ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲ್ಲ: ಸಚಿವ ಮನ್ಸುಖ್ ಮಾಂಡವಿಯಾ

By
2 Min Read

– ಬಿಸಿಸಿಐಗೂ ಕ್ರೀಡಾ ಮಸೂದೆ ಕಡ್ಡಾಯ

ಮುಂಬೈ: ಭಾರತ ಯಾವುದೇ ಕಾರಣಕ್ಕೂ ಪಾಕಿಸ್ತಾನದ (Ind vs Pak Match) ಜೊತೆಗೆ ದ್ವಿಪಕ್ಷೀಯ ಸರಣಿಯನ್ನಾಡುವುದಿಲ್ಲ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಇಂಡೋ ಪಾಕ್‌ ಸರಣಿ, ಬಿಸಿಸಿಐಗೆ (BCCI) ಕ್ರೀಡಾ ಮಸೂದೆ ಅನ್ವಯವಾಗುವ ವಿಷಯಗಳನ್ನ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಟೆಸ್ಟ್‌ ಕ್ಯಾಪ್ಟನ್‌ ಗಿಲ್‌ಗೆ ಅನಾರೋಗ್ಯ – ಏಷ್ಯಾಕಪ್‌ ಟೂರ್ನಿಗೆ ಅಯ್ಯರ್‌ಗೆ ಸಿಗುತ್ತಾ ಚಾನ್ಸ್‌?

ಭಾರತ-ಪಾಕ್‌ ಪಂದ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ನಾವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡುತ್ತಿಲ್ಲ. ಅಂತಾರಾಷ್ಟ್ರೀಯ ಸರಣಿಗಳಲ್ಲಿ ಮಾತ್ರವೇ ಆಡಲಾಗುತ್ತಿದೆ. ಏಕೆಂದ್ರೆ ಐಸಿಸಿ ನಿಯಮವನ್ನು ಗೌರವಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಅಯ್ಯರ್ ಒನ್‌ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

ಮುಂದುವರಿದು.. ಕ್ರೀಡಾ ಮಸೂದೆ (Sports Bill) ಅಡಿಯಲ್ಲಿ ವೀಸಾಗಳನ್ನು ಸಕಾಲಿಕವಾಗಿ ನೀಡುವುದು ಮೂಲ ನಿಯಮವಾಗಿದೆ. ಹಾಗಾಗಿ ಯಾವುದೇ ದೇಶವು ಮತ್ತೊಂದು ರಾಷ್ಟ್ರದ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸಲು ಸಾಧ್ಯವಿಲ್ಲ. ಅಲ್ಲದೇ ವಿಶ್ವ ದರ್ಜೆಯ, ಎಲ್ಲಾ ಸೌಲಭ್ಯಗಳೊಂದಿಗೆ ಭಾರತವನ್ನ ಜಾಗತಿಕ ಕ್ರೀಡಾ ಕೇಂದ್ರವಾಗಿ ಸ್ಥಾಪಿಸುವುದು, ಇತರ ರಾಷ್ಟ್ರಗಳು ದೇಶದಲ್ಲಿ ಟೂರ್ನಿ ಆಯೋಜಿಸಲು ಪ್ರೋತ್ಸಾಹಿಸುವುದು ಸರ್ಕಾರ ಗುರಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಇನ್ನೂ ಕ್ರೀಡಾ ಮಸೂದೆ ಕುರಿತು ಮಾತನಾಡಿ, ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದ ಹೊಸದಾಗಿ ಪರಿಚಯಿಸಲಾದ ಕ್ರೀಡಾ ಮಸೂದೆಯು ಐತಿಹಾಸಿಕ ಮತ್ತು ಪರಿವರ್ತನಾತ್ಮಕ ಶಾಸನವಾಗಿದೆ. 1985 ರಿಂದ ಇಂತಹ ಮಸೂದೆಗೆ ಕರಡು ಅಸ್ತಿತ್ವದಲ್ಲಿದ್ದರೂ, ಇದು ಶಾಸನ ಆಗಿರಲಿಲ್ಲ. ಭಾರತವು ಮುಂದೆ ಒಲಿಂಪಿಕ್ಸ್‌ಗೆ ಬಿಡ್‌ ಮಾಡ್ತಿರೋದ್ರಿಂದ ಈ ಮಸೂದೆ ಐತಿಹಾಸಿಕ ಕೂಡ ಆಗಿದೆ ಎಂದು ತಿಳಿದ್ದಾರೆ. ಇದನ್ನೂ ಓದಿ: ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಅರ್ಜೆಂಟಿನಾದ ಫುಟ್‌ಬಾಲ್ ಆಟಗಾರ ಮೆಸ್ಸಿ

ಅಲ್ಲದೇ, ಹೊಸ ಕ್ರೀಡಾ ಮಸೂದೆ ಅಡಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೇರಿದಂತೆ ಎಲ್ಲಾ ಕ್ರೀಡಾ ಒಕ್ಕೂಟಗಳು ಹೊಸ ಕ್ರೀಡಾ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಎಂದರಲ್ಲದೇ ಭವಿಷ್ಯದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಅನ್ನು ಹೊಸ ಕ್ರೀಡಾ ಮಂಡಳಿಯಲ್ಲಿ ವಿಲೀನಗೊಳಿಸುವ ಯೋಜನೆಯನ್ನು ಸಹ ಪ್ರಸ್ತಾಪಿಸಿದ್ದಾರೆ.

Share This Article