– ತಮ್ಮ ಮೂಲಮಠ ಮಹಾರಾಷ್ಟ್ರದ ಕನ್ನೇರಿಗೆ ತೆರಳಿದ ಸ್ವಾಮೀಜಿ
ಬಾಗಲಕೋಟೆ/ವಿಜಯಪುರ: ಮಹಾರಾಷ್ಟ್ರದ ಕೊಲ್ಜಾಪುರದ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ (Adrushya Kadhsiddheshwar Swamiji) ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ವಿಚಾರ ಇದೀಗ ಮತ್ತಷ್ಟು ಜಟಿಲಗೊಂಡಿದೆ. ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಸ್ವಾಮಿಜಿಗಳಿಗೆ ಹಿನ್ನಡೆ ಆಗಿದೆ. ಇದರ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯಲ್ಲೂ ನಿರ್ಬಂಧ ಹೇರಲಾಗಿದೆ.
ಹೌದು. ಮಹಾರಾಷ್ಟ್ರದಲ್ಲಿ ಬಸವ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿದ್ದ ವೇಳೆ ಲಿಂಗಾಯತ ಧರ್ಮದ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಬಾಗಲಕೋಟೆಯ ಬೀಳಗಿ ತಾಲೂಕಿನಲ್ಲಿರೋ ಕನ್ನೇರಿ ಶ್ರೀಗಳಿಗೆ ನಿನ್ನೆ ಜಿಲ್ಲೆ ತೊರೆಯುವಂತೆ ನೋಟಿಸ್ ನೀಡಲಾಗಿದೆ. ಈ ಬೆನ್ನೆಲ್ಲೇ ಇಂದು ನಸುಕಿನ ಜಾವವೇ ಕನ್ನೇರಿ ಸ್ವಾಮೀಜಿ. ತಮ್ಮ ಮೂಲಮಠ ಮಹಾರಾಷ್ಟ್ರದ ಕನ್ಹೇರಿಗೆ ತೆರಳಿದ್ದಾರೆ. ಇದನ್ನೂ ಓದಿ: ಬೆಳಗಾವಿ | ಪ್ರೀತಿಸಿ ಮದ್ವೆಯಾದ, ವಿಚ್ಛೇದನ ಪಡೆದು ಮಾಜಿ ಪತ್ನಿ ಕೊಂದ ಪೊಲೀಸಪ್ಪ
ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಎರಡು ದಿನದಿಂದ ವಾಸವಿದ್ದ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ಕಾನೂನು ಸವ್ಯವಸ್ಥೆ ಹದಗೆಡುವ ಸಾಧ್ಯತೆ ಹಿನ್ನೆಲೆ. ಜಿಲ್ಲೆಯಲ್ಲಿ ಇರಬಾರದು ಎಂದು ನೊಟೀಸ್ ನೀಡಲಾಗಿತ್ತು. ಈ ಬೆನ್ನಲೇ ಶ್ರೀಗಳು ನಿಮ್ಮ ಮೂಲ ಜಾಗಕ್ಕೆ ತೆರಳಿ ಎಂದು ನೊಟೀಸ್ ನೀಡಲಾಗಿತ್ತು. ತಮ್ಮ ಮೂಲಮಠ ಮಹಾರಾಷ್ಟ್ರದ ಕನ್ನೇರಿಗೆ ಹೋಗಿದ್ದಾರೆ. ಇದನ್ನೂ ಓದಿ: ಮುಂದಿನ ಸಿಎಂ ಸತೀಶಣ್ಣನೇ ಆಗ್ಲಿ – ಜಾರಕಿಹೊಳಿ ಪರ ಬ್ಯಾಟ್ ಬೀಸಿದ ರಾಜು ಗೌಡ