ಅನುದಾನಿತ ಕಾಲೇಜು ಉಪನ್ಯಾಸಕರಿಗೆ NPS ಜಾರಿಗೆ ಬಗ್ಗೆ ನ್ಯಾಯ ಸಮ್ಮತ ಕ್ರಮ: ಬೊಮ್ಮಾಯಿ

Public TV
2 Min Read

ಬೆಂಗಳೂರು: 2006ಕ್ಕೂ ಮೊದಲು ನೇಮಕ ಆಗಿರುವ ಉಪನ್ಯಾಸಕರಿಗೆ ಹಳೆ ಪಿಂಚಣೆ ಕೊಡುತ್ತೇವೆ. ನಂತರ ನೇಮಕಾತಿಯಾದವರಿಗೆ ಎನ್‍ಪಿ.ಎಸ್. ಕೊಡಲಾಗುತ್ತದೆ. ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೂ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಕೊಡುವ ಬಗ್ಗೆ ನ್ಯಾಯ ಸಮ್ಮತವಾಗಿ ತೀರ್ಮಾನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

ವಿಧಾನ ಪರಿಷತ್ (Vidhana Parishad) ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಅನುದಾನಿತ ಶಿಕ್ಷಕರಿಗೆ ಹಳೆ ಅಥವಾ ಹೊಸ ಪಿಂಚಣಿ ವ್ಯವಸ್ಥೆ ಕೊಡಬೇಕು. ನಿನ್ನೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿಬೆಳಗಾವಿಯಲ್ಲಿ ಮೋದಿ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದೇವೆ: ಶೋಭಾ ಕರಂದಾಜ್ಲೆ

ಇದಕ್ಕೆ ಉತ್ತರಿಸಿದ ಸಿಎಂ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಸಗಿ ಅನುದಾನಿತ ಪದವಿ ಉಪನ್ಯಾಸಕರ ಪಿಂಚಣಿಗೆ 15 ಪರ್ಸೆಂಟ್ ಮ್ಯಾನೇಜ್ ಮೆಂಟ್ ಕೊಡಬೇಕು. 10 ಪರ್ಸೆಂಟ್ ನೌಕರರು ಕೊಡಬೇಕು. ಉದ್ಯೋಗಿ ಹಿತರಕ್ಷಣೆ ಮಾಡಲು ಈ ರೀತಿ ಕೊಡಬೇಕು. ಈಗಾಗಲೇ ಕಾರ್ಖಾನೆ ಮತ್ತು ಅದರ ಉದ್ಯೋಗಿಗಳು ಇದೇ ರೀತಿ ಕಾಂಟ್ರಿಬ್ಯೂಷನ್ ಕೊಡುತ್ತಿದ್ದಾರೆ ಎಂದರು. ಇದನ್ನೂ ಓದಿ: ನನಗೆ ನಾನ್ ವೆಜ್ ತಿಂದಿದ್ದು ನೆನಪಿರಲಿಲ್ಲ: ಸಿ.ಟಿ ರವಿ

2006ರ ಮೊದಲ ನೇಮಕವಾದವರಿಗೆ ಒಪಿಎಸ್ ಪಿಂಚಣಿ ಕೊಡಲಾಗುತ್ತಿದೆ. ನಂತರ ನೇಮಕವಾದವರಿಗೆ ಎನ್‍ಪಿಎಸ್ ಪಿಂಚಣಿ ಕೊಡಲಾಗಿದೆ. 2006 ಕ್ಕಿಂತ ಮೊದಲು ನೇಮಕಾತಿ ಆಗಿ 2006 ರ ನಂತರ ಕೆಲಸಕ್ಕೆ ಹಾಜರಾಗಿರುವವರಿಗೂ ಎನ್‍ಪಿಎಸ್ ಕೊಡಲಾಗಿದೆ. ಅದನ್ನು ಹಳೇ ಪಿಂಚಣಿ ವ್ಯವಸ್ಥೆ (OPS) ಗೆ ಪರಿಗಣಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನೇಮಕಾತಿ ಪತ್ರ 2006 ಕ್ಕಿಂತ ಮೊದಲಿದ್ದರೆ ಅದನ್ನು ಪರಿಗಣಿಸಿಯೇ ಅವರಿಗೆಲ್ಲಾ ಒಪಿಎಸ್ ಪಿಂಚಣಿಗೆ ಪರಿಗಣಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಉನ್ನತ ಶಿಕ್ಷಣ ಇಲಾಖೆಯಿಂದ ಆಡಳಿತ ಮಂಡಳಿಗಳು ತನ್ನ ಪಾಲಿನ ಮೊತ್ತವನ್ನು ಪಿಂಚಣಿಗೆ ನೀಡಲು ನಿರ್ದೇಶಕ ಕೊಡಲಾಗುತ್ತದೆ.ಅನುದಾನಿತ ಕಾಲೇಜುಗಳಿಗೆ ಎನ್ ಪಿಎಸ್ ಕೊಡುವ ಬೇಡಿಕೆಯನ್ನು ನ್ಯಾಯ ಸಮ್ಮತವಾಗಿ ಪರಿಗಣನೆ ಮಾಡಲಾಗುತ್ತದೆ ಎಂದರು.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *