ನಟೋರಿಯಸ್ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ

By
1 Min Read

ಬೆಂಗಳೂರು: ಬೆಂಗಳೂರು (Bengaluru) ದಕ್ಷಿಣ ವಿಭಾಗದ ನಟೋರಿಯಸ್ ರೌಡಿಯಾಗಿದ್ದ ಅಲ್ಯೂಮಿನಿಯಂ ಬಾಬು ತಮಿಳುನಾಡಿನ (Tamil Nadu) ಕೃಷ್ಣಗಿರಿ ಸಮೀಪ ಹತ್ಯೆಯಾಗಿದ್ದಾನೆ.

ಜಯನಗರ (Jayanagar) ಠಾಣೆ ರೌಡಿಶೀಟರ್ ಆಗಿದ್ದ ಅಲ್ಯೂಮಿನಿಯಂ ಬಾಬು ಅಲಿಯಾಸ್ ಸುರೇಶ್ ಬಾಬು ಇತ್ತೀಚಿಗೆ ತಮಿಳುನಾಡು ಕಡೆ ವಾಸ್ತವ್ಯ ಹೂಡಿದ್ದ. ಕೊಲೆ, ಸುಲಿಗೆ, ಬೆದರಿಕೆ, ದರೋಡೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ತಿಲಕ್‌ನಗರ ಜಲ್ಲಿ ವೆಂಕಟೇಶ್ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಇದನ್ನೂ ಓದಿ: ರಾಯಚೂರಿನಲ್ಲಿ ಮೊಸಳೆ ದಾಳಿಗೆ ಬಾಲಕ ಬಲಿ – ಮೃತದೇಹಕ್ಕಾಗಿ ಹುಡುಕಾಟ

ಶನಿವಾರ ರಾತ್ರಿ ಈತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರ ಹತ್ಯೆಗೈಯಲಾಗಿದೆ. ಈತನ ಮೃತದೇಹ ಡೆಂಕಣಿಕೋಟೆ ಸಮೀಪದ ಕಾಡಿನಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹತ್ಯೆ ನಡೆಸಿ ಶವ ಕಾಡಿನಲ್ಲಿ ಎಸೆದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ತಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಯುವಕನ ಹತ್ಯೆ ಪ್ರಕರಣ – ಇಬ್ಬರ ಬಂಧನ

Share This Article