`ಸನ್ನಿ ನೈಟ್ಸ್’ಗೆ ಯಾವುದೇ ಪರ್ಮಿಷನ್ ನೀಡಿಲ್ಲ- ಪೊಲೀಸ್ ಆಯುಕ್ತರ ಸ್ಪಷ್ಟನೆ

Public TV
1 Min Read

ಬೆಂಗಳೂರು: ಹೊಸ ವರ್ಷಾಚರಣೆಗಾಗಿ ನಗರದಲ್ಲಿ ಆಯೋಜನೆ ಮಾಡಲಾಗ್ತಿರೋ `ಸನ್ನಿ ನೈಟ್ಸ್’ಗೆ ಯಾವುದೇ ಪರ್ಮಿಷನ್ ನೀಡಿಲ್ಲ ಅಂತ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪರ್ಮಿಷನ್ ನೀಡದೆ ಇರೋದ್ರಿಂದ ಕಾರ್ಯಕ್ರಮ ಮಾಡುವ ಹಾಗಿಲ್ಲ. ಮನೋರಂಜನೆ ಕಾಯ್ದೆಯಡಿ ಪರ್ಮಿಷನ್ ಪಡೆಯುವುದು ಅಗತ್ಯ. ಈ ದೃಷ್ಟಿಯಿಂದ ಕಾರ್ಯಕ್ರಮ ನಡೆಯಲು ಅವಕಾಶ ನೀಡುವುದಿಲ್ಲ ಅಂತ ಅವರು ಹೇಳಿದ್ದಾರೆ. ಇದನ್ನೂ ಓದಿ: `ಸನ್ನಿ ನೈಟ್ಸ್’ ವಿರುದ್ಧ ಪೊರಕೆ ಹಿಡಿದ ಬೆಂಗ್ಳೂರು ಮಹಿಳೆಯರು

ನಮ್ಮ ಪರ್ಮಿಷನ್ ಪಡೆಯದೇ ಟಿಕೆಟ್ ಮಾರಾಟ ಮಾಡಿರೋದು ಸರಿಯಲ್ಲ. ದೊಡ್ಡ ಕಾರ್ಯಕ್ರಮ ಆಗಿರೋದ್ರಿಂದ ಪೊಲೀಸರು ಒದಗಿಸುವ ಅವಕಾಶ ಇಲ್ಲ. ಕೇರಳದಲ್ಲೂ ಸನ್ನಿ ಲಿಯೋನ್ ಬಂದಾಗ ಲಾಠಿ ಚಾರ್ಜ್ ಆಗಿತ್ತು. ಕಾನೂನು ಸುವ್ಯವಸ್ಥೆ ಹಾಳಾಗಿತ್ತು. ಈಗ ಬೆಂಗಳೂರಲ್ಲಿ ಅದು ಆಗೋದು ಇಷ್ಟ ಇಲ್ಲ, ಅವಕಾಶವೂ ಇಲ್ಲ ಅಂತ ತಿಳಿಸಿದ್ದಾರೆ.  ಇದನ್ನೂ ಓದಿ: ಸನ್ನಿ ಲಿಯೋನ್ ಸೀರೆ ಉಟ್ಕೊಂಡು ಬರಲಿ- `ಸನ್ನಿ ನೈಟ್ಸ್’ ಆಯೋಜಕರಿಗೆ ಕರವೇ ಸವಾಲು

ಇನ್ನು ಹೊಸ ವರ್ಷ ಆಚರಣೆಗೆ ಮದ್ಯ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲಾ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಇದುವರೆಗೂ ಯಾವುದೇ ಚಿಂತನೆ ಮಾಡಿಲ್ಲ. ಅಧಿಕಾರಿಗಳ ಜೊತೆ ಚರ್ಚಿಸಿ ಬಳಿಕ ಎಲ್ಲಾ ತೀರ್ಮಾನ ಹೇಳಲಾಗುವುದು ಅಂತ ವಿವರಿಸಿದ್ರು.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ರಿವಾಲ್ವರ್‍ಗೆ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆ ಅಂದ್ರು.

ಹೊಸ ವರ್ಷಾಚರಣೆಯ ಹಿಂದಿನ ದಿನ ಸನ್ನಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು, ಕನ್ನಡ ಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಸನ್ನಿ ಲಿಯೋನ್ ಫೋಟೊಗೆ ಬೆಂಕಿ ಇಟ್ಟು ಬೆಂಗಳೂರಿಗೆ ಸನ್ನಿ ಬರದಂತೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

https://www.youtube.com/watch?v=hw9rGJ7u0KA

https://www.youtube.com/watch?v=05Jkbnw4rXE

Share This Article
Leave a Comment

Leave a Reply

Your email address will not be published. Required fields are marked *