ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ನಂತೆ ಯುಪಿಐ ಬಳಸಬಹುದು – ಇದು ಹೇಗೆ ಕೆಲಸ ಮಾಡುತ್ತೆ?

Public TV
2 Min Read

ನವದೆಹಲಿ: ಇಲ್ಲಿಯವರೆಗೆ ಡೆಬಿಟ್‌ ಕಾರ್ಡ್‌ (Debit Card) ರೀತಿ ಯುಪಿಐ (UPI) ಕಾರ್ಯನಿರ್ವಹಿಸುತ್ತಿತ್ತು. ಆದರೆ ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ (Credit Card) ರೀತಿ ಯುಪಿಐ ಕಾರ್ಯನಿರ್ವಹಿಸಲಿದೆ.

ಹೌದು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್‌ ಫೀಚರ್‌ ಪರಿಚಯಿಸಲು ಸಿದ್ಧವಾಗಿದೆ.

ಹೇಗೆ ಕೆಲಸ ಮಾಡುತ್ತೆ?
ಈಗ ಯಪಿಐ ಬಳಸಿ ಯಾವುದಾದರು ವಸ್ತು ಖರೀದಿಸಿದರೆ ಕೂಡಲೇ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುತ್ತದೆ. ಆದರೆ ಯುಪಿಐ ಕ್ರೆಡಿಡ್‌ ಕಾರ್ಡ್‌ನಲ್ಲಿ ತಕ್ಷಣ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುವುದಿಲ್ಲ. ಹಣ ಬ್ಯಾಂಕ್‌ನಿಂದ ವರ್ಗಾವಣೆಯಾದರೂ  ತಿಂಗಳ ಕೊನೆಯಲ್ಲಿ ಇತ್ಯರ್ಥವಾಗಲಿದೆ. ಇದನ್ನೂ ಓದಿ: 200 ಅಡಿ ಆಳದ ಕಮರಿಗೆ ಉರುಳಿದ ಬಸ್ – ಇಬ್ಬರು ಸಾವು, 25 ಮಂದಿಗೆ ಗಾಯ

ವಿಶೇಷತೆ ಏನು?
ಈ ರೀತಿ ಹಣ ವರ್ಗಾವಣೆಯಾದರೆ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ವರದಿಯಾಗಿದೆ. ಆನ್‌ಲೈನ್‌ ಶಾಪಿಂಗ್‌/ ಮಳಿಗೆಗಳು ಈ ಶುಲ್ಕವನ್ನು ಭರಿಸಬೇಕಾಗುತ್ತದೆ. ಇದು ಯುಪಿಐ ಕ್ರೆಡಿಟ್‌ ಕಾರ್ಡ್‌ ವಿಶೇಷತೆ.

ಈಗ ಹೇಗೆ ನಡೆಯುತ್ತಿದೆ?
ಬ್ಯಾಂಕ್‌ಗಳು ಗ್ರಾಹಕನ ಖಾತೆಯಲ್ಲಿರುವ ಬ್ಯಾಲೆನ್ಸ್‌ ಪರಿಗಣಿಸಿ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಹಣವನ್ನು ನಿಗದಿಪಡಿಸುತ್ತದೆ. ನಂತರ ನಿಗದಿ ಪಡಿಸಿದ ಸಮಯದ ಒಳಗಡೆ ಆ ಹಣವನ್ನು ಬ್ಯಾಂಕಿಗೆ ಗ್ರಾಹಕ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: ಅನಂತ್‌ ಅಂಬಾನಿ ಮದುವೆ ಸಮಾರಂಭದಲ್ಲಿ ದೀದಿ – ಹರಿದು ಬಂತು ರಾಜಕೀಯ ನಾಯಕರ ದಂಡು!

ಡೆಬಿಟ್‌ ಕಾರ್ಡ್‌ಗೆ ಆಫರ್‌ ಇಲ್ಲ:
ಸದ್ಯ ಡೆಬಿಟ್‌ ಕಾರ್ಡ್‌ ಹೊಂದಿವರಿಗೆ ಆಫರ್‌/ ರಿಯಾಯಿತಿಗಳು ಸಿಗುವುದಿಲ್ಲ. ಆದರೆ ಕ್ರೆಡಿಟ್‌ ಕಾರ್ಡ್‌ ಹೊಂದಿವರಿಗೆ ಹಲವು ಆಕರ್ಷಕ ರಿಯಾಯಿತಿಗಳು ಲಭ್ಯ ಇರುತ್ತವೆ. ಯುಪಿಐ ಪೇಮೆಂಟ್ಸ್‌ನಲ್ಲಿ ವಿಶ್ವದಲ್ಲೇ ಭಾರತ ಮೊದಲ ಸ್ಥಾನದಲ್ಲಿದೆ. ಒಂದು ವೇಳೆ ಯುಪಿಐನಲ್ಲಿ ಕ್ರೆಡಿಟ್‌ ಕಾರ್ಡ್‌ ವಿಶೇಷತೆ ಸೇರಿಸಿದಂತೆ ಯುಪಿಐ ವ್ಯವಹಾರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ.

ಈಗಾಗಲೇ ಈ ಸೇವೆ ಲಭ್ಯವಿದೆ:
ಬ್ಯಾಂಕ್‌ಗಳಾದ ಆಕ್ಸಿಸ್‌, ಹೆಚ್‌ಡಿಎಫ್‌ಸು, ಐಸಿಐಸಿಐ, ಇಂಡಿಯನ್‌ ಬ್ಯಾಂಕ್‌, ಪಿಎನ್‌ಬಿ ಬ್ಯಾಂಕ್‌ಗಳು ಈಗಾಗಲೇ ಈ ರೀತಿಯ ವಿಶೇಷತೆಯನ್ನು ನೀಡುತ್ತವೆ. ಯುಪಿಐ ರೂಪೇ ಕ್ರೆಡಿಟ್‌ ಕಾರ್ಡ್‌ ವರ್ಚುಯಲ್‌ ಆಗಿದ್ದು ಇದನ್ನು ಬಳಸಿ ಹಣವನ್ನು ತೆಗೆಯಲು ಸಾಧ್ಯವಿಲ್ಲ.

 

Share This Article