ಬೆಳಗಾವಿ: ಮಾಜಿ ಸಚಿವ ಕೆ ಎನ್ ರಾಜಣ್ಣ (KN Rajanna) ಅವರನ್ನು ಸಚಿವರ ಸ್ಥಾನದಿಂದ ವಜಾ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ (Satish Jarkiholi) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ರಾಜಣ್ಣ ಅವರ ಕುರಿತು ಮಾತನಾಡಲು ಸಚಿವರು ಹಿಂದೇಟು ಹಾಕಿದ್ದಾರೆ. ರಾಜಕೀಯ ವಿಷಯದ ಕುರಿತು ಏನೂ ಚರ್ಚೆ ಬೇಡ ಎಂದು ಹೇಳಿದ ಅವರು, ನಾಳೆ ನಾಡಿದ್ದು ಸಮಯ ಇದೆ. ಇವತ್ತು ಒಂದು ದಿನ ಬೆಡ್ ರೆಸ್ಟ್ ಇದೆ ಎಂದಿದ್ದಾರೆ. ಇದನ್ನೂ ಓದಿ: ಸಮಯ ಬಂದಾಗ ಮತ್ತೆ ಸಚಿವ ಸ್ಥಾನ ಪಡೆಯುತ್ತೇನೆ: ಕೆ.ಎನ್.ರಾಜಣ್ಣ
ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಆಗುತ್ತಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಏನು ಮಾಡುವುದಕ್ಕೆ ಆಗುವುದಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪೊಲೀಸ್ ತನಿಖೆಯಲ್ಲಿ ಏನು ಬರುತ್ತದೋ ಅದೇ ಅಂತಿಮ ಎಂದು ತಿಳಿಸಿದರು.