ಬಾಲಿವುಡ್ ನಟಿ ನೋರಾ ಫತೇಹಿಗೆ ಕಂಟಕವೊಂದು ಎದುರಾಗಿದೆ. 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಜಾಕ್ವೆಲಿನ್ ವಿಚಾರಣೆಯ ನಂತರ ಇದೀಗ ನೋರಾ ಫತೇಹಿ ಅವರನ್ನ ಆರ್ಥಿಕ ಅಪರಾಧ ವಿಭಾಗ ವಿಚಾರಣೆಗೆ ಒಳಪಡಿಸಿದ್ದಾರೆ.

ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ (ಸೆ.3) ಶುಕ್ರವಾರ ಆರ್ಥಿಕ ಅಪರಾಧ ವಿಭಾಗ ನೋರಾ ಅವರನ್ನ 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇನ್ನು ವಿಚಾರಣೆಯ ವೇಳೆ ತಮಗೆ ಐಫೋನ್ ಮತ್ತು ಬಿಎಂಡಬ್ಲ್ಯೂ ಕಾರನ್ನ ಉಡುಗೊರೆ ಕೊಡುವುದಾಗಿ ಲೀನಾ ಹೇಳಿದ್ದರೆಂದು ವಿಚಾರಣೆಯ ವೇಳೆ ನೋರಾ ತಿಳಿಸಿದ್ದಾರೆ.

