ಯಾರ ಸರ್ಕಾರ ಇದ್ರೇನು, ದೇಶ ಸುಭದ್ರವಾಗಿರಬೇಕು: ಜಿ.ಪರಮೇಶ್ವರ್

Public TV
1 Min Read

ಧಾರವಾಡ: ಯಾರ ಸರ್ಕಾರ ಇದ್ರೇನು, ದೇಶ ಸುಭದ್ರವಾಗಿರಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಹೇಳಿದ್ದಾರೆ.

ರಾಹುಲ್ ಗಾಂಧಿಯಂತೆ (Rahul Gandhi) ಮಾತನಾಡಬೇಡಿ ಎಂದು ಪರಮೇಶ್ವರ್‌ರವರಿಗೆ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಅವರು, ಅದು ಚೀಪ್ ಟಾಕ್ ಆಗಿದೆ. ನಾನೇನು ಅವರ ಮೇಲೆ ದೂಷಣೆ ಮಾಡಿಲ್ಲ ಎಂದರು. ನಾವು ಮಾಡಿದ್ದು,ಅವರು ಮಾಡಿದ್ರು ಅಂತಾ ಹೇಳಿಕೊಂಡು ತಿರುಗೋಣ. ಯಾರ ಸರ್ಕಾರ ಇದ್ರೇನು, ದೇಶದ ಭದ್ರತೆ ಮುಖ್ಯ. ಯಾವ ಸರ್ಕಾರ ಇದ್ದರೂ ದೇಶ ಭದ್ರವಾಗಿರಬೇಕು ಎಂದರು.  ಇದನ್ನೂ ಓದಿ: ರಾಜ್ಯದಲ್ಲಿ ಏನೇನಾಗುತ್ತಿದೆ ಎಂಬ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಳ್ಳುತ್ತೆ: ಡಿಕೆಶಿ

545 ಪಿಎಸ್‌ಐ ನೇಮಕಾತಿ ವಿಚಾರವಾಗಿ ಮಾತನಾಡಿ, ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಶರಣಪ್ರಕಾಶ್ ಅವರ ಬೇಡಿಕೆಯೂ ಒಂದಿದೆ. 371ಜೆ ಗೆ ಶೇ. 8ರಷ್ಟು ಮೀಸಲಾತಿ ಕೇಳಿದ್ದಾರೆ. 2023ರಲ್ಲಿ ಈ ಸಂಬಂಧ ಆದೇಶವಾಗಿದ್ದು, ಈ ಆದೇಶ ಪಾಲಿಸಿ ಎಂದು ಒತ್ತಾಯಿಸುತ್ತಿದ್ದಾರೆ. 545 ಪಿಎಸ್‌ಐ ನೇಮಕ ಪ್ರಾರಂಭವಾಗಿದ್ದು 2020ರಲ್ಲಿ. ನೋಟಿಫಿಕೇಷನ್‌ನಲ್ಲೂ ಅದೇ ಆಗಬೇಕು ಅನ್ನೋದು ಇನ್ನೊಂದು ವಾದ. ಇದನ್ನೇ ಈಗ ಕೋರ್ಟ್ ತೀರ್ಮಾನಿಸಬೇಕಿದೆ. ಕೋರ್ಟ್ ತೀರ್ಪು ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಉಪ್ಪು ತಿಂದವರು ನೀರು ಕುಡಿಯಲೇಬೇಕು: ಸಿಎಂಗೆ ಸಿ.ಟಿ.ರವಿ ಟಾಂಗ್‌

ಸಿದ್ದರಾಮಯ್ಯ (CM Siddaramaiah) ಪರ ಜಿ.ಟಿ. ದೇವೇಗೌಡರು ಹೇಳಿಕೆ ನೀಡಿದ ಬಗ್ಗೆ ಮಾತನಾಡಿ, ಜಿ.ಟಿ. ದೇವೇಗೌಡರು ವಾಸ್ತವಾಂಶ ಮಾತನಾಡಿದ್ದಾರೆ, ಅವರು ಕಾಂಗ್ರೆಸ್‌ಗೆ ಬಂದ್ರೆ ಶಕ್ತಿ ಬರುತ್ತೆ ಅನೋದಿದ್ರೆ ತಗೋತೀವಿ. ಯಾರೇ ಬಂದ್ರು ಕಾಂಗ್ರೆಸ್‌ಗೆ ತಗೋತೆವಿ ಎಂದರು. ಸಿಎಂ ಸ್ಥಾನಕ್ಕೆ ಪರಮೇಶ್ವರ್ ಹೆಸರು ಕೇಳಿ ಬಂದಿರುವ ವಿಚಾರವಾಗಿ ಮಾತನಾಡಿ, ಅದು ನನಗೆ ಕೇಳಿಸಿಲ್ಲ. ಅದು ಮಾಧ್ಯಮಗಳಿಗೆ ಹೇಗೆ ಕೇಳಿಸುತ್ತೆ? ನನಗೆ ಕೇಳಿಸಿದಾಗ ನೋಡೋಣ ಬಿಡಿ ಎಂದರು. ಇದನ್ನೂ ಓದಿ: ಉತ್ತರ ಲೆಬನಾನ್‌ ಮೇಲೆ ಇಸ್ರೇಲ್‌ ವಾಯುದಾಳಿ – ಹಮಾಸ್‌ ಟಾಪ್‌ ಕಮಾಂಡರ್‌ ಹತ್ಯೆ

Share This Article