11 ದಿನ ಪ್ರಯಾಣ.. ಇಲ್ಲಿ ಬೆತ್ತಲೆ ಜಗತ್ತು ಅನಾವರಣ; ವಿಶ್ವದ ಅತಿದೊಡ್ಡ ‘ನ್ಯೂಡ್‌ ಕ್ರೂಸ್‌ ಟ್ರಾವೆಲ್‌’ ಬಗ್ಗೆ ನಿಮಗೆಷ್ಟು ಗೊತ್ತು?

By
4 Min Read

ಪ್ರಿಯಕರ ಅಥವಾ ಪ್ರೇಯಸಿ ಜೊತೆ ಪ್ರೇಮಿಗಳ ದಿನವನ್ನು ಡಿಫರೆಂಟ್ ಆಗಿ ಆಚರಿಸಬೇಕೆಂಬುದು ಎಲ್ಲರ ಬಯಕೆಯಾಗಿರುತ್ತದೆ. ಪ್ರೇಮಿಯ ಜೊತೆ ಸಮಯ ಕಳೆಯುವುದೆಂದರೆ ಏನೋ ಒಂಥರ. ಅದು ಸಾಮಾನ್ಯದಂತೆ ಇರಲ್ಲ. ಸದಾ ನೆನಪಿನಲ್ಲಿ ಉಳಿಯುವ, ಮನಸ್ಸಿಗೆ ಮುದ ನೀಡುವ ಕ್ಷಣ ನಮ್ಮದಾಗಬೇಕೆಂಬ ತವಕ ಇರುತ್ತದೆ. ಅದಕ್ಕಾಗಿ ಪ್ರೇಮಿಗಳ ದಿನಕ್ಕೆ ಎಷ್ಟೋ ಸಮಯ ಮುಂಚಿತವಾಗಿ ಪ್ಲ್ಯಾನ್ ಕೂಡ ನಡೆದಿರುತ್ತದೆ. ಈ ಸಲ ಲವ್ವರ್ಸ್ ಡೇಗೆ ಅಲ್ಲಿ ಹೋಗೋಣ, ಇಲ್ಲಿ ಹೋಗೋಣ ಅಂತ ಮಾತುಕತೆ ನಡೆದಿರುತ್ತದೆ. ಆ ರೀತಿಯ ರೊಮ್ಯಾಂಟಿಕ್ ಅನುಭವ ತಮ್ಮದಾಗಿಸಿಕೊಳ್ಳಬೇಕೆಂದು ಬಯಸುವ ಪ್ರೇಮಿಗಳಿಗೆ ವಿಶೇಷ ಆಫರ್‌ವೊಂದು ಸಿಕ್ಕಿದೆ. ಯಾರೂ ಉಹಿಸಿರದ ರೀತಿಯ ಅನುಭವ ಇಲ್ಲಿ ಸಿಗುತ್ತದೆ. ಅದೇನು ಅಂತೀರಾ?..

11 ದಿನಗಳ ಪ್ರಯಾಣ, ಮೈಮೇಲೆ ಬಟ್ಟೆಯೇ ಇಲ್ಲ, ಸಂಪೂರ್ಣ ಬೆತ್ತಲಾಗಿ, ಪ್ರೇಮಿಯ ಜೊತೆ ಪ್ರಕೃತಿ ಮಡಿಲಲ್ಲಿ, ನೀಲ ಆಕಾಶ-ನೀಲಿ ಸಾಗರದ ಮಡಿಲಲ್ಲಿ, ತಂಗಾಳಿಯ ಸೋಂಕಲ್ಲ, ನೌಕೆಯಲ್ಲಿ ಜೀಕುತ ಸಾಗುವುದು ಎಷ್ಟು ಸೊಗಸಲ್ಲವೇ? ಇಲ್ಲಿ ನಾಚಿಕೆಯ ಮುಖಕ್ಕೆ ಬಟ್ಟೆ ಮುಚ್ಚಿ, ಸ್ವತಂತ್ರ ಜೋಡಿ ಹಕ್ಕಿಗಳಂತೆ ವಿಹರಿಸಬಹುದು. ಐಷಾರಾಮಿ ನೌಕಾಯಾನ, ಕೆರಿಬಿಯನ್ ಸೂರ್ಯಾಸ್ತಗಳು, ಗೌರ್ಮೆಟ್ ಡಿನ್ನರ್‌ಗಳು (ಉತ್ತಮ ಗುಣಮಟ್ಟದ ಬಗೆ ಬಗೆಯ ಡಿಶ್‌ಗಳ ಊಟ). ಇಲ್ಲಿ ಎಲ್ಲಾ ಸೌಲಭ್ಯವೂ ಲಭ್ಯ. ಅಂತಹದ್ದೊಂದು ಐಷಾರಾಮಿ ಪ್ರಯಾಣದ ಯೋಜನೆಯೊಂದನ್ನು ರೂಪಿಸಲಾಗಿದೆ. ಇದು ಒಂದೆರಡು ಲಕ್ಷದ್ದಲ್ಲ, ಬರೋಬ್ಬರಿ 43 ಲಕ್ಷದ ಪ್ಯಾಕೇಜ್.

ಬೆತ್ತಲೆ ಪ್ರಯಾಣ
ಮಿಯಾಮಿ, ಫ್ಲೋರಿಡಾದಿಂದ ಐಷಾರಾಮಿ ನಾರ್ವೇಜಿಯನ್ ಕ್ರೂಸ್‌ನಲ್ಲಿ ನೌಕಾಯಾನ ಮಾಡುವ ಯೋಜನೆ ಇದಾಗಿದೆ. ಇಡೀ ಪ್ರಪಂಚವೇ ಪ್ರೀತಿಯ ಹೊನಲಲ್ಲಿ ತೇಲಾಡುವ ದಿನದಿಂದಲೇ ಈ ಬೆತ್ತಲೆಯ ಪ್ರಯಾಣವೂ ಆರಂಭವಾಗುತ್ತದೆ. ‘ಬಿಗ್ ನ್ಯೂಡ್ ಬೋಟ್’ ಎಂದೇ ಹೆಸರಾಗಿರುವ ಹಡಗಿನಲ್ಲಿ ಪ್ರೇಮಿಗಳು ಸಮುದ್ರ ಪ್ರಯಾಣ ಮಾಡಬಹುದು. ಇದನ್ನು ಯುಎಸ್ ಮೂಲದ ಕಂಪನಿ ಬೇರ್ ನೆಸೆಸಿಟೀಸ್ ಆಯೋಜಿಸಿದೆ. ಇಲ್ಲಿ ಯಾರು ಕೂಡ ಬಟ್ಟೆ ಬಗ್ಗೆ (ಸ್ವಿಮ್‌ ಸೂಟ್‌) ಚಿಂತಿಸಬೇಕಿಲ್ಲ. ಸಂಪೂರ್ಣ ನಗ್ನರಾಗಿ, ಕಾಕ್ಟೈಲ್‌ ಹೀರುತ್ತಾ ಬಿಳಿ ಮರಳಿನ ಕಡಲತೀರಗಳಲ್ಲಿ ಬಿಗುಮಾನವಿಲ್ಲದೇ ಎಂಜಾಯ್‌ ಮಾಡಬಹುದು.

ಯಾವಾಗ ಮತ್ತು ಎಲ್ಲಿ?
2026 ರ ಆವೃತ್ತಿಯು ಫೆಬ್ರವರಿ 9 ರಿಂದ 20 ರವರೆಗೆ ಬಿಗ್‌ ನ್ಯೂಡ್‌ ಬೋಟ್‌ ಪ್ರಯಾಣ ಇರಲಿದೆ. ಯುಎಸ್‌ ಮಿಯಾಮಿಯಿಂದ ಒಂದು ಸುತ್ತಿನ ಪ್ರವಾಸ ಇದಾಗಿದೆ. ಪ್ರೇಮಿಗಳ ದಿನದ ವಿಶೇಷಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ. ಥೀಮ್ ನೈಟ್ಸ್‌, ವರ್ಕ್‌ಶಾಪ್ಸ್, ಆನ್‌ಬೋರ್ಡ್ ಪಾರ್ಟಿಗಳು ಎಲ್ಲವೂ ಇರಲಿದೆ. ಎಬಿಸಿ ದ್ವೀಪಗಳಲ್ಲಿ (ಅರುಬಾ, ಬೊನೈರ್ ಮತ್ತು ಕುರಾಕೊ) ವರ್ಲ್ಡ್‌ ಕ್ಲಾಸ್‌ ಸ್ನಾರ್ಕಿಂಗ್‌ ಮತ್ತು ಡೈವಿಂಗ್‌ ಮಾಡಬಹುದು. ಜಮೈಕಾದ ಹಸಿರ ಸೊಬಗನ್ನು ಸವಿಯಬಹುದು. ಇಲ್ಲಿ ಎರಡು ಪ್ರಮುಖ ನಿಲುಗಡೆಗಳು. ನಾರ್ವೇಜಿಯನ್ ಕ್ರೂಸ್ ಲೈನ್‌ನ ಖಾಸಗಿ ಬಹಮಿಯನ್ ದ್ವೀಪದ ಗ್ರೇಟ್ ಸ್ಟಿರಪ್ ಕೇನಲ್ಲಿ ಎರಡು ಪ್ರಮುಖ ನಿಲುಗಡೆಗಳು ಇರುತ್ತವೆ. ಹಡಗಿನ ಪ್ರಯಾಣದಲ್ಲಿ ಸುಂದರ ಅನುಭವ ತಮ್ಮದಾಗಿಸಿಕೊಳ್ಳಬಹುದು. ಫೆಬ್ರವರಿ ಸರಿಯಾದ ಸಮಯವಲ್ಲ ಎಂದುಕೊಳ್ಳುವವರಿಗೆ, ಈ ಬೆತ್ತಲೆ ಕ್ರೂಸ್ ಪ್ರಯಾಣವು 2026ರ ಜುಲೈ 7 ಮತ್ತು ಜುಲೈ 26 ಕ್ಕೂ ಲಭ್ಯವಿರುತ್ತದೆ.

ಹಡಗಿನಲ್ಲಿ 16 ರೆಸ್ಟೋರೆಂಟ್‌, 14 ಬಾರ್‌ಗಳು
ನಾರ್ವೇಜಿಯನ್ ಪರ್ಲ್‌ನಲ್ಲಿ ಒಮ್ಮೆ 2,300 ಪ್ರಯಾಣಿಕರು ಪ್ರಯಾಣಿಸಬಹುದು. ಇದರಲ್ಲಿ 16 ರೆಸ್ಟೋರೆಂಟ್‌ಗಳು, 14 ಬಾರ್‌ಗಳು, ಎರಡು ಬೌಲಿಂಗ್ ಲೇನ್‌ಗಳು, ಒಂದು ಕ್ಯಾಸಿನೊ, ಸ್ಪಾ ಮತ್ತು ಗಾರ್ಡನ್ ವಿಲ್ಲಾಗಳಿವೆ. ಫ್ರೆಂಚ್‌, ಬ್ರೆಜಿಲಿಯನ್‌ ಮೆನುವಿನ ರುಚಿಕರ ಖಾದ್ಯಗಳು ಲಭ್ಯವಿರುತ್ತವೆ. ಎಲ್ಲಾ ಸೌಲಭ್ಯಗಳು ದಿನದ 24 ಗಂಟೆಗಳೂ ಲಭ್ಯವಿರುತ್ತವೆ. ವಿರಾಮ ಬೇಕೆನಿಸಿದರೆ ಹಾಟ್-ಸ್ಟೋನ್ ಮಸಾಜ್‌ಗಳನ್ನು ಹೊಂದಿರುವ ಮಂದಾರ ಸ್ಪಾ, ಸುಂಕ ರಹಿತ ಶಾಪಿಂಗ್‌ಗಾಗಿ ಡಿಸೈನರ್ ಬೂಟೀಕ್‌ಗಳು ಮತ್ತು ವಿಸ್ಕಿ ರುಚಿಗಾಗಿ ಲಾಂಜ್‌ಗಳು ಕೂಡ ಇವೆ.

ಬೆತ್ತಲಾಗಿ ಸಮುದ್ರದಲ್ಲಿದ್ದಾಗ ಡೆಕ್‌ನಲ್ಲಿ ಅಥವಾ ಪೂಲ್‌ಗಳು ಮತ್ತು ಹಾಟ್ ಟಬ್‌ಗಳಲ್ಲಿ ಸೂರ್ಯನ ಸ್ನಾನ ಮಾಡಬಹುದು. ಬಹುತೇಕ ಎಲ್ಲರೂ ಇದನ್ನು ಬೆತ್ತಲೆಯಾಗಿ ಮಾಡುತ್ತಾರೆ. ಹಡಗು ಕೆರಿಬಿಯನ್‌ನಲ್ಲಿರುವ ನಾರ್ವೇಜಿಯನ್ ಕ್ರೂಸ್ ಲೈನ್‌ನ ಖಾಸಗಿ ದ್ವೀಪಕ್ಕೂ ಭೇಟಿ ನೀಡುತ್ತದೆ. ಅಲ್ಲಿ ಎಲ್ಲರೂ ಬೆತ್ತಲೆ ಭಾಗಿಯಾಗುತ್ತಾರೆ. ನೃತ್ಯ ಪಾರ್ಟಿಗಳಿರುತ್ತವೆ. ಎಲ್‌ಇಡಿ ರಾತ್ರಿ ಪ್ರಕಾಶಮಾನವಾಗಿರುತ್ತದೆ. ನೃತ್ಯ ಪಾರ್ಟಿಯ ಎರಡು ರಾತ್ರಿಗಳಲ್ಲಿ ಸಂಗೀತ ಕಲಾವಿದರಿಂದ ನಗ್ನ ನೃತ್ಯ ಪ್ರದರ್ಶನವಿರುತ್ತದೆ. ಕೆಲವು ವಿಹಾರಗಳು ಕೂಡ ನಗ್ನತೆಗೆ ಮೀಸಲಾಗಿರುತ್ತವೆ.

ಫೋಟೊ ತೆಗೆಯುವಂತಿಲ್ಲ
ಬಿಗ್‌ ನ್ಯೂಡ್‌ ಬೋಟ್‌ ಪ್ರಯಾಣದಲ್ಲಿ ಒಂದಷ್ಟು ನಿಯಮಗಳಿದ್ದು, ಅವುಗಳನ್ನು ಉಲ್ಲಂಘಿಸುವಂತಿಲ್ಲ. ಊಟದ ಹಾಲ್‌ಗಳು, ಕ್ಯಾಪ್ಟನ್‌ ಸ್ವಾಗತ, ಸಾಂಸ್ಕೃತಿಕ ಪ್ರದರ್ಶನಗಳ ಸಮಯದಲ್ಲಿ ಹಾಗೂ ಹಡಗು ಬಂದರಿಗೆ ಬಂದ ಸಂದರ್ಭದಲ್ಲಿ ಕಡ್ಡಾಯವಾಗಿ ಬಟ್ಟೆ ಧರಿಸಬೇಕು. ಸ್ವಿಮ್ಮಿಂಗ್ ಪೂಲ್‌ಗಳು ಮತ್ತು ನೃತ್ಯ ಮಹಡಿಗಳ ಸುತ್ತಲೂ ಫೋಟೊ/ವೀಡಿಯೋ ತೆಗೆಯುವಂತಿಲ್ಲ. ಯಾವುದೇ ದುಷ್ಕೃತ್ಯಗಳಿಗೆ ಇಲ್ಲಿ ಆಸ್ಪದ ಇಲ್ಲ. ಅಂತಹ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅನುಚಿತ ವರ್ತನೆ ತೋರುವವರ ಟಿಕೆಟ್‌ ಕ್ಯಾನ್ಸಲ್‌ ಮಾಡಿ ಮುಂದಿನ ಬಂದರಲ್ಲಿ ಇಳಿಸಲಾಗುತ್ತದೆ. ಅಂತಹವರಿಗೆ ಯಾವುದೇ ಮರುಪಾವತಿ ಇರುವುದಿಲ್ಲ.

ಸಾಮಾಜಿಕ ನಗ್ನತೆ ಲೈಂಗಿಕ ಚಟುವಟಿಕೆಯಲ್ಲ
1990 ರಿಂದಲೂ ಸಾಮಾಜಿಕ ನಗ್ನತೆಯ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಈ ಹೋರಾಟದ ಧ್ಯೇಯವನ್ನು ಸಂಪೂರ್ಣವಾಗಿ ಒಪ್ಪಲಾಗುವುದಿಲ್ಲ. ಬಟ್ಟೆ ಐಚ್ಛಿಕ ವಿಚಾರ. ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಲೈಂಗಿಕತೆಯು ವಿವಸ್ತ್ರಗೊಳ್ಳುವ ಸ್ಥಿತಿಯಲ್ಲ, ಅದು ಮನಸ್ಸಿನ ಸ್ಥಿತಿ ಎಂಬುದು ನಮ್ಮ ಭಾವನೆ. ಸಾಮಾಜಿಕ ನಗ್ನತೆ ಲೈಂಗಿಕ ಚಟುವಟಿಕೆಯಲ್ಲ. ನಗ್ನತೆಯು ನೈಸರ್ಗಿಕ ಮತ್ತು ಸುಂದರವಲ್ಲ ಎಂಬ ತಪ್ಪು ಕಲ್ಪನೆ ಇದೆ. ಅದನ್ನು ಹೋಗಲಾಡಿಸಲು ನಾವು ಶ್ರಮಿಸುತ್ತೇವೆ. ಬೆತ್ತಲೆ ರಜೆಯನ್ನು ಸ್ವೀಕರಿಸುವಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ. ಇಂತಹ ಕ್ರೂಸ್ ಚಾರ್ಟರ್‌ಗಳೇ ನಮ್ಮ ಯಶಸ್ಸಿಗೆ ಸಾಕ್ಷಿಯಾಗಿವೆ ಎಂದು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಪ್ರಯಾಣಕ್ಕೆ ಬೇಕು 43 ಲಕ್ಷ
ಬಿಗ್‌ ನ್ಯೂಡ್‌ ಬೋಟ್‌ ಪ್ರಯಾಣದ ಟಿಕೆಟ್ ಬೆಲೆ 43 ಲಕ್ಷ ರೂ. ಆಗುತ್ತದೆ. 11 ದಿನಗಳ ಪ್ರಯಾಣ ಇರುತ್ತದೆ. ಸಮುದ್ರಯಾನ, ಉತ್ತಮ ಗುಣಮಟ್ಟದ ಆಹಾರ ಸೌಲಭ್ಯ ಇಲ್ಲಿ ಸಿಗುತ್ತದೆ. ಕಯಾಕ್ ಮಾಡಬೇಕೆ, ಜಿಪ್‌ಲೈನ್ ಮಾಡಬೇಕೆ ಅಥವಾ ಏನೂ ಧರಿಸದೆ ಕೆರಿಬಿಯನ್ ಬಿಸಿಲಿನಲ್ಲಿ ಮೈಯೊಡ್ಡಿ ಸ್ನಾನ ಮಾಡಬೇಕೆ ನಾನಾ ಬಗೆಯ ವ್ಯವಸ್ಥೆ ಇಲ್ಲುಂಟು. ಪ್ರತಿ ವರ್ಷ ಸಾವಿರಾರು ಪ್ರಯಾಣಿಕರು ಬುಕ್‌ ಮಾಡುತ್ತಿದ್ದಾರೆ. ಅನೇಕರು ಪುನರಾವರ್ತಿತರಾಗಿ ಟಿಕೆಟ್‌ ಬುಕ್‌ ಮಾಡುತ್ತಿದ್ದಾರೆ. ಸಮುದ್ರ, ಸೂರ್ಯನನ್ನು ವೀಕ್ಷಿಸುವ ಪ್ರಯಾಣ ಅಷ್ಟೇ ಅಲ್ಲ, ಅದರಾಚೆಗೆ ಜೀವನದಲ್ಲಿ ಒಮ್ಮೆಯಾದರೂ ಬೆತ್ತಲೆ ಜಗತ್ತಿನ ಸೊಬಗನ್ನು ಸವಿಯಲೆಂಬುದು ಈ ಯೋಜನೆಯ ಉದ್ದೇಶ.

Share This Article