ಸಿಂಪಲ್ಲಾಗಿ ಮಟನ್ ಕರಿ ಮಾಡಿ ನಾಲಿಗೆ ಚಪ್ಪರಿಸಿ!

By
1 Min Read

ರುಚಿಕರ ಆಹಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಮಾಂಸಾಹಾರ (Non Veg) ಪ್ರಿಯರಿಗೇನು ಕಡಿಮೆ ಇಲ್ಲ. ಅತಿಥಿಗಳು ಬಂದಾಗ ಅಥವಾ ನಾಲಿಗೆ ರುಚಿಯಾದ ಆಹಾರ ತಿನ್ನಲು ಬಯಸಿದಾಗ,  ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಖಾರವಾದ ಮಟನ್ ಕರಿಯನ್ನು (Mutton Curry) ತಯಾರಿಸಬಹುದಾಗಿದೆ. ಅದಕ್ಕೆ ಸಿಂಪಲ್ ಟಿಪ್ಸ್ ಇಲ್ಲಿದೆ…

ಬೇಕಾಗುವ ಸಾಮಗ್ರಿಗಳು:
* ಕುರಿ ಮಾಂಸ- 1 ಕೆಜಿ
* ಟೊಮೆಟೊ- 2
* ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಚಮಚ
* ಈರುಳ್ಳಿ- 2
* ಗರಂಮಸಾಲೆ- 1 ಚಮಚ
* ದನಿಯಾ ಪುಡಿ- 2 ಚಮಚ
* ಜೀರಿಗೆ ಪುಡಿ- 2 ಚಮಚ
* ಅರಿಸಿಣ- ಸ್ವಲ್ಪ
* ಖಾರದಪುಡಿ – 5 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ತೆಂಗಿನ ಎಣ್ಣೆ- ಅರ್ಧ ಕಪ್
* ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ:
* ಕುಕ್ಕರ್‌ಗೆ ಮಟನ್, ತೆಂಗಿನ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು 3 ರಿಂದ 4 ವಿಶಿಲ್ ಕೂಗಿಸಿ ಬೇಯಿಸಿಕೊಳ್ಳಿ.
* ಮಿಕ್ಸಿ ಜಾರಿಗೆ ಈರುಳ್ಳಿ, ಟೊಮೆಟೊ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿಕೊಳ್ಳಿ.
* ನಂತರ ಒಂದು ಬಾಣೆಲೆಗೆ ತೆಂಗಿನ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ರುಬ್ಬಿಕೊಂಡ ಈರುಳ್ಳಿ ಪೇಸ್ಟ್, ಗರಂಮಸಾಲೆ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಶಿಣ ಪುಡಿ, ಖಾರದಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
* ನಂತರ ಈ ಪಾತ್ರೆಗೆ ಈಗಾಗಲೇ ಬೇಯಿಸಿದ ಕುರಿ ಮಾಂಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಮಟನ್ ಕರಿ ಸವಿಯಲು ಸಿದ್ಧ.

Share This Article