ರಾಮೇಶ್ವರಂ ಕೆಫೆ ಅಲ್ಲ – ಐಟಿ ಕಂಪನಿ ಸ್ಫೋಟಿಸಲು ತಯಾರಿ ನಡೆಸಿದ್ದ ಉಗ್ರರು!

Public TV
1 Min Read

–  ದೇಶದ ಆರ್ಥಿಕತೆಗೆ ಪೆಟ್ಟು ಕೊಡಲು ಪ್ಲ್ಯಾನ್‌
– ಮಹಾದೇವಪುರ ವ್ಯಾಪ್ತಿಯಲ್ಲಿರುವ ಕಂಪನಿ ಸ್ಫೋಟಕ್ಕೆ ಸಂಚು

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದಲ್ಲಿ(Rameshwaram Cafe Blast) ಸೆರೆಯಾದ ಆರೋಪಿಗಳ ಟಾರ್ಗೆಟ್‌ ಬೇರೆಯದ್ದೇ ಆಗಿತ್ತು ಎಂಬ ಸ್ಫೋಟಕ ವಿಚಾರ ರಾಷ್ಟ್ರೀಯ ತನಿಖಾ ದಳದ(NIA) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹೌದು. ಆರೋಪಿಗಳು ರಾಜ್ಯದ ಆರ್ಥಿಕತೆಗೆ (Economy) ಪೆಟ್ಟು ಕೊಡಲು ಟಾರ್ಗೆಟ್ ಮಾಡಿದ್ದರು. ಆದರೆ ಈ ಗುರಿ ಕಷ್ಟವಾಗಿದ್ದ ಕಾರಣ ಕೊನೆಗೆ ರಾಮೇಶ್ವರಂ ಕೆಫೆಯನ್ನು ಆಯ್ಕೆ ಮಾಡಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.  ಇದನ್ನೂ ಓದಿ: ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಸ್ನೇಹ: ಏಳು ಬೀಳಿನ ಗೆಳೆತನ

ಕೋಲ್ಕತ್ತಾದಲ್ಲಿ ಸೆರೆಸಿಕ್ಕ ಅಬ್ದುಲ್ ಮತಿನ್ ತಾಹ ಹಾಗೂ ಮುಸಾವಿರ್ ಹುಸೇನ್‌ನ ವಿಚಾರಣೆ ವೇಳೆ ಒಂದೊಂದೆ ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ಐಟಿ ಪಾರ್ಕ್‌ಗಳನ್ನು (IT Park) ಟಾರ್ಗೆಟ್‌ ಮಾಡಿದ್ದ ಆರೋಪಿಗಳು ದೊಡ್ಡ ಸಾಫ್ಟ್‌ವೇರ್‌ ಕಂಪನಿಯನ್ನು ಸ್ಫೋಟ ಮಾಡಲು ಆರಂಭದಲ್ಲಿ ಪ್ಲ್ಯಾನ್‌ ಮಾಡಿದ್ದರು. ಇದನ್ನೂ ಓದಿ: ಬೆಂಗಳೂರಿನ ಪ್ರತ್ಯೇಕ ಕಡೆ ಭರ್ಜರಿ ಬೇಟೆ; 5.20 ಲಕ್ಷ ನಗದು, 302 ಕುಕ್ಕರ್‌ ವಶಕ್ಕೆ

ಅದರಲ್ಲೂ ಮಹದೇವಪುರ ವಲಯದಲ್ಲಿ ಸಾಕಷ್ಟು ಐಟಿ ಕಂಪನಿಗಳಿದ್ದು ಯಾವುದಾದರೂ ಕಂಪನಿಯನ್ನು ಸ್ಫೋಟ ಮಾಡಿದರೆ ವಿದೇಶಿ ಬಂಡವಾಳ ಹೂಡಿಕೆದಾರರು (FDI) ಭಾರತಕ್ಕೆ (India) ಹೂಡಿಕೆ ಮಾಡಲು ಬರುವುದಿಲ್ಲ. ಇದರಿಂದಾಗಿ ದೇಶದ ಆರ್ಥಿಕತೆ ಕುಸಿಯುತ್ತದೆ ಎಂದು ಭಾವಿಸಿ ಐಟಿ ಕಂಪನಿ ಬಳಿ ಬಾಂಬ್‌ ಸ್ಫೋಟಿಸಲು ತಯಾರಿ ನಡೆಸಿದ್ದರು.

ಐಟಿ ಕಂಪನಿಗಳ ಬಳಿ ಸ್ಫೋಟಕ್ಕೆ ಸಂಚು ರೂಪಿಸಿದಾಗ ಅಲ್ಲಿ ಸಿಸಿಟಿವಿಗಳು ಇದೆ. ಭದ್ರತಾ ಸಿಬ್ಬಂದಿ ಇರುತ್ತಾರೆ. ಪಾರ್ಕ್‌ ಒಳಗಡೆ ಹೋಗಲು ಅಷ್ಟು ಸುಲಭವಾಗಿ ಸಾಧ್ಯವಾಗುವುದಿಲ್ಲ ಎಂಬುದನ್ನು ಅತ ಅವರು ಈ ಪ್ಲ್ಯಾನ್‌ ಕೈ ಬಿಟ್ಟು ಟೆಕ್ಕಿಗಳು ಹೆಚ್ಚು ಸೇರುವ ಜಾಗವನ್ನು ಟಾರ್ಗೆಟ್‌ ಮಾಡಿದ್ದರು. ಅಂತಿಮವಾಗಿ ಇವರು ಬೆಂಗಳೂರಿನ ಕುಂದಲಹಳ್ಳಿಯ ಬ್ರೂಕ್‌ಫೀಲ್ಡ್‌  ಬಳಿ ಇರುವ ರಾಮೇಶ್ವರಂ ಕೆಫೆಯನ್ನು ಆಯ್ಕೆ ಮಾಡಿ ಬಾಂಬ್‌ ಸ್ಫೋಟ ಮಾಡಿದ್ದಾರೆ ಎಂಬ ವಿಚಾರ ಎನ್‌ಐಎ ಮೂಲಗಳಿಂದ ತಿಳಿದು ಬಂದಿದೆ.

 

Share This Article