ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರಿಯ ನೋಬೆಲ್ ಶಾಂತಿ ಪುರಸ್ಕೃತೆ ಮಲಾಲ

Public TV
1 Min Read

ನವದೆಹಲಿ: ತಮ್ಮ 17ನೇ ವಯಸ್ಸಿನಲ್ಲಿ ನೋಬೆಲ್ ಪ್ರಶಸ್ತಿಯನ್ನು ಬಾಚಿಕೊಂಡ ಮಲಾಲ ಯೂಸುಫ್ ಝಾಯಿ ಅವರು 24ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಸಿಹಿ ಸುದ್ದಿಯನ್ನು ಮಲಾಲ ಅವರು ತಮ್ಮ ಟ್ವಿಟ್ಟರ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ಮದುವೆಯಾದ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಅವರು, ಇಂದು ನನ್ನ ಜೀವನದಲ್ಲಿ ಅತ್ಯಂತ ಅಮೂಲ್ಯವಾದ ದಿನ. ಅಸ್ಸರ್ ಮತ್ತು ನಾನು ವೈವಾಹಿಕ ಜೀವನಕ್ಕೆ ಕಾಲಿಟ್ಟೆದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್ ಹ್ಯಾಮ್‍ನಲ್ಲಿರುವ ಮನೆಯಲ್ಲಿ ಸಣ್ಣಮಟ್ಟಕ್ಕೆ ನಿಖಾ ಸಮಾರಂಭವನ್ನು ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ. ಮುಂದಿನ ಪ್ರಯಾಣದಲ್ಲಿ ನಾವು ಒಟ್ಟಿಗೆ ನಡೆಯಲು ಬಯಸಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೇರಳ ಪೊಲೀಸರಿಂದ ಶೃಂಗೇರಿ ಮೂಲದ ನಕ್ಸಲರ ಬಂಧನ 

ಫೋಟೋಗಳಲ್ಲಿ ತಮ್ಮ ಪತಿ ಅಸ್ಸರ್ ಮತ್ತು ಅವರ ಪೋಷಕರು ಜಿಯಾವುದ್ದೀನ್ ಯೂಸುಫ್ ಝಾಯಿ ಮತ್ತು ತೂರ್ ಪೆಕೈ ಯೂಸುಫ್ ಝಾಯಿ ಅವರೊಂದಿಗೆ ಪೋಸ್ ನೀಡುವುದನ್ನು ಕಾಣಬಹುದಾಗಿದೆ. ಫೋಟೋಗಳನ್ನು ಮಲಾಲ ಸ್ನೇಹಿತ, ಛಾಯಾಗ್ರಾಹಕ ಮತ್ತು ದೃಶ್ಯ ಪತ್ರಕರ್ತರಾದ ಮಲಿನ್ ಫೆಜೆಹೈ ಅವರು ಸೆರೆಹಿಡಿದಿದ್ದಾರೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ

ತಮ್ಮ ಬಾಳಸಂಗಾತಿಯ ಹೆಸರನ್ನು ಬಿಟ್ಟರೆ ಅವರ ಬಗ್ಗೆ ಬೇರೆ ಯಾವುದೇ ಮಾಹಿತಿಯನ್ನು ಮಲಾಲ ಬಿಟ್ಟುಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನೆಟ್ಟಿಗರು ತಿಳಿದುಕೊಳ್ಳಲು ಯತ್ನಿಸಿದಾಗ ಅವರು ಲಾಹೋರ್ ಮೂಲದ ಅಸ್ಸರ್ ಮಲಿಕ್, ಪಾಕಿಸ್ತಾನದ ಬೋರ್ಡ್ ಹೈ ಪರ್ಫೋಮೆನ್ಸ್ ಸೆಂಟರ್ ನ ಜೆನೆರಲ್ ಮ್ಯಾನೇಜರ್ ಎಂದು ತಿಳಿದುಬಂದಿದೆ.

ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕರ್ತೆ, 24 ವರ್ಷದ ಮಲಾಲ ಯೂಸುಫ್ ಝಾಯಿ ಅವರು ಇತಿಹಾಸದಲ್ಲಿ ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾಗಿದ್ದಾರೆ. ಮಹಿಳೆಯರಿಗೆ ಶಿಕ್ಷಣವನ್ನು ವಿರೋಧಿಸಿದಾಗ ತಾಲಿಬಾನ್ ಉಗ್ರರ ವಿರುದ್ಧ ಧ್ವನಿ ಎತ್ತಿದ್ದು, 2012ರಲ್ಲಿ ತನ್ನ ತಲೆಗೆ ಗುಂಡು ಹೊಕ್ಕಿದರೂ ಬದುಕಿ ಬಂದ ಛಲಗಾರ್ತಿ ಮಲಾಲ.

Share This Article
Leave a Comment

Leave a Reply

Your email address will not be published. Required fields are marked *