ಯಾದಗಿರಿ ಜಿಲ್ಲೆಯಲ್ಲಿ 4 ದಿನಗಳಿಂದ ಕರೆಂಟ್ ಕಟ್- 3 ಗ್ರಾಮಗಳ ಜನ ಪರದಾಟ

Public TV
1 Min Read

 ಯಾದಗಿರಿ: ಜಿಲ್ಲೆಯಲ್ಲಿ 4 ದಿನಗಳಿಂದ ಕರೆಂಟ್ ಕಟ್ ಆಗಿದೆ. ವಿದ್ಯುತ್ ಸಂಪರ್ಕವಿಲ್ಲದೇ 3 ಗ್ರಾಮಗಳ ಜನರು ಪರದಾಟ ಅನುಭವಿಸುತ್ತಿದ್ದಾರೆ.

ವಿದ್ಯುತ್ ಕೈ ಕೊಟ್ಟಿದ್ರಿಂದ ಕುಡಿಯುವ ನೀರಿಗೂ ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸ್ತಿದ್ದಾರೆ. ಕುಡಿಯುವ ನೀರಿಗಾಗಿ ಯಾದಗಿರಿ (Yadagiri) ಜಿಲ್ಲೆಯ ಶಹಾಪುರ ತಾಲೂಕಿನ ವ್ಯಾಪ್ತಿಗೆ ಒಳಪಡುವ ನಾಲಡಗಿ, ಬಲ್ಕಲ್ ಹಾಗೂ ಮರಮ್ಕಲ್ ಗ್ರಾಮಸ್ಥರ ಪರದಾಡುತ್ತಿದ್ದಾರೆ. ಈ ಸಂಬಂಧ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದ್ರೂ ಸಮಸ್ಯೆ ಬಗೆಹರಿಸದೇ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಒಂದು ಕಿಲೋ ಮೀಟರ್ ದೂರ ಹೋಗಿ ಹರಸಾಹಸ ಪಟ್ಟು ಎತ್ತಿನ ಬಂಡಿ, ಟ್ರ್ಯಾಕ್ಟರ್ ಗಳಲ್ಲಿ ಬ್ಯಾರೆಲ್ ಇಟ್ಟುಕೊಂಡು ಗ್ರಾಮಸ್ಥರು ನೀರು ತರುತ್ತಿದ್ದಾರೆ. ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಕರೆಂಟ್ ಕೈ ಕೊಟ್ಟಿದೆ. ಬಿರುಗಾಳಿ ಸಹಿತ ಸುರಿದಿದ್ದ ಮಳೆಗೆ ಹಲೆವೆಡೆ ವಿದ್ಯುತ್ ಕಂಬಗಳು ಧರೆಗುರುಳಿದಿದ್ದವು. ಇದನ್ನೂ ಓದಿ: ಹಣ ಕದಿಯುವುದರಲ್ಲಿ ಯಾರ ಪಾಲು ಇದೆಯೋ ಅವರು ಸಿಕ್ಕಿಬೀಳುತ್ತಾರೆ: ವಿಪಕ್ಷಗಳಿಗೆ ಮೋದಿ ಟಾಂಗ್‌

ಮರಮಕಲ್ ಗ್ರಾಮದಲ್ಲಿಯೂ ಮಳೆ-ಗಾಳಿಗೆ ಹತ್ತಾರು ವಿದ್ಯುತ್ ಕಂಬಗಳು ಬಿದ್ದಿದ್ದವು. ಇದರಿಂದಾಗಿ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಸಮಸ್ಯೆ ಆಗಿ ನಾಲ್ಕು ದಿನಗಳಾಗಿದ್ರೂ ಸರಿಪಡಿಸದೇ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

Share This Article