ಮಂಗಳೂರು: ವಿಶೇಷ ತನಿಖಾ ತಂಡದ ಪೊಲೀಸರು (SIT Police) ಸೌಜನ್ಯ (Soujanya Rape and Murder Case ) ವಿಚಾರವಾಗಿ ಯಾವುದೇ ಪ್ರಶ್ನೆ ಕೇಳಲಿಲ್ಲ ಉದಯ್ ಜೈನ್ ಹೇಳಿದ್ದಾರೆ.
ಸೌಜನ್ಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಸುಪ್ರೀಂ ಕೋರ್ಟ್‌ನಿಂದ ಖುಲಾಸೆಯಾಗಿರುವ ಉದಯ್ ಜೈನ್ (Uday Jain) ಅವರನ್ನು ಬುಧವಾರ ಎಸ್‌ಐಟಿ ಪೊಲೀಸರು ವಿಚಾರಣೆಗೆ ಕರೆಸಿದ್ದರು.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಸಂಜೆ 5 ಗಂಟೆವರೆಗೆ ವಿಚಾರಣೆ ಮಾಡಿದರು. ವಿಚಾರಣೆ ವೇಳೆ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಕೇಳಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಯೂಟ್ಯೂಬರ್ ಸಮೀರ್ ಮನೆ ಮೇಲೆ ಪೊಲೀಸರ ದಾಳಿ, ಪರಿಶೀಲನೆ
ವಿದ್ಯಾಭ್ಯಾಸ, ಉದ್ಯೋಗ, ಕುಟುಂಬ ಎಲ್ಲಾ ವಿಚಾರ ಮತ್ತು ಧರ್ಮಸ್ಥಳ ಸುತ್ತಾಮುತ್ತಾ ಹೆಣಗಳನ್ನು ಹೂತಿರುವ ಬಗ್ಗೆ ಪ್ರಶ್ನೆ ಕೇಳಿದರು. ಈ ವಿಚಾರ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ತಿಳಿಸಿದೆ. ಚಿನ್ನಯ್ಯನ ಬಗ್ಗೆ ಎಸ್‌ಐಟಿಯವರು ಏನು ಕೇಳಲಿಲ್ಲ ಎಂದು ಹೇಳಿದರು.
ಸೌಜನ್ಯ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಈಗಾಗಲೇ ಮುಕ್ತಾಯವಾಗಿದೆ. ಹೊಸದಾಗಿ ಈ ಪ್ರಕರಣದ ವಿಚಾರಣೆ ನಡೆಸಬೇಕಾದರೆ ಸುಪ್ರೀಂನಿಂದ ಅನುಮತಿ ಪಡೆಯಬೇಕಾಗುತ್ತದೆ. ಇದನ್ನೂ ಓದಿ: ಯೂಟ್ಯೂಬರ್ ಅಭಿಷೇಕ್‌ಗೆ SIT ಫುಲ್ ಗ್ರಿಲ್ – ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ
ಯಾವುದಾದರೂ ಪ್ರಬಲವಾದ ಸಾಕ್ಷ್ಯ ಸಿಕ್ಕಿ ಸೌಜನ್ಯ ತಾಯಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರೆ ಪ್ರಕರಣ ಮತ್ತೆ ತೆರೆಯುವ ಸಾಧ್ಯತೆಯಿದೆ.