ಬೆಂಗಳೂರು: ಉತ್ತರ-ದಕ್ಷಿಣ ವಿವಾದ ತಣ್ಣಗಾಗಿಸಲು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದು, ಕೆಲವೊಂದು ಮಹತ್ವದ ಹುದ್ದೆಗಳ ನೇಮಕಾತಿಗೆ ಹೆಚ್‍ಡಿಕೆ ತೀರ್ಮಾನಿಸಿದ್ದಾರೆ.
ಉತ್ತರಕ್ಕೊಬ್ರು, ದಕ್ಷಿಣಕ್ಕೊಬ್ರು ರಾಜಕೀಯ ಕಾರ್ಯದರ್ಶಿ ನೇಮಿಸಲು ಸಿಎಂ ಯೋಜನೆ ಹಾಕಿದ್ದಾರೆ. ಉತ್ತರಕ್ಕೆ ಮಾಜಿ ಶಾಸಕ ಕೋನರೆಡ್ಡಿ, ದಕ್ಷಿಣಕ್ಕೆ ಪರಿಷತ್ ಸದಸ್ಯ ಶರವಣ ಅವರನ್ನು ನೇಮಕ ಮಾಡುವುದಾಗಿ ನಿರ್ಧರಿಸಿಲಾಗಿದೆ ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.
ಇದರಿಂದ ಎರಡು ಭಾಗದ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ. ರಾಜಕೀಯ ಕಾರ್ಯದರ್ಶಿ ಜೊತೆ ನಾಲ್ವರು ಸಂಸದೀಯ ಕಾರ್ಯದರ್ಶಿ ಹುದ್ದೆ ಭರ್ತಿಗೂ ನಿರ್ಧಾರ ಮಾಡಿದ್ದು, ಮುಸ್ಲಿಂ, ಲಂಬಾಣಿ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಒಂದೊಂದು ಸ್ಥಾನ ನೀಡಲು ಚಿಂತನೆ ನಡೆಸಲಾಗಿದೆ. ಮುಸ್ಲಿಂ ಸಮುದಾಯದಿಂದ ಜಫ್ರುಲ್ಲಾ ಖಾನ್, ಲಂಬಾಣಿ ಸಮುದಾಯದಿಂದ ರೇವುನಾಯಕ್ ಬೆಳಮಗಿ, ಬ್ರಾಹ್ಮಣ ಸಮುದಾಯದಿಂದ ವೈ.ಎಸ್.ವಿ.ದತ್ತಾ ನೇಮಕ ಬಹುತೇಕ ಖಚಿತವಾಗಿದೆ.
ಒಟ್ಟಿನಲ್ಲಿ ಜಾತಿ ಲೆಕ್ಕಾಚಾರದ ಜೊತೆ ಉತ್ತರ-ದಕ್ಷಿಣ ಸಮತೋಲನ ಕಾಯ್ದುಕೊಳ್ಳಲು ಹೆಚ್‍ಡಿಕೆ ರಣತಂತ್ರ ಹೂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.