ಕೊರೊನಾದಿಂದ ಮೃತಪಟ್ಟ ರೈತರ ಸಾಲಮನ್ನಾ ಅಸಾಧ್ಯ: ಎಸ್.ಟಿ. ಸೋಮಶೇಖರ್

By
1 Min Read

ಬೆಂಗಳೂರು: ಕೊರೊನಾದಿಂದ ಮೃತರಾದ ರೈತರ ಸಾಲಮನ್ನಾ ಮಾಡಲು ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸಹಕಾರ ಸಚಿವ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಸಾಲಮನ್ನಾ ಸಾಧ್ಯವಿಲ್ಲ ಎಂದಿದ್ದಾರೆ.

ಕೋವಿಡ್‍ನಿಂದ ಮೃತರಾದ ರೈತರ ಸಾಲಮನ್ನಾ ಮಾಡಬೇಕು. ಈಗಾಗಲೇ ರೈತರ ಮನೆಯಲ್ಲಿ ದೀಪ ಹಾರಿ ಹೋಗಿದೆ. ಹೀಗಾಗಿ ಸರ್ಕಾರ ಕೊರೊನಾದಿಂದ ಮೃತರಾದ ರೈತರ ಸಾಲಮನ್ನಾ ಮಾಡಬೇಕು ಅಂತ ಒತ್ತಾಯ ಬಿಜೆಪಿ ಸದಸ್ಯ ಮುನಿರಾಜುಗೌಡ ಒತ್ತಾಯ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವ ಸೋಮಶೇಖರ್, ರಾಜ್ಯದಲ್ಲಿ 1-2 ಕೊರೊನಾ ಅಲೆಯಲ್ಲಿ ಮೃತಪಟ್ಟ ರೈತರ ಪೈಕಿ 10,437 ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ಗ್ರಾಮೀಣಾಭಿವೃದ್ಧಿ ಗಳಲ್ಲಿ ಸಾಲ ಪಡೆದಿರುತ್ತಾರೆ. ಮೃತರಾದ ರೈತರ ಸಾಲದ ಮೊತ್ತ 91.97 ಕೋಟಿ ಇದೆ ಅಂತ ಮಾಹಿತಿ ನೀಡಿದರು. ಇದನ್ನೂ ಓದಿ: ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ, ನಮ್ಮ ದೇಶಭಕ್ತಿ ಗೆಲ್ಲುತ್ತೆ: ಝೆಲೆನ್ಸ್ಕಿ

ಕೊರೊನಾದಿಂದ ಮೃತರಾದ ರೈತರು ಸಹಕಾರ ಸಂಘಗಳಲ್ಲಿ ಪಡೆದಿದ್ದ ಸಾಲಮನ್ನಾ ಮಾಡುವ ಆದೇಶ ಇಲಾಖೆ ಹೊರಡಿಸಿಲ್ಲ. ಕೊರೊನಾದಿಂದ ಮೃತಪಟ್ಟ ರೈತರು ಸೇರಿದಂತೆ ಎಲ್ಲಾ ಕುಟುಂಬಕ್ಕೆ 1.5 ಲಕ್ಷ ಆರ್ಥಿಕ ಸಹಾಯ ಸರ್ಕಾರದಿಂದ ಮಾಡಲಾಗಿದೆ. ರೈತರು ಸಾಲ ಮರುಪಾವತಿ ಮಾಡಲು ಕಂತು ಅವಧಿ ವಿಸ್ತರಣೆ ಮಾಡಲಾಗಿದೆ. ಬಡ್ಡಿ ಸಹಾಯಧನವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಈ ಯೋಜನೆಯು ಕೊರೊನಾದಿಂದ ಮೃತಪಟ್ಟ ರೈತರ ವಾರಸುದಾರರಿಗೂ ಅನ್ವಯ ಆಗುತ್ತದೆ ಎಂದು ತಿಳಿಸಿದರು. ಇದಲ್ಲದೇ ಲಾಭದಲ್ಲಿರುವ ಡಿಸಿಸಿ ಬ್ಯಾಂಕ್‍ಗಳು ತಮ್ಮಲ್ಲಿರುವ ಹಣವನ್ನು ಮೃತ ರೈತ ಸಾಲಮನ್ನಾಗೆ ಬಳಕೆ ಮಾಡಲು ಓರಲ್ ಆಗಿ ಅನುಮತಿ ನೀಡಲಾಗಿದೆ ಎಂದರು. ಇದನ್ನೂ ಓದಿ: ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ- ಕಟ್ಟಡ ತೊರೆಯುವಂತೆ ಅಧಿಕಾರಿಗಳ ಸೂಚನೆ

Share This Article
Leave a Comment

Leave a Reply

Your email address will not be published. Required fields are marked *