ಧಾರವಾಡ: ವಾಯುವ್ಯ ಸಾರಿಗೆ ನಿಗಮಕ್ಕೆ ಸೇರಿದ ಬಾಗಲಕೋಟೆ-ಹುಬ್ಬಳ್ಳಿ ಬಸ್ ಪಲ್ಟಿಯಾದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬೆಣ್ಣೆಹಳ್ಳದ ಬಳಿ ನಡೆದಿದೆ.
30 ಜನ ಪ್ರಯಾಣಿಸುತ್ತಿದ್ದ ಬಸ್‍ನಲ್ಲಿ 20 ಮಂದಿಗೆ ಗಂಭೀರ ಗಾಯವಾಗಿದೆ. ಬಸ್ ಬಾಗಲಕೋಟೆಯಿಂದ ಹುಬ್ಬಳ್ಳಿ ಕಡೆ ಸಂಚರಿಸುತ್ತಿದ್ದು, ಸ್ಟೇರಿಂಗ್ ತುಂಡಾಗಿ ಪಲ್ಟಿಯಾಗಿದೆ. ಬಸ್ ರಸ್ತೆಯ ಪಕ್ಕದ ಹೊಲಕ್ಕೆ ನುಗ್ಗಿ, ಹಳ್ಳಕ್ಕೆ ಪಲ್ಟಿಯಾಗಿ ಬಿದ್ದಿದೆ. ಇದನ್ನೂ ಓದಿ: ಜೆಡಿಎಸ್‍ನಿಂದ ನೂತನ ಕೋರ್ ಕಮಿಟಿ ರಚನೆ- ಪಟ್ಟಿ ಬಿಡುಗಡೆ ಮಾಡಿದ ಹೆಚ್‍ಡಿಕೆ
ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ, ಗಾಯಾಳುಗಳನ್ನು ನವಲಗುಂದ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಕೆಲಸ ಇಲ್ಲ: ನಾರಾಯಣಗೌಡ