ಪಾಕ್‍ಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ಅಮೆರಿಕ!

Public TV
1 Min Read

ನವದೆಹಲಿ: ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ 300 ಮಿಲಿಯನ್ ಡಾಲರ್ (ಸುಮಾರು 2,100 ಕೋಟಿ ರೂ.) ಮೊತ್ತದ ಭದ್ರತಾ ಅನುದಾನಕ್ಕೆ ಕತ್ತರಿ ಹಾಕಿದೆ.

ಯುಸ್ ಒಕ್ಕೂಟ ಬೆಂಬಲ ನಿಧಿ(ಸಿಎಸ್‍ಎಫ್)ಯಿಂದ ಪಾಕ್‍ಗೆ ನೀಡಲಾಗುತ್ತಿದ್ದ ಅನುದಾನ ಕಡಿತಗೊಳಿಸಲು ಪೆಂಟಗನ್ ನಲ್ಲಿ ನಡೆದ ಸಭೆಯಲ್ಲಿ ಅಮೆರಿಕ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಪೆಂಟಗಾನ್ ವಕ್ತಾರ, ಪಾಕಿಸ್ತಾನ ಉಗ್ರ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳು ನಿರೀಕ್ಷಿತ ಪರಿಣಾಮದಲ್ಲಿ ಇಲ್ಲದ ಕಾರಣ 2018 ಜೂನ್/ಜುಲೈ ಅವಧಿಯಲ್ಲಿ ನೀಡಬೇಕಿದ್ದ ಅನುದಾನವನ್ನು ಕಡಿತಗೊಳಿಸಿದ್ದಾಗಿ ತಿಳಿಸಿದ್ದಾರೆ.

ಈಗಾಗಲೇ ಅಮೆರಿಕ ಹಲವು ಬಾರಿ ಉಗ್ರರ ನಿಯಂತ್ರಣ ಕುರಿತು ಕಠಿಣ ಕ್ರಮಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಹೇಳಿದೆ. ಆದರೆ ಪಾಕ್ ನಿರೀಕ್ಷಿತ ಪ್ರಮಾಣದಲ್ಲಿ ಕ್ರಮಕೈಗೊಂಡಿಲ್ಲ. ಅದ್ದರಿಂದ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಪಾಕ್ ರಕ್ಷಣಾ ಇಲಾಖೆ ನೀಡಲು ಉದ್ದೇಶಿಲಾಗಿದ್ದ 800 ಮಿಲಿಯನ್ ಡಾಲರ್ ಅನುದಾನ ಕುರಿತು ಮರು ಚಿಂತನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕುರಿತು ಯುಎಸ್ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಕ್ ಪಾಕಿಸ್ತಾನ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಪ್ರಮುಖ ಉಗ್ರಗಾಮಿ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ ಸೇರಿದಂತೆ ಇತರೆ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಲು ತಿಳಿಸಿದ್ದರು. ಆದರೆ ಇದಕ್ಕೆ ಪೂರಕ ಪ್ರತಿಕ್ರಿಯೆ ಪಾಕ್ ನೀಡದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://twitter.com/ippatel/status/1036095040781660160

Share This Article
Leave a Comment

Leave a Reply

Your email address will not be published. Required fields are marked *