ಯಾವುದೇ ಅಪರಾಧ ಮಾಡಿಲ್ಲ, ಹಾಗಾಗಿ ಟ್ರಬಲ್ ಇಲ್ಲ: ಡಿಕೆ ಸುರೇಶ್

Public TV
1 Min Read

ಬೆಂಗಳೂರು: ನಾವು ಯಾವುದೇ ಅಪರಾಧ ಮಾಡಿಲ್ಲ. ಹಾಗಾಗಿ ಯಾವುದೇ ಟ್ರಬಲ್ ಇಲ್ಲ. ರಾಜಕೀಯವಾಗಿ ಚಕ್ರವ್ಯೂಹ ಹೆಣೆಯುತ್ತಾರೆ. ಅದನ್ನು ಡಿಕೆಶಿ (DK Shivakumar) ಎದುರಿಸುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ (DK Suresh) ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನ್ಯಾಯಾಲಯ ತೀರ್ಪಿಗೆ ಮೇಲ್ಮನವಿ ಹೋಗುವುದು ಸರ್ವೇ ಸಾಮಾನ್ಯ. ನಮಗೆ ಸಮಯಾವಕಾಶ ಇದೆ. ವಕೀಲರ ಜೊತೆ ಚರ್ಚೆ ಮಾಡಿ ಡಿಕೆಶಿ ಅವರು ಮುಂದಿನ ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ ಉಚ್ಛಾಟನೆ

ಇದೇ ವೇಳೆ ಹೆಚ್‌ಡಿಕೆಯಿಂದ (HD Kumaraswamy) ಮತ್ತೆ ತಿಹಾರ್ ಜೈಲು ನೆನಪಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನ್ಯಾಯಾಲಯ ಅವರ ಸ್ವತ್ತು ಅಲ್ಲ. ಅವರು ಏನು ಬೇಕೋ ಅದನ್ನು ಹೇಳುತ್ತಿರುತ್ತಾರೆ. ನಮಗೆ ಏನು ಬೇಕೋ ನಾವು ಮಾಡುತ್ತಾ ಇರುತ್ತೇವೆ. ಲೋಕಸಭೆ ಚುನಾವಣೆಗೆ (Lok Sabha Elections) ರಾಜಕೀಯವಾಗಿ ಅಡೆತಡೆಗಳ ಬಗ್ಗೆ ನಮಗೆ ಯಾವುದೇ ವಾತಾವರಣ ಕಾಣಿಸುತ್ತಿಲ್ಲ. ಎಲ್ಲಾ ತನಿಖೆಗಳನ್ನು ಡಿಕೆಶಿ ಎದುರಿಸಿದ್ದಾರೆ. ಸಿಬಿಐಗೆ (CBI) ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಅನುಕಂಪವನ್ನು ನಮ್ಮ ದೇಶದಲ್ಲಿ ಹೇಗೆ ಬೇಕಾದ್ರು ಉಪಯೋಗ ಮಾಡಿಕೊಳ್ತಾರೆ:ಡಿಕೆಶಿಗೆ ಕುಮಾರಸ್ವಾಮಿ ಠಕ್ಕರ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್