ಹಮಾಸ್ ಉಗ್ರರ ಕಪಿಮುಷ್ಠಿಯಲ್ಲಿರೋ ನೋವಾಗೆ 26ನೇ ವರ್ಷದ ಹುಟ್ಟುಹಬ್ಬ- ತಾಯಿ ಹೇಳಿದ್ದೇನು?

Public TV
1 Min Read

ಟೆಲ್ ಅವೀವ್: ಇಸ್ರೇಲ್- ಪ್ಯಾಲೆಸ್ಟೈನ್ (Isreal- Palestine) ನಡುವಿನ ರಕ್ತಪಾತ ಮುಂದುವರಿದಿದೆ. ಈ ಮಧ್ಯೆ ಹಮಾಸ್ (Hamas) ಉಗ್ರರ ಕಪಿಮುಷ್ಠಿಯಲ್ಲಿರುವ ಯುವತಿಗೆ ಇಂದು (ಗುರುವಾರ) 26 ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ತಂದೆ-ತಾಯಿ ಶುಭ ಕೋರಿದ್ದಾರೆ.

ಹೇಗಾದರೂ ಈ ಸಂದೇಶಗಳು ಅವಳನ್ನು ತಲುಪಬಹುದು ಎಂಬ ಭರವಸೆಯೊಂದಿಗೆ ನಾವೆಲ್ಲರೂ ಅವಳ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇವೆ ಎಂದು ಭಾವುಕರಾಗಿದ್ದಾರೆ.

ಈ ವಿಚಾರವನ್ನು ಇಸ್ರೇಲ್ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ದಯವಿಟ್ಟು ಶೇರ್ ಮಾಡಿ ಎಂದು ಬರೆದುಕೊಂಡಿದೆ. ಸಂಗೀತೋತ್ಸವದ ಸಂದರ್ಭದಲ್ಲಿ ಹಮಾಸ್ ಉಗ್ರರು ಆಕೆಯನ್ನು ನೋಡ  ನೋಡುತ್ತಿದ್ದಂತೆಯೇ ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿದೆ. ಸದ್ಯ ನೋವಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಲ್ಲದೆ ಆದಷ್ಟು ಬೇಗ ನಿಮ್ಮ ಕುಟುಂಬವನ್ನು ಸೇರಿಕೊಳ್ಳುವಂತಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನ ರೇಪ್‌ ಮಾಡ್ತಿದ್ದಾರೆ, ಮಕ್ಕಳನ್ನ ಕೊಲ್ತಿದ್ದಾರೆ- ಹಮಾಸ್‌ ಉಗ್ರರ ಕರಾಳ ಮುಖ ಬಿಚ್ಚಿಟ್ಟ ಭಾರತದ ಇಸ್ರೇಲ್‌ ಮಹಿಳೆ

ಇಸ್ರೇಲ್‍ನಲ್ಲಿ ಫೀಸ್ ಮ್ಯೂಸಿಕ್ ಹಬ್ಬ ನಡೆಯುತ್ತಿತ್ತು. ಈ ಹಬ್ಬದಲ್ಲಿ ಯುವತಿ ನೋವಾ ಭಾಗಿಯಾಗಿದ್ದಳು. ಅಲ್ಲಿಂದ ಹಮಾಸ್ ಉಗ್ರರು ಆಕೆಯನ್ನು ಕಿಡ್ನಾಪ್ ಮಾಡಿ ಇಸ್ರೇಲ್‍ನಿಂದ ಗಾಜಾಕ್ಕೆ ಎಳೆದುಕೊಂಡು ಹೋಗಿ, ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ವೀಡಿಯೋ ನೋಡಿದ ಅನೇಕರು, ಇವರಿಗೆ ನೈತಿಕತೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‍ಗಾಗಿ ಪ್ರಾರ್ಥಿಸುವಂತೆ ಅನೇಕರು ಮನವಿ ಮಾಡಿದ್ದಾರೆ. ಮಹಿಳೆ ಮಕ್ಕಳ ಮೇಲೆ ಈ ರೀತಿಯ ವರ್ತನೆ ಸರಿಯಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಡಿಯೋದಲ್ಲೇನಿದೆ..?: ಹಮಾಸ್ ಉಗ್ರರು ಯುವತಿಯನ್ನು ಅಪಹರಿಸಿ ಬೈಕಿನಲ್ಲಿ ಮಧ್ಯದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಯುವತಿ ನನ್ನನ್ನು ಕೊಲೆ ಮಾಡಬೇಡಿ, ನನ್ನನ್ನು ಕಾಪಾಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುವ ದೃಶ್ಯವನ್ನು ಕೂಡ ನಾವು ಕಾಣಬಹುದಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್