MLC Nomination | ಮೇಲ್ಮನೆ ಸದಸ್ಯರಾಗಿ ರಮೇಶ್‌ಬಾಬು, ಆರತಿ ಕೃಷ್ಣ ಸೇರಿ ನಾಲ್ವರು ನಾಮನಿರ್ದೇಶನ

Public TV
1 Min Read

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ (Legislative Council) ಹಲವು ತಿಂಗಳಿಂದ ಖಾಲಿ ಇದ್ದ ಸ್ಥಾನಗಳಿಗೆ ನಾಲ್ವರನ್ನು ನಾಮನಿರ್ದೇಶನ (MLC Nomination) ಮಾಡಿ ರಾಜ್ಯ ಸರ್ಕಾರ ಭಾನುವಾರ (ಇಂದು) ಅಧಿಕೃತ ಆದೇಶ ಹೊರಡಿಸಿದೆ. ನಾಲ್ಕು ಎಂಎಲ್‌ಸಿ ಸ್ಥಾನಗಳ ನಾಮನಿರ್ದೇಶನ ಅನುಮೋದಿಸಿ ರಾಜ್ಯಪಾಲರು (Governor) ಅಂಕಿತ ಹಾಕಿದ್ದಾರೆ.

ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು (Ramesh Babu), ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ (Aarthi Krishna), ಹಿರಿಯ ಪತ್ರಕರ್ತ ಕೆ.ಶಿವಕುಮಾರ್‌ (K Shivakumar) ಮತ್ತು ದಲಿತ ಮುಖಂಡ ಎಫ್‌.ಹೆಚ್‌ ಜಕ್ಕಪ್ಪನವರ್ ಅವರನ್ನ ನಾಮ ನಿರ್ದೇಶನ ಮಾಡಲಾಗಿದೆ. ಇದನ್ನೂ ಓದಿ: ರೋಹಿತ್‌ ಬಳಿಕ 25 ವರ್ಷದ ಗಿಲ್‌ ಟೀಂ ಇಂಡಿಯಾಕ್ಕೆ ಕ್ಯಾಪ್ಟನ್‌?

ಮೂವರು 6 ವರ್ಷಗಳ ಅವಧಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದ್ರೆ ರಮೇಶ್‌ ಬಾಬು ಅವರ ಅಧಿಕಾರ ಅವಧಿ 2026ರ ಜುಲೈ 21ರ ವರೆಗೆ ಮಾತ್ರ ಇರಲಿದೆ. ಇದನ್ನೂ ಓದಿ: ಪ್ರತಾಪ್ ಸಿಂಹನನ್ನ ಬಿಜೆಪಿ ಕಿತ್ತು ಬಿಸಾಕಿದೆ, ಬದುಕಿದ್ದೀನಿ ಅಂತ ತೋರಿಸಿಕೊಳ್ಳೋಕೆ ಪ್ರಯತ್ನ: ಡಿಕೆಶಿ ಟಾಂಗ್

ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಕಾಂಗ್ರೆಸ್‌ ಯು.ಬಿ. ವೆಂಕಟೇಶ್ ಮತ್ತು ಪ್ರಕಾಶ್ ಕೆ. ರಾಥೋಡ್ ಅವರ ಅವಧಿ 2024ರ ಅಕ್ಟೋಬರ್‌ನಲ್ಲಿ ಮತ್ತು ಜೆಡಿಎಸ್‌ನ ಕೆ.ಎ ತಿಪ್ಪೇಸ್ವಾಮಿ ಅವರ ಅವಧಿ 2025ರ ಜನವರಿ ವೇಳೆಗೆ ಮುಕ್ತಾಯಗೊಂಡಿತ್ತು. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸಿ.ಪಿ. ಯೋಗೇಶ್ವ‌ರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸ್ಥಾನಗಳು ಖಾಲಿಯಾಗಿದ್ದವು. 7 ತಿಂಗಳ ಹಗ್ಗ ಜಗ್ಗಾಟದ ಬಳಿಕ ಸರ್ಕಾರ ನಾಮ ನಿರ್ದೇಶನ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಇದನ್ನೂ ಓದಿ: ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್; ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್: ಅಶೋಕ್ ಟೀಕೆ

Share This Article