ನನ್ನ ನೋಡಲು ಯಾರೂ ಬರಬೇಡಿ.. ಅಭಿಮಾನಿಗಳು ಶಾಂತ ರೀತಿ ಇರಿ: ದರ್ಶನ್ ಮನವಿ

Public TV
1 Min Read

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ (Darshan) ನೋಡಲು ಕುಟುಂಬಸ್ಥರು, ಆಪ್ತರು, ಸಿನಿತಾರೆಯರು ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಮುಜುಗರಕ್ಕೆ ಒಳಗಾಗಿರುವ ದರ್ಶನ್ ಕುಟುಂಬದವರ ಹೊರತಾಗಿ ಯಾರನ್ನೂ ಭೇಟಿ ಮಾಡಲು ಒಪ್ಪುತ್ತಿಲ್ಲ.

ನನ್ನನ್ನು ನೋಡಲು ಜೈಲಿಗೆ ಯಾರೂ ಬರಬೇಡಿ. ಕುಟುಂಬ ಹೊರತುಪಡಿಸಿ, ಬೇರೆ ಯಾರೂ ಬರಬೇಡಿ. ಜೈಲಲ್ಲಿ ನನ್ನನ್ನು ನೋಡಿ, ನಿಮಗೂ ಬೇಸರವಾಗುತ್ತೆ. ಭೇಟಿಗೆ ಬಂದವರನ್ನ ಜೈಲಲ್ಲಿ ನೋಡೋದು ನನಗೂ ನೋವು. ಇನ್ಮುಂದೆ ಕುಟುಂಬಕ್ಕೆ ಮಾತ್ರ ಭೇಟಿಗೆ ಅವಕಾಶ ಇರಲಿ. ಅಭಿಮಾನಿಗಳು ಶಾಂತ ರೀತಿಯಿಂದ ಇರಿ ಎಂದು ನಟ ದರ್ಶನ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಾತ್ರೆ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ – ಅಪಾಯದಿಂದ ಪಾರದ 1 ತಿಂಗಳ ಮಗು

ನಟ ದರ್ಶನ್ ಬಂಧನವಾಗಿ ಒಂದೂವರೆ ತಿಂಗಳಾಗಿದೆ. ಆಪ್ತರು ಜೈಲಿಗೆ ಬಂದು ದರ್ಶನ್ ಭೇಟಿ ಮಾಡುತ್ತಿದ್ದಾರೆ. ಆದರೆ, ಕುಟುಂಬದ ಹೊರತಾಗಿ ಯಾರನ್ನೂ ಭೇಟಿ ಮಾಡಲು ದರ್ಶನ್ ಒಪ್ಪುತ್ತಿಲ್ಲ. ಆಪ್ತರು ಜೈಲಿಗೆ ಬರುವುದರಿಂದ ಮುಜುಗರವಾಗುತ್ತಿದೆ. ಹೀಗಾಗಿ ಯಾರೂ ಬರಬೇಡಿ ಎಂದು ಹಾಸ್ಯ ನಟ ಸಾಧು ಕೋಕಿಲಾ ಭೇಟಿ ಸಂದರ್ಭದಲ್ಲಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ.

ಇತ್ತ ಪತಿಗಾಗಿ ವಿಜಯಲಕ್ಷ್ಮಿ ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಪತಿ ದರ್ಶನ್ ಬಿಡುಗಡೆಗಾಗಿ ಪ್ರಾರ್ಥಿಸಿ ಚಂಡಿಕಾ ಯಾಗ ಮಾಡಿಸಿದ್ದಾರೆ. ನವಚಂಡಿಕಾಯಾಗದ ಸಂಕಲ್ಪ, ಪಾರಾಯಣದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಕತ್ತಲಲ್ಲಿ ಮಲೆನಾಡು; ಮೊಬೈಲ್ ಫುಲ್ ಚಾರ್ಜ್‌ಗೆ 60 ರೂ., ಹಾಲ್ಫ್‌ಗೆ 40 ರೂ.

Share This Article