಾಂಟಮ್ ಕ್ಷೇತ್ರದಲ್ಲಿ ದೇಶದಲ್ಲೇ ಪ್ರಪ್ರಥಮವಾಗಿ ಹಲವಾರು ಸಾಧನೆಗಳನ್ನು ಕರ್ನಾಟಕ ರಾಜ್ಯ ಸಾಧಿಸಿದೆ. ದೇಶದ ಮೊದಲ ಕ್ವಾಂಟ್‌ಮ್ ಕಂಪ್ಯೂಟರ್ ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ದಿಗೊಂಡಿದ್ದು, ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರ ಕ್ವಾಂಟಮ್ ಇನ್ನೋವೇಷನ್ ಎಕೋಸಿಸ್ಟಮ್ ಅಭಿವೃದ್ದಿಗೆ ಅಗತ್ಯ ಸಹಕಾರ ನೀಡುತ್ತಿದೆ. ಅಲ್ಲದೇ, ಐಐಎಸ್ಸ್ಸಿ, ಆರ್‌ಆರ್‌ಐ, ಐಸಿಟಿಎಸ್‌ನಂತಹ ಜಾಗತಿಕ ಸಂಶೋಧನಾ ಸಂಸ್ಥೆಗಳ ಜೊತೆಗೂಡಿ ಸಂಶೋಧನೆಯನ್ನು ಪ್ರಾರಂಭಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಸಾರ್ವಕಾಲಿಕ ದಾಖಲೆಯತ್ತ ತೆಂಗಿನಕಾಯಿ ದರ – ಕೆಜಿಗೆ ಬರೋಬ್ಬರಿ 70-80 ರೂ.

ಹಾಗೆಯೇ, ನಮ್ಮ ರಾಜ್ಯದಲ್ಲಿರುವಂತಹ ಪ್ರಮುಖ ಸಾರ್ವಜನಿಕ ರಕ್ಷಣಾ ಕಂಪನಿಗಳು ಕ್ವಾಂಟಮ್ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಹೊಂದಿದೆ. ಇಂತಹ ಅವಕಾಶಗಳು ದೇಶದ ಬೇರೆ ರಾಜ್ಯಗಳಲ್ಲಿ ಕಡಿಮೆ. ಈ ಕ್ಷೇತ್ರದ ಅಭಿವೃದ್ದಿಗೆ ಈಗಾಗಲೇ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುತ್ತಿದೆ. ಇಂದು ನಡೆದ ಸಭೆಯಲ್ಲಿ ಕಂಪನಿಗಳ ಪ್ರತಿನಿಧಿಗಳು ಅವರಿಗೆ ಸರ್ಕಾರದಿಂದ ಅಗತ್ಯವಿರುವ ಸಹಕಾರದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಐದೂವರೆ ವರ್ಷದಲ್ಲಿ 82 ಹುಲಿಗಳ ಸಾವು; ಸಮಗ್ರ ವರದಿ ಕೇಳಿದ ಅರಣ್ಯ ಸಚಿವ

ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಗೆ ಹೊಸ ನೀತಿಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹಾಗೂ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಸಚಿವರೊಂದಿಗಿನ ಸಭೆಯಲ್ಲಿ ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವಂತಹ ಹೊಸ ನೀತಿ ಸೇರಿದಂತೆ ಮುಂದಿನ ರೋಡ್ ಮ್ಯಾಪ್ ಬಗ್ಗೆ ಚರ್ಚಿಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಎಷ್ಟೇ ದುಡ್ಡು ಕೊಟ್ರೂ `ಆ’ ಕೆಲಸ ಮಾಡಲ್ಲವೆಂದ ರಶ್ಮಿಕಾ!

ಸಭೆಯಲ್ಲಿ ಕೆಸ್ಟೆಪ್ಸ್ ನಿರ್ದೇಶಕ ಸದಾಶಿವ ಪ್ರಭು, ಕ್ಯೂಪೈಎಐ ಸಿಇಓ ನಾಗೇಂದ್ರ ನಾಗರಾಜ್, ಕನಿಷ್ಕ, ಕೆಎಸ್‌ಟಿಎ ಅಧ್ಯಕ್ಷ ಪ್ರೊ.ರಾಜ ಸಾಹೇಬ್, ಸದಸ್ಯ ಕೃಷ್ಣ ಮೂರ್ತಿ, ಹಿರಿಯ ಕೆಎಎಸ್ ಅಧಿಕಾರಿ ವೀರಭದ್ರ ಹಂಚಿನಾಳ್ ಸೇರಿ ಹಲವರು ಉಪಸ್ಥಿತರಿದ್ದರು.

Share This Article