ಭಾರತ-ಪಾಕ್‌ ಪಂದ್ಯ ರದ್ದಾದ್ರೆ 2,200 ಕೋಟಿ ಲಾಸ್‌!

2 Min Read

ದುಬೈ: ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತದ (Team India) ವಿರುದ್ಧದ ಪಂದ್ಯವನ್ನು ಪಾಕಿಸ್ತಾನ (Pakistan) ಬಹಿಷ್ಕರಿಸಿದರೆ ಸುಮಾರು 2,200 ಕೋಟಿ ರೂ. ನಷ್ಟವಾಗುವ ಸಾಧ್ಯತೆಯಿದೆ.

ಈ ನಷ್ಟ ಐಸಿಸಿಗೆ (ICC) ಮಾತ್ರವಲ್ಲದೆ ಪಾಕಿಸ್ತಾನ ಕ್ರಿಕೆಟ್, ಬಿಸಿಸಿಐ, ಶ್ರೀಲಂಕಾ, ಟೂರ್ನಿಯ ಪ್ರಾಯೋಜಕರು, ಜಾಹೀರಾತುದಾರರಿಗೂ ಅನ್ವಯವಾಗಲಿದೆ. ಕ್ರಿಕೆಟ್‌ನಲ್ಲಿ ಪಂದ್ಯದ ಪ್ರಸಾರ ಹಕ್ಕು, ಟಿಕೆಟ್ ಆದಾಯ, ಜಾಹೀರಾತು, ಪ್ರಾಯೋಜಕತ್ವ ಮತ್ತು ಕಾನೂನುಬದ್ದ ಬೆಟ್ಟಿಂಗ್ (ಭಾರತದ ಹೊರಗಡೆ) ಸೇರಿ ಹಲವು ವಿಧದಲ್ಲಿ ಆದಾಯ ಸಿಗಲಿದೆ.

ಎಷ್ಟು ನಷ್ಟ?
– ಭಾರತ-ಪಾಕಿಸ್ತಾನ ಐಸಿಸಿ ಪಂದ್ಯದ ಅಂದಾಜು ಮೌಲ್ಯ: 250 ಮಿಲಿಯನ್ ಯುಎಸ್ ಡಾಲರ್ (2,200+ ಕೋಟಿ ರೂ.)
– ಜಾಹೀರಾತು ಆದಾಯ – ಸುಮಾರು 200–250 ಕೋಟಿ ರೂ.
– 10 ಸೆಕೆಂಡ್ ಜಾಹೀರಾತು ಸ್ಲಾಟ್‌ನ ವೆಚ್ಚ: 20-40 ಲಕ್ಷ ರೂ.
– ಭಾರತದ ಮಾಧ್ಯಮ ಹಕ್ಕುಗಳ ಒಪ್ಪಂದವು ಪ್ರಸ್ತುತ ಮರು ಮಾತುಕತೆಯಲ್ಲಿದೆ: 3 ಬಿಲಿಯನ್ ಡಾಲರ್‌ (ಜಿಯೋಸ್ಟಾರ್–ಐಸಿಸಿ)

ಭಾರತ-ಪಾಕ್ ದೇಶಗಳ ಕ್ರಿಕೆಟ್ ಮಂಡಳಿಗಳು ತಲಾ 200 ಕೋಟಿ ರೂ. ಹಣವನ್ನು ಕಳೆದುಕೊಳ್ಳಲಿದೆ. ಪಂದ್ಯ ರದ್ದಾದರೆ ಪ್ರಾಯೋಜಕರು, ಪ್ರಸಾರಕರಿಗೆ ಐಸಿಸಿ ನಷ್ಟ ಪರಿಹಾರ ನೀಡಬೇಕಾಗುತ್ತದೆ. ಅದರಲ್ಲೂ ಐಸಿಸಿಗೆ ಅತಿ ಹೆಚ್ಚು ಆದಾಯ ಪ್ರಸಾರ ಹಕ್ಕಿನಿಂದ ಬರುತ್ತದೆ.  ಇದನ್ನೂ ಓದಿ: ಪಾಕ್‌ ಬಹಿಷ್ಕಾರ ಹಾಕಿದ್ರೂ ಲಂಕಾಗೆ ತೆರಳಲಿದೆ ಟೀಂ ಇಂಡಿಯಾ!

ಐಸಿಸಿ ಪ್ರತಿ ವರ್ಷ ಬೇರೆ ದೇಶಗಳಲ್ಲಿ ಕ್ರಿಕೆಟ್‌ ಜನಪ್ರಿಯಗೊಳಿಸಲು ಕ್ರಿಕೆಟ್‌ ಮಂಡಳಿಗೆ ವಾರ್ಷಿಕ ಆದಾಯವನ್ನು ನೀಡುತ್ತದೆ. ಪಂದ್ಯ ರದ್ದಾದರೆ ವೆಸ್ಟ್‌ ಇಂಡೀಸ್‌, ಸ್ಕಾಟ್ಲೆಂಡ್‌, ಜಿಂಬಾಬ್ವೆ, ನಮೀಬಿಯಾ, ಅಫ್ಘಾನಿಸ್ತಾನ ಸೇರಿದಂತೆ ಹಲವು ಮಂಡಳಿಗಳಿಗೆ ನೀಡಬೇಕಿದ್ದ ಆದಾಯ ಕಡಿತವಾಗಲಿದೆ.

2024–2027ರ ಐಸಿಸಿ ಪಂದ್ಯಗಳ ಭಾರತದ ಹಕ್ಕನ್ನು ಡಿಸ್ನಿ ಸ್ಟಾರ್‌ 2022 ರಲ್ಲಿ 3 ಬಿಲಿಯನ್‌ ಡಾಲರ್‌(ಅದಾಜು 25 ಸಾವಿರ ಕೋಟಿ ರೂ.) ನೀಡಿ ಖರೀದಿಸಿತ್ತು. ಈ ಪಂದ್ಯಗಳ ಪೈಕಿ ಅತಿ ಹೆಚ್ಚು ಆದಾಯ ಭಾರತ, ಪಾಕ್‌ ಪಂದ್ಯದಿಂದಲೇ ಬರುತ್ತಿತ್ತು. ಪ್ರಮುಖವಾದ ಈ ಪಂದ್ಯವೇ ನಡೆಯದೇ ಇದ್ದರೆ ಜಿಯೋ ಹಾಟ್‌ಸ್ಟಾರ್‌ಗೆ ಭಾರೀ ನಷ್ಟವಾಗುವ ಸಾಧ್ಯತೆಯಿದೆ. ಹೀಗಾಗಿ ಈಗ ಈ ಒಪ್ಪಂದದ ಬಗ್ಗೆ ಮರು ಪರಿಶೀಲನೆ ನಡೆಸಬೇಕೆಂದು ಜಿಯೋ ಹಾಟ್‌ಸ್ಟಾರ್‌ ಐಸಿಸಿಗೆ ಮನವಿ ಮಾಡಿದೆ.

Share This Article