ಮಹತ್ವದ ದಾಖಲೆಗಳನ್ನು ವಾಟ್ಸಪ್ ಮಾಡಬೇಡಿ, ಸಭೆಗಳಲ್ಲಿ ಫೋನ್ ಬಳಸಬೇಡಿ – ಕೇಂದ್ರ ಸರ್ಕಾರ ಸೂಚನೆ

Public TV
2 Min Read

ನವದೆಹಲಿ: ದೇಶದ ಮಹತ್ವದ ಮಾಹಿತಿಗಳು ಸೋರಿಕೆ ಆಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಸಂವಹನ ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಇನ್ನೂ ಮುಂದೆ ಮಹತ್ವದ ದಾಖಲೆಗಳನ್ನು ವಾಟ್ಸಪ್ ಮಾಡದಂತೆ ಕೇಂದ್ರ, ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಆಪ್ತ ಮೂಲಗಳ ಪ್ರಕಾರ, ಈಗಾಗಲೇ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಅದರಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ವಾಟ್ಸಪ್, ಟೆಲಿಗ್ರಾಮ್ ಸಹಿತ ಇತರ ಸಾಮಾಜಿಕ ಜಾಲತಾಣದಲ್ಲಿ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳದಂತೆ ಸೂಚಿಸಲಾಗಿದೆ. ಈ ಎಲ್ಲಾ ಅಪ್ಲಿಕೇಶನ್‍ಗಳ ಸರ್ವರ್‌ಗಳನ್ನು ವಿದೇಶದಲ್ಲಿರುವ ಖಾಸಗಿ ಕಂಪನಿಗಳು ನಿಯಂತ್ರಿಸುತ್ತಿದೆ. ಇದರಿಂದಾಗಿ ನಮ್ಮ ದೇಶದ ಮಹತ್ವದ ದಾಖಲೆಗಳು ಸೋರಿಕೆಯಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿ ಈ ನಿರ್ಧಾರಕ್ಕೆ ಕೇಂದ್ರ ಮುಂದಾಗಿದೆ ಎಂದು ಮಾಹಿತಿ ಇದೆ. ಇದನ್ನೂ ಓದಿ: ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಸಾರ – ಪಾಕ್‌ ಆಧಾರಿತ 35 ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

ಸರ್ಕಾರಿ ಅಧಿಕಾರಿಗಳಲ್ಲದೆ, ಕೊರೊನಾದಿಂದಾಗಿ ಹಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ (WFH) ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಈ ವೇಳೆ ಅಧಿಕಾರಿಗಳು ಸಂವಹನಕ್ಕಾಗಿ ವಾಟ್ಸಪ್ ಬಳಸುತ್ತಿದ್ದಾರೆ. ಇನ್ನುಮುಂದೆ ಇ-ಕಚೇರಿ ಅಪ್ಲಿಕೇಶನ್‍ಗಳನ್ನು ಮಾತ್ರ ಬಳಸಬೇಕು ಎಂದು ಕೇಂದ್ರ ಸೂಚನೆ ನೀಡಿದೆ. ಇದನ್ನೂ ಓದಿ: ಕೊರೊನಾ ರಾಜ್ಯದಲ್ಲಿ ಏರಿಕೆ , ಬೆಂಗ್ಳೂರಲ್ಲಿ ಇಳಿಕೆ – ಒಟ್ಟು 48,049 ಕೇಸ್, 22 ಸಾವು

ಇದರೊಂದಿಗೆ ಯಾವುದೇ ಮಹತ್ವದ ಅಥವಾ ರಹಸ್ಯ ದಾಖಲೆಗಳನ್ನು ಅಧಿಕಾರಿಗಳು ಮೊಬೈಲ್ ಫೋನ್‍ಗಳಲ್ಲಿ ಸಂಗ್ರಹಿಸಿ ಇಡಬಾರದು. ಹೊಸ ಸಂವಹನ ಅಪ್ಲಿಕೇಶನ್‍ಗಳ ಸರ್ವರ್‌ಗಳು ಖಾಸಗಿ ಮಾಲೀಕತ್ವದ ಒಡೆತನದಲ್ಲಿರುವುದರಿಂದ ರಾಷ್ಟ್ರೀಯ ಭದ್ರತೆ ಮತ್ತು ಇತರ ಸಂಬಂಧಿತ ಸಮಸ್ಯೆಗಳಿಗೆ ದೊಡ್ಡ ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇದೆ. ಹಾಗಾಗಿ ಮೊಬೈಲ್ ಮೂಲಕ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಮತ್ತು ಸಭೆಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡದಂತೆ ಮಾರ್ಗಸೂಚಿ ಹೊರಡಿಸಿದೆ.

FB, Instagram, Whatsapp

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‍ಫೋನ್‍ಗಳಲ್ಲಿ ವ್ಯವಹಾರ ಹೆಚ್ಚುತ್ತಿದೆ ಅಲ್ಲದೆ ಕೆಲ ಅಫ್ಲೀಕೇಶನ್‍ಗಳಾದ‌ Amazon’s Alexa, Apple HomePod ಇವುಗಳು ಮತ್ತು ಗೂಗಲ್ ಮೀಟ್, ಜೂಮ್ ಅಪ್ಲಿಕೇಶನ್‍ಗಳನ್ನು ಕೂಡ ಬಳಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಡ್ಯಾನ್ಸ್ ಮಾಡಿದ್ದಕ್ಕೆ ವರ ಕೆನ್ನೆಗೆ ಹೊಡೆದನೆಂದು ಬೇರೊಬ್ಬನ ವರಿಸಿದ ವಧು!

Share This Article
Leave a Comment

Leave a Reply

Your email address will not be published. Required fields are marked *