ನಟಿ ನಗ್ಮಾ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ : ನಟ ರವಿಕಿಶನ್

Public TV
1 Min Read

ನ್ನಡದ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ, ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿರುವ ನಗ್ಮಾ (Nagma) ಜೊತೆ ನಟ ರವಿಕಿಶನ್ (Ravikishan) ವಿವಾಹೇತರ ಸಂಬಂಧ (Relationship) ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಅನೇಕ ಫೋಟೋಗಳನ್ನು ಇದಕ್ಕೆ ಸಾಕ್ಷಿಯಾಗಿ ನೀಡಲಾಗಿತ್ತು. ಈ ಜೋಡಿಯ ಬಗ್ಗೆ ನಾನಾ ರೀತಿಯ ಗಾಸಿಪ್ ಗಳು (Gossi) ಹರಡಿದರೂ, ಈ ಕುರಿತು ಒಬ್ಬರೂ ಪ್ರತಿಕ್ರಿಯೆ ನೀಡರಲಿಲ್ಲ.

ಹರಡಿದ ಸುದ್ದಿಗಳ ಬಗ್ಗೆ ಯಾರೂ ಮಾತನಾಡದೇ ಇರುವ ಕಾರಣದಿಂದಾಗಿ ಸಂಬಂಧ ಹೊಂದಿದ್ದಾರೆ ಎಂದೇ ಭಾವಿಸಲಾಗಿತ್ತು. ಈ ಕುರಿತು ಕೊನೆಗೂ ನಟ ರವಿಕಿಶನ್ ಮೌನ ಮುರಿದಿದ್ದಾರೆ. ವಿವಾಹೇತರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಎಲ್ಲದರ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:`ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

‘ನಾನು ಮತ್ತು ನಗ್ಮಾ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಈ ಕಾರಣದಿಂದಾಗಿ ಬಹುಶಃ ಆ ಸುದ್ದಿ ಹಬ್ಬಿರಬಹುದು. ನಾನು ಮದುವೆಯಾಗಿದ್ದೇನೆ. ನನ್ನ ಹೆಂಡತಿಯ ಜೊತೆ ಖುಷಿಯಾಗಿ ಇದ್ದೇನೆ. ಆರಾಧಿಸುವಂತಹ ಹೆಂಡತಿ ಇರುವಾಗ ನಾನು ಯಾಕೆ ಬೇರೆಯವರ ಜೊತೆ ಸಂಬಂಧ ಇಟ್ಟುಕೊಳ್ಳಲಿ. ಅದೆಲ್ಲವೂ ಸುಳ್ಳು ಸುದ್ದಿ. ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್’ ಎಂದಿದ್ದಾರೆ ರವಿಕಿಶನ್.

ಮುಂದುವರೆದು ಮಾತನಾಡಿರುವ ಅವರು, ‘ನನ್ನ ಹೆಂಡತಿ ಕಷ್ಟದ ಕಾಲದಲ್ಲೂ ಇದ್ದಾಳೆ, ಸುಖದಲ್ಲೂ ಜೊತೆಯಿದ್ದಾಳೆ. ನಾನು ಏನು ಅನ್ನುವುದು ಅವಳಿಗೆ ಚೆನ್ನಾಗಿ ಗೊತ್ತಿದೆ. ಅಂತಹ ಹೆಂಡತಿಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ. ನಗ್ಮಾ ವಿಚಾರದಲ್ಲಿ ನನ್ನ ಪತ್ನಿ ತಲೆಕೆಡಿಸಿಕೊಂಡಿಲ್ಲ. ನಾನು ಏನು ಎನ್ನುವುದು ಆಕೆಗೆ ಗೊತ್ತಿದೆ’ ಎಂದಿದ್ದಾರೆ ರವಿಕಿಶನ್.

Share This Article