ಬಹುಕಾಲದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸಿದ ಅನಿವಾಸಿ ಕನ್ನಡಿಗರ ಅಭಿಯಾನ ಯಶಸ್ವಿ

Public TV
1 Min Read

ಬೆಂಗಳೂರು: ಅನಿವಾಸಿ ಕನ್ನಡಿಗರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ನೇತೃತ್ವದಲ್ಲಿ ವಿಶ್ವದ 30ಕ್ಕೂ ಹೆಚ್ಚಿನ ದೇಶಗಳ 120ಕ್ಕೂ ಹೆಚ್ಚಿನ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ನಡೆದ “ಎನ್‍ಆರೈ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ ಯಶಸ್ವಿಯಾಗಿ ಪರಿಣಾಮಕಾರಿಯಾಗಿ ನಡೆಯಿತು.

ಅನಿವಾಸಿ ಕನ್ನಡಿಗರು 20 ಸಾವಿರಕ್ಕೂ ಹೆಚ್ಚು ಟ್ವೀಟ್ ಮೂಲಕ 50 ಲಕ್ಷ ಜನರನ್ನು ತಲುಪುವಲ್ಲಿ ಯಶಸ್ವಿಯಾಯಿತು. ಹಲವು ವಿರೋಧ ಪಕ್ಷದ ನಾಯಕರು, ಶಾಸಕರು, ಆಡಳಿತ ಪಕ್ಷದ ನಾಯಕರೂ ಟ್ವಿಟ್ಟರ್ ಅಭಿಯಾನ ಕೈ ಜೋಡಿಸಿ ಅನಿವಾಸಿಗಳ ಬೇಡಿಕೆ ಕುರಿತು ಮುಖ್ಯಮಂತ್ರಿಯವರ ಗಮನ ಸೆಳೆಯುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: 30 ದೇಶಗಳ ಅನಿವಾಸಿ ಕನ್ನಡಿಗರಿಂದ ಇಂದು ‘ಎನ್ಆರ್‌ಐ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ

ಟ್ವಿಟ್ಟರ್ ಅಭಿಯಾನ ಪಾಲ್ಗೊಂಡ ಎಲ್ಲಾ ಕನ್ನಡ ಪರ ಮನಸುಗಳಿಗೆ ಅನಿವಾಸಿ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಅನಿವಾಸಿಗಳ ಬೇಡಿಕೆ ಈಡೇರಿಸಲು ನಮ್ಮ ಹೋರಾಟ ಟ್ವಿಟ್ಟರ್ ಅಭಿಯಾನಕ್ಕೆ ಸೀಮಿತವಾಗಿಲ್ಲ, ಅನಿವಾಸಿಗಳ ಬೇಡಿಕೆಗಳ ಮನವಿಯನ್ನು ಮಾಜಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಖುದ್ದಾಗಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತಲುಪಿಸಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಮ್ಮ ಬೇಡಿಕೆ ಈಡೇರಿಸುವರೆಂಬ ಆಶಾಭಾವನೆ ಇದೆ. ಆದರೆ ಭರವಸೆ ಈಡೇರುವವರೆಗೂ ಸರ್ಕಾರಕ್ಕೆ ದಿನನಿತ್ಯ ವಿಭಿನ್ನ ರೀತಿಯಲ್ಲಿ ನಮ್ಮ ಬೇಡಿಕೆ ನೆನಪಿಸಲಿದ್ದೇವೆ. ಎಂದು ಕನ್ನಡಿಗಾಸ್ ಫೆಡರೇಷನ್ ಸಂಚಾಲಕರ ಹಿದಾಯತ್ ಅಡ್ಡೂರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *