ಎನ್.ಆರ್‌ಪುರ | ಸ್ಮಶಾನವಿಲ್ಲದೇ ಭದ್ರಾ ನದಿಯ ನಡುಗಡ್ಡೆಯಲ್ಲಿ ಶವಸಂಸ್ಕಾರ – 20 ವರ್ಷಗಳಿಂದ ಸಮಸ್ಯೆಗೆ ಸಿಗದ ಮುಕ್ತಿ 

Public TV
1 Min Read

ಚಿಕ್ಕಮಗಳೂರು: ಎನ್.ಆರ್.ಪುರ (NRPura) ತಾಲೂಕಿನ ಮೆಣಸೂರು ರಾವೂರು ಕ್ಯಾಂಪಿನ ಜನ, ಸ್ಮಶಾನವಿಲ್ಲದೇ ಮೃತದೇಹವನ್ನು ತೆಪ್ಪದಲ್ಲಿ ಕೊಂಡೊಯ್ದು ಭದ್ರಾ ಹಿನ್ನೀರಿನ (Bhadra River) ನಡುಗಡ್ಡೆಯಲ್ಲಿ ಶವಸಂಸ್ಕಾರ ನಡೆಸಿದ್ದಾರೆ.

ರಾವೂರು ಕ್ಯಾಂಪಿನಲ್ಲಿ ಶಿಳ್ಳೆಕ್ಯಾತ ಜನಾಂಗಕ್ಕೆ ಸೇರಿದ 150ಕ್ಕೂ ಹೆಚ್ಚು ಕುಟುಂಬಗಳಿವೆ. ಇಲ್ಲಿ 600ಕ್ಕೂ ಹೆಚ್ಚು ಜನರಿದ್ದಾರೆ. ರಾವೂರಿನ ವ್ಯಕ್ತಿಯೊಬ್ಬರು ಭಾನುವಾರ ಮೃತಪಟ್ಟಿದ್ದರು. ಅವರ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೆ ಭದ್ರಾ ಹಿನ್ನೀರಿನ ಮಧ್ಯೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಸುಮಾರು 1 ಕಿ.ಮೀ. ನದಿ ಮಧ್ಯೆ ತೆಪ್ಪದಲ್ಲಿ ಕೊಂಡೊಯ್ದು ನದಿ ಮಧ್ಯೆಯ ನಡುಗಡ್ಡೆಯಲ್ಲಿ ಶವಸಂಸ್ಕಾರ ಮಾಡಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಲ್ಲಿ ಅಪ್ಪನನ್ನೇ ಕೊಂದ – ಸದ್ದಿಲ್ಲದೆ ಶವ ಸಂಸ್ಕಾರಕ್ಕೆ ಸ್ಕೆಚ್ ಹಾಕಿ ಲಾಕ್ ಆದ ಮಗ

ಮೃತದೇಹ ಹೂಳಲು ಗುಂಡಿ ತೆಗೆದಾಗಲೂ ಇಲ್ಲಿ ನೀರು ಬರುತ್ತದೆ. ಆಗ ಗುಂಡಿಯಲ್ಲಿರೋ ನೀರನ್ನ ತೆಗೆದು ಕೆಳಗಡೆ ಸೊಪ್ಪು ಹಾಕಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಕೆಲವೊಮ್ಮೆ ಹಿಂದೆ ಮೃತದೇಹ ಅಂತ್ಯಸಂಸ್ಕಾರ ಮಾಡಿದ ಜಾಗದಲ್ಲೇ ಗುಂಡಿ ತೆಗೆದಿರುವಂತಹಾ ಉದಾಹರಣೆಯೂ ಇದೆ. ಮಳೆಗಾಲದಲ್ಲಿ ಭದ್ರಾ ಹಿನ್ನೀರು ಮನೆ ಹಿಂದೆಯೇ ಬರುತ್ತೆ. ಬೇಸಿಗೆಯಲ್ಲಿ ನೀರು ಇರೋದಿಲ್ಲ ಆಗ ಭದ್ರಾ ಹಿನ್ನೀರಿನ ಮಧ್ಯೆಯೇ ಅಂತ್ಯ ಸಂಸ್ಕಾರ ಮಾಡುತ್ತಾರೆ. ಮಳೆಗಾಲದಲ್ಲಿ ಭದ್ರಾ ಹಿನ್ನೀರು ಮನೆಯವರೆಗೂ ಬರುತ್ತದೆ. ಆಗ ತೆಪ್ಪ ಬಳಸಿ ನಡುಗಡ್ಡೆಗೆ ತೆರಳಿ ಅಂತ್ಯಸಂಸ್ಕಾರ ಮಾಡುತ್ತಾರೆ. ರಾವೂರು ಕ್ಯಾಂಪಿನ ಈ ಸ್ಥಿತಿಗೆ ಎರಡು ದಶಕಗಳ ಇತಿಹಾಸವಿದೆ.

ಸ್ಮಶಾನಕ್ಕಾಗಿ 20 ವರ್ಷಗಳಿಂದ ತಾಲೂಕು ಆಡಳಿತ, ಶಾಸಕರು, ಗ್ರಾಮ ಪಂಚಾಯಿತಿಗೆ ಮನವಿ ಮಾಡುತ್ತಿದ್ದಾರೆ. ಆದರೆ, ಈವರೆಗೂ ಯಾರೂ ಕೂಡ ಇವರ ಮನವಿಗೆ ಸ್ಪಂದಿಸಿಲ್ಲ. ಇದನ್ನೂ ಓದಿ: ಚಿಕ್ಕಮಗಳೂರು | ಮಾಜಿ ಸಚಿವರ ಮನೆಯಲ್ಲಿ 7 ಲಕ್ಷ ನಗದು, ಚಿನ್ನಾಭರಣ ದೋಚಿದ ನೇಪಾಳಿ ದಂಪತಿ

Share This Article