ಪಕ್ಷಾಂತರ ಮಾಡುವ ಶಾಸಕರಿಗೆ ಪಿಂಚಣಿ ಇಲ್ಲ: ಹಿಮಾಚಲ ವಿಧಾನಸಭೆಯಲ್ಲಿ ಹೊಸ ಮಸೂದೆ ಅಂಗೀಕಾರ

Public TV
1 Min Read

ಶಿಮ್ಲಾ: ಪಕ್ಷಾಂತರ ಮಾಡುವ ಶಾಸಕರಿಗೆ ಯಾವುದೇ ಪಿಂಚಣಿ (Pension) ಇರುವುದಿಲ್ಲ ಎಂಬ ಹೊಸ ಮಸೂದೆಯನ್ನು ಹಿಮಾಚಲ ಪ್ರದೇಶದ (Himachal Pradesh) ಕಾಂಗ್ರೆಸ್‌ (Congress) ಸರ್ಕಾರ ಅಂಗೀಕರಿಸಿದೆ.

ಹಿಮಾಚಲ ಪ್ರದೇಶ ಸರ್ಕಾರ ಅಭೂತಪೂರ್ವ ಕ್ರಮವೊಂದನ್ನು ಕೈಗೊಂಡಿದ್ದು, ಪಕ್ಷಾಂತರಿಗಳಿಗೆ ಪಿಂಚಣಿ ನಿಲ್ಲಿಸುವ ಹೊಸ ಮಸೂದೆಯನ್ನು ಇಂದು ವಿಧಾನಸಭೆಯಲ್ಲಿ ಅಂಗೀಕಾರ ಮಾಡಿದೆ. ಇದನ್ನೂ ಓದಿ: ಚುನಾವಣೆಗೂ ಮುನ್ನ ಮಹಾ ವಿಕಾಸ್ ಅಘಾಡಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಅಗತ್ಯವಿಲ್ಲ: ಶರದ್ ಪವಾರ್

ಪಕ್ಷಾಂತರ ಮಾಡಿದ ಶಾಸಕರಿಗೆ ಪಿಂಚಣಿ ನೀಡುವುದನ್ನು ನಿಲ್ಲಿಸುವ ಮಸೂದೆಯನ್ನು ಮಂಗಳವಾರ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಅನರ್ಹಗೊಂಡಿರುವ ಶಾಸಕರಿಗೆ ಇದು ಅನ್ವಯಿಸುತ್ತದೆ.

ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಹಿಮಾಚಲ ಪ್ರದೇಶ ವಿಧಾನಸಭೆ (ಸದಸ್ಯರ ಭತ್ಯೆ ಮತ್ತು ಪಿಂಚಣಿ) ತಿದ್ದುಪಡಿ ಮಸೂದೆ 2024 ಎಂಬ ಶೀರ್ಷಿಕೆಯ ಮಸೂದೆಯನ್ನು ಮಂಡಿಸಿದರು. ಇದನ್ನೂ ಓದಿ: ಹರಿಯಾಣ ವಿಧಾನಸಭೆ ಚುನಾವಣೆ – ಆಪ್, ಕಾಂಗ್ರೆಸ್‌ ಮೈತ್ರಿ ಹಿಂದಿನ ಲೆಕ್ಕಾಚಾರ ಏನು?

ಸಂವಿಧಾನದ 10 ನೇ ಶೆಡ್ಯೂಲ್ ಅಡಿಯಲ್ಲಿ ಯಾವುದೇ ಹಂತದಲ್ಲಿ ವ್ಯಕ್ತಿಯನ್ನು ಅನರ್ಹಗೊಳಿಸಿದ್ದರೆ, ಕಾಯಿದೆಯಡಿಯಲ್ಲಿ ಪಿಂಚಣಿಗೆ ಅರ್ಹರಾಗಿರುವುದಿಲ್ಲ ಎಂದು ಮಸೂದೆಯು ಪಕ್ಷಾಂತರ ವಿರೋಧಿ ಕಾನೂನನ್ನು ಉಲ್ಲೇಖಿಸುತ್ತದೆ.

Share This Article