ಶಬ್ದ ಮಾಲಿನ್ಯ ನಿಯಮ ಪಾಲಿಸದ ಮಂದಿರ, ಮಸೀದಿ, ಚರ್ಚ್‍ಗಳಿಗೆ ನೋಟಿಸ್

Public TV
1 Min Read

ಬೆಂಗಳೂರು: ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಶಬ್ದ ಮಾಲಿನ್ಯ ನಿಯಮ ಪಾಲಿಸದ ದೇವಸ್ಥಾನ, ಮಸೀದಿ, ಚರ್ಚ್‍ಗಳಿಗೆ ಈಗಾಗಲೇ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ.

ರಾಜ್ಯ ರಾಜಧಾನಿಯಲ್ಲಿ ಶಬ್ದ ಮಾಲಿನ್ಯದ ನಿಗಮಗಳನ್ನು ಪಾಲಿಸದೇ ಅನೇಕರು ದೇವಸ್ಥಾನ, ಮಸೀದಿ ಹಾಗೂ ಚರ್ಚ್‍ಗಳು ಧ್ವನಿವರ್ಧಕಗಳನ್ನು ಬಳಸುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲಾ ಡಿವಿಷನ್‍ಗಳ ಧಾರ್ಮಿಕ ಸ್ಥಳಗಳಿಗೆ ಪೊಲೀಸ್ ಇಲಾಖೆ ನೋಟಿಸ್ ಜಾರಿಗೊಳಿಸಿವೆ.

ಬೆಂಗಳೂರಿನ ಒಟ್ಟು 125 ಮಸೀದಿ, 83 ದೇವಸ್ಥಾನ, 22 ಚರ್ಚ್‍ಗಳಿಗೆ ನೋಟಿಸ್ ಜಾರಿಯಾಗಿದೆ. ಫೆಬ್ರವರಿ ತಿಂಗಳಲ್ಲಿ ಒಟ್ಟಾರೆ 301 ಧಾರ್ಮಿಕ ಸ್ಥಳಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಅಷ್ಟೇ ಅಲ್ಲದೇ ಒಂದಷ್ಟು ಮಸೀದಿ ಹಾಗೂ ದೇವಸ್ಥಾನಗಳಿಗೆ ಖಡಕ್ ಸೂಚನೆಯನ್ನು ನೀಡಿದೆ. ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಬನವಾಸಿ ಮಧುಕೇಶ್ವರ ರಥೋತ್ಸವಕ್ಕೆ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ

ವಿಭಾಗವಾರು ಎಷ್ಟು?
ಪೂರ್ವ ವಿಭಾಗ – 14 ಮಸೀದಿ, 8 ದೇವಸ್ಥಾನ 3 ಚರ್ಚ್.
ಪಶ್ಚಿಮ ವಿಭಾಗ – 24 ಮಸೀದಿ, 2 ದೇವಸ್ಥಾನ, 1 ಚರ್ಚ್.
ಉತ್ತರ ವಿಭಾಗ – 32 ಮಸೀದಿ, 7 ದೇವಸ್ಥಾನ, 5 ಚರ್ಚ್.

ದಕ್ಷಿಣ ವಿಭಾಗ – 17 ಮಸೀದಿ, 34 ದೇವಸ್ಥಾನ, 4 ಚರ್ಚ್.
ಈಶಾನ್ಯ ವಿಭಾಗ – 21 ಮಸೀದಿ, 12 ದೇವಸ್ಥಾನ, 4 ಚರ್ಚ್.
ಆಗ್ನೇಯ ವಿಭಾಗ – 17 ಮಸೀದಿ, 20 ದೇವಸ್ಥಾನ, 5 ಚರ್ಚ್.

ರಾಜ್ಯದಲ್ಲಿ ಹಿಜಬ್ ಬಳಿಕ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರಿಗೆ ನಿಷೇಧ, ಹಲಾಲ್ ಕಟ್ ಅಭಿಯಾನ ಮಾಡಿದ್ದ ಹಿಂದೂ ಸಂಘಟನೆಗಳು ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಅಭಿಯಾನ ಆರಂಭಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಇರುವುದರಿಂದ ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕೆಲವು ಹಿಂದೂ ಸಂಘಟನೆಗಳು ಆರೋಪಿಸುತ್ತಿವೆ. ಇದನ್ನೂ ಓದಿ: ಜನಾಂಗ, ಧರ್ಮ, ಪಕ್ಷವನ್ನು ಬದಿಗಿರಿಸಿ ದೇಶಕ್ಕಾಗಿ ಒಂದಾಗಿ: ಮುತ್ತಯ್ಯ ಮುರುಳೀಧರನ್

Share This Article
Leave a Comment

Leave a Reply

Your email address will not be published. Required fields are marked *