ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ: ಪ್ರಧಾನಿ ಪತ್ರ ಸ್ವೀಕರಿಸಿದ ಬ್ರೆಟ್ ಲೀ

Public TV
1 Min Read

ಕ್ಯಾನ್‍ಬೆರಾ: ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಸೋಶಿಯಲ್ ಮೀಡಿಯಾದಲ್ಲಿ ಭಾರತದ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಭಾರತದ 73ನೇ ಗಣರಾಜ್ಯೋತ್ಸವದ ಅಂಗವಾಗಿ ಬ್ರೆಟ್ ಲೀ ಅವರಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಬ್ರೆಟ್ ಲೀ ಸ್ವೀಕರಿಸಿದ್ದು, ಪತ್ರದ ಫೋಟೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ನಲ್ಲಿ ಬ್ರೆಟ್ ಲೀ, ನಾನು ಭಾರತವನ್ನು ಮತ್ತು ಅಲ್ಲಿನ ಜನರನ್ನು ಎಷ್ಟು ಪ್ರೀತಿಸುತ್ತೇನೆ. ಈ ಸುಂದರವಾದ ದೇಶವನ್ನು ನಾನು ಆನಂದಿಸಿದ್ದೇನೆ. ಭಾರತ ಮತ್ತು ನನ್ನ ಸಂಬಂಧ ಇಷ್ಟು ವರ್ಷ ಕಳೆಯಲು ಸಾಧ್ಯವಾಗಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಾನು ಭಾರತವನ್ನು ಇಷ್ಟಪಡುತ್ತೇನೆ ಎಂಬುದು ರಹಸ್ಯವಲ್ಲ ಎಂದು ಬರೆದಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

ಭಾರತದ 73ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ಪ್ರಪಂಚದಾದ್ಯಂತ ಪ್ರಮುಖ ಕ್ರಿಕೆಟ್ ಆಟಗಾರರಾದ ಮ್ಯಾಥ್ಯೂ ಹೇಡನ್, ಜಾಂಟಿ ರೋಡ್ಸ್, ಕ್ರಿಸ್ ಗೇಲ್ ಮತ್ತು ಕೆವಿನ್ ಪೀಟರ್ಸನ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಅವರೆಲ್ಲ ಸ್ವೀಕರಿಸಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ದಿಗ್ಗಜರ ಪೈಕಿ, ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಕೂಡ ಮೋದಿ ಅವರಿಂದ ಅಭಿನಂದನಾ ಪತ್ರವನ್ನು ಸ್ವೀಕರಿಸಿದ್ದರು. ಈ ಪತ್ರ ಕಳಿಸಿದ್ದಕ್ಕೆ ಮೋದಿ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಅಣ್ಣಂದಿರ ಕೈ ಮೇಲೆ ಪಾದವಿಟ್ಟು ಮದುವೆ ಮಂಟಪಕ್ಕೆ ನಡೆದುಕೊಂಡು ಬಂದ ವಧು!

ಬ್ರೆಟ್ ಲೀ ಅವರಿಗೆ ಬರೆದ ಪತ್ರದಲ್ಲಿ ಮೋದಿ ಅವರು, ಭಾರತದ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತವು ಈ ವರ್ಷ ಬ್ರಿಟಿಷ್ ಆಳ್ವಿಕೆಯಿಂದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ ಎಂದು ತಿಳಿಸಿದ್ದು, ನಮ್ಮ ರಾಷ್ಟ್ರದ ಬಗೆಗಿನ ನಿಮ್ಮ ಪ್ರೀತಿಗಾಗಿ ಕೃತಜ್ಞತಾ ಭಾವದಿಂದ ಈ ಪತ್ರವನ್ನು ಬರೆಯಲು ನಿರ್ಧರಿಸಿದ್ದೇನೆ ಎಂದು ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *