ಅಲ್ಕರಾಝ್‌ಗೆ ಚೊಚ್ಚಲ ವಿಂಬಲ್ಡನ್‌ ಕಿರೀಟ – ಸೋಲಿಸಿದ ಆಟಗಾರನನ್ನೇ ಬಾಯ್ತುಂಬ ಹೊಗಳಿದ ದಿಗ್ಗಜ ಜೊಕೊವಿಕ್!

Public TV
3 Min Read

ಲಂಡನ್: ಕಳೆದ 10 ವರ್ಷಗಳಿಂದ ವಿಂಬಲ್ಡನ್ (Wimbledon) ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಆರ್ಭಟಿಸಿದ್ದ ನೊವಾಕ್ ಜೊಕೊವಿಕ್‌ನನ್ನ (Novak Djokovic) ಸೋಲಿಸಿ ವಿಶ್ವ ಶ್ರೇಯಾಂಕ ಆಟಗಾರ ಕಾರ್ಲೊಸ್‌ ಅಲ್ಕರಾಝ್‌ (Carlos Alcaraz) ಚೊಚ್ಚಲ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ

ಆಲ್ ಇಂಗ್ಲೆಂಡ್ ಟೆನ್ನಿಸ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ಭಾನುವಾರ (ಜುಲೈ 16) ನಡೆದ ಹೈ-ವೋಲ್ಟೇಜ್ ಕಣದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದರೂ, 20 ವರ್ಷದ ಯುವ ತಾರೆ ಕಾರ್ಲೊಸ್‌ ಅಲ್ಕರಾಝ್‌, 1-6, 7-6 (8-6), 6-1, 3-6, 6-4 ಅಂತರದ 5 ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ ಟೆನಿಸ್ ಲೋಕದ ದಿಗ್ಗಜ ನೊವಾಕ್ ಜೊಕೋವಿಕ್ ವಿರುದ್ಧ ಗೆಲುವು ಸಾಧಿಸಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಇದು ಕಾರ್ಲೊಸ್‌ ಗೆದ್ದ 2ನೇ ಗ್ರ್ಯಾಂಡ್‌ ಸ್ಲ್ಯಾಮ್‌ ಟ್ರೋಫಿಯಾಗಿದೆ. ಈ ಹಿಂದೆ 2022 ಯುಎಸ್‌ ಓಪನ್‌ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಗ್ರ್ಯಾಂಡ್‌ ಸ್ಲ್ಯಾಮ್‌ ಕಿರೀಟ ಜಯಿಸಿದ್ದರು.

ಬರೋಬ್ಬರಿ 4 ಗಂಟೆ 42 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಗೆಲುವಿನ ಸಂಭ್ರಮ ಕಂಡು ವಿಂಬಲ್ಡನ್ ಮುಕುಟ ಗೆದ್ದ ಕಾರ್ಲೊಸ್‌ ಅಲ್ಕರಾಝ್‌ ವಿಶ್ವದ ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳುವುದರ ಜೊತೆಗೆ 2003ರ ಬಳಿಕ ಟೆನ್ನಿಸ್‌ ಲೋಕದ ದಿಗ್ಗಜರಾದ ರೋಜರ್ ಫೆಡರರ್, ರಫಾಲ್ ನಡಾಲ್, ನೊವಾಕ್ ಜೊಕೋವಿಕ್, ಆಂಡಿ ಮರ್ರೆ ನಂತರ ವಿಂಬಲ್ಡನ್ ಗೆದ್ದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಇದನ್ನೂ ಓದಿ: Wimbledon 2023ː ಮಹಿಳಾ ಸಿಂಗಲ್ಸ್‌ ಗೆದ್ದು ಇತಿಹಾಸ ಬರೆದ ವಾಂಡ್ರೊಸೊವಾ

ನೊವಾಕ್ ಜೊಕೊವಿಕ್‌ ವಿಂಬಲ್ಡನ್‌ನಲ್ಲಿ ಸತತ 5 ಬಾರಿ ಗ್ರಾಂಡ್ ಸ್ಲಾಮ್ ಪ್ರಶಸ್ತಿ (Grand Slam Crown) ಗೆದ್ದಿದ್ದಾರೆ. ಆದ್ರೆ ಕಳೆದ 10 ವರ್ಷಗಳಿಂದ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರ ನಾಗಿದ್ದ ಆರ್ಭಟಿಸಿದ್ದ ಜೊಕೊವಿಕ್, ವಿಂಬಲ್ಡನ್ ಫೈನಲ್ ನಲ್ಲಿ ಕಾರ್ಲೊಸ್‌ ಅಲ್ಕರಾಝ್‌ ವಿರುದ್ಧ ಸೋತು ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಅವರ ಸತತ 7 ಬಾರಿ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ದಾಖಲೆ ಮುರಿಯುವ ಅವಕಾಶ ಕೈಚೆಲ್ಲಿಕೊಂಡಿದ್ದಾರೆ. ಇದನ್ನೂ ಓದಿ: Test Cricketː ನಂ.1 ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಭಾರತ!

ಬಾಯ್ತುಂಬ ಹೊಗಳಿದ ಜೊಕೊವಿಕ್‌:
ವಿಂಬಲ್ಡನ್‌ ಫೈನಲ್‌ನಲ್ಲಿ ಸೋತ ಬಳಿಕ ಮಾತನಾಡಿದ ಜೊಕೊವಿಕ್‌, ಅಲ್ಕರಾಝ್‌ನನ್ನ ಬಾಯ್ತುಂಬ ಹೊಗಳಿದ್ದಾರೆ. ನನ್ನ ವೃತ್ತಿಬದುಕಿನಲ್ಲಿ ಕಾರ್ಲೊಸ್‌ ಅಲ್ಕರಾಝ್‌ ಮಾದರಿಯ ಆಟಗಾರ ಎದುರಾಗೇ ಇಲ್ಲ ಎಂದು ಗುಣಗಾನ ಮಾಡಿದ್ದಾರೆ. ಕಾರ್ಲೊಸ್‌ ಅಲ್ಕರಾಝ್‌ ಅವರಲ್ಲಿ ರೋಜರ್‌ ಫೆಡರರ್‌, ರಾಫೆಲ್‌ ನಡಾಲ್ ಮತ್ತು ನನ್ನ ಆಟದ ಸಮ್ಮಿಶ್ರಣ ಕಾಣಬಹುದು ಅಂತಾ ಚರ್ಚೆಯಾಗುತ್ತಿದೆ. ಇದನ್ನ ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಕಾರ್ಲೊಸ್‌ ಪರಿಪೂರ್ಣ ಆಟಗಾರ. ನನ್ನ ವೃತ್ತಿಬದುಕಿನಲ್ಲಿ ಇಂತಹ ಒಬ್ಬ ಆಟಗಾರನನ್ನ ನೋಡಿಯೇ ಇರಲಿಲ್ಲ. ಅವರು ನಿಜಕ್ಕೂ ಒಬ್ಬ ಪರಿಪೂರ್ಣ ಆಟಗಾರನಾಗಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.

ಇದೇ ವೇಳೆ ಅಲ್ಕರಾಝ್‌ ಸಹ ಮಾತನಾಡಿದ್ದು, ಜೊಕೊವಿಕ್‌ನನ್ನ ಹೊಗಳಿದ್ದಾರೆ. ನಾನು ನಿಮ್ಮನ್ನು ನೋಡುತ್ತಲೇ ಟೆನ್ನಿಸ್‌ ಆಟ ಕಲಿತೆ. ನಾನು ಹುಟ್ಟಿದಾಗಿನಿಂದಲೂ ನೀವು ಹಲವು ಪಂದ್ಯಗಳನ್ನ ಗೆದ್ದಿದ್ದೀರಿ. ನಿಜಕ್ಕೂ ಅವೆಲ್ಲವೂ ಅದ್ಭುತ ಎಂದು ಅಭಿನಂದಿಸಿದ್ದಾರೆ. ಅತಿಹೆಚ್ಚು ಬಾರಿ ಗ್ರ್ಯಾನ್‌ಸ್ಲಾನ್‌ ಗೆದ್ದ ರಫಾಲ್‌ ನಡಾಲ್ ಕೂಡ ಅಲ್ಕರಾಝ್‌ಗೆ ಅಭಿನಂದನೆ ಸಲ್ಲಿಸಿ ಟ್ವೀಟ್‌ ಮಾಡಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್