IPL Retention | ರಿಷಬ್‌ ಪಂತ್‌ ಸೇರಿ ಸ್ಟಾರ್‌ ಆಟಗಾರರೇ ಔಟ್‌ – ಆಲ್‌ರೌಂಡರ್‌ಗೆ ಮಣೆ ಹಾಕಿದ ಡೆಲ್ಲಿ

Public TV
2 Min Read

ಮುಂಬೈ: 2025ರ ಐಪಿಎಲ್‌ ಆವೃತ್ತಿಗಾಗಿ ಉಳಿಕೆ ಆಟಗಾರರ ಪಟ್ಟಿ ರಿಲೀಸ್‌ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿಯು ನಾಯಕ ರಿಷಭ್‌ ಪಂತ್‌ (Rishabh Pant) ಸೇರಿ ಹಲವು ಸ್ಟಾರ್‌ ಆಟಗಾರರನ್ನೇ ಹೊರಗಿಟ್ಟು, ಆಲ್‌ರೌಂಡರ್‌ ಹಾಗೂ ಬೌಲರ್‌ಗಳಿಗೆ ಮಣೆಹಾಕಿದೆ.

ನಿರೀಕ್ಷೆಯಂತೆ ರಿಷಬ್‌ ಪಂತ್‌ ಅವರನ್ನು ಉಳಿಕೆ ಪಟ್ಟಿಯಿಂದ ಕೈಬಿಟ್ಟಿದ್ದು, ಓರ್ವ ವಿದೇಶಿ ಆಟಗಾರ ಸೇರಿದಂತೆ ನಾಲ್ವರನ್ನು ಧಾರಣೆ ಮಾಡಿಕೊಂಡಿದೆ. ಅಕ್ಟರ್‌ ಪಟೇಲ್‌ (Akshar Patel) ಅತಿ ಹೆಚ್ಚು ಸಂಭಾವನೆ ಗಳಿಸಿದ್ದು, ಮುಂದಿನ ಕ್ಯಾಪ್ಟನ್‌ ಆಗಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಇದನ್ನೂ ಓದಿ: IPL Retention | ಡುಪ್ಲೆಸಿ ಔಟ್‌, ಆರ್‌ಸಿಬಿಯಲ್ಲಿ ತ್ರಿಬಲ್‌ ಸ್ಟಾರ್‌; ಕೊಹ್ಲಿ ಸಂಭಾವನೆಯಲ್ಲಿ ದಿಢೀರ್‌ 6 ಕೋಟಿ ಏರಿಕೆ

ಯಾರಿಗೆ ಎಷ್ಟು ಮೊತ್ತ?
* ಅಕ್ಷರ್‌ ಪಟೇಲ್‌ – 16.5 ಕೋಟಿ ರೂ.
* ಕುಲ್ದೀಪ್‌ ಯಾದವ್‌ – 13.25 ಕೋಟಿ ರೂ.
* ಟ್ರಿಸ್ಟನ್‌ ಸ್ಟಬ್ಸ್‌ – 10 ಕೋಟಿ ರೂ.
* ಅಭಿಷೇಕ್‌ ಪೊರೆಲ್‌ – 4 ಕೋಟಿ ರೂ.

ಸಿಎಸ್‌ಕೆಗೆ ಪಂತ್?‌
ಹರಾಜು ಪ್ರಕ್ರಿಯೆ ಶುರುವಾದ ಆರಂಭದಿಂದಲೂ ರಿಷಭ್‌ ಪಂತ್‌ ಡೆಲ್ಲಿ ತಂಡವನ್ನು ತೊರೆಯುತ್ತಾರೆ ಎಂದು ಹೇಳಲಾಗುತ್ತಿತ್ತು. ಇದೀಗ ನಿರೀಕ್ಷೆಯಂತೆ ಫ್ರಾಂಚೈಸಿ ಅವರನ್ನು ಕೈಬಿಟ್ಟಿದೆ. ಸದ್ಯ ಅವರು ಸಿಎಸ್‌ಕೆ ತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಸ್‌ಕೆ ಫ್ರಾಂಚೈಸಿಯು ಒಂದು ಆರ್‌ಟಿಎಂ ಕಾರ್ಡ್‌ ಆಯ್ಕೆ ಬಾಕಿ ಉಳಿಸಿಕೊಂಡಿದ್ದು, ರಿಷಭ್‌ ಪಂತ್‌ ಅವರನ್ನ ಖರೀದಿ ಮಾಡಲಿದೆ. ಈಗಾಗಲೇ ಧೋನಿ ಫ್ರಾಂಚೈಸಿ ಮಾಲೀಕರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: IPL Retention | 2025ರ ಐಪಿಎಲ್‌ಗೆ ಲೆಜೆಂಡ್‌ ಮಹಿ ಫಿಕ್ಸ್‌ – ರುತುರಾಜ್‌, ಜಡ್ಡುಗೆ ಬಂಪರ್‌

ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿಯನ್ನು ಎಲ್ಲಾ ಫ್ರಾಂಚೈಸಿಗಳು ಬಿಡುಗಡೆ ಮಾಡಿವೆ. ಇದನ್ನೂ ಓದಿ: IPL Retention | ರೋಹಿತ್‌, ಪಾಂಡ್ಯಗಿಂತಲೂ ಬುಮ್ರಾ ದುಬಾರಿ – ಮುಂಬೈನಲ್ಲಿ ವಿದೇಶಿ ಆಟಗಾರರಿಗೆ ಕೊಕ್‌

Share This Article