ಅಗ್ನಿಪಥ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ಸೇನಾ ವ್ಯವಹಾರಗಳ ಇಲಾಖೆ

Public TV
1 Min Read

ನವದೆಹಲಿ: ಅಗ್ನಿಪಥ್ ಯೋಜನೆ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ರೆಜಿಮೆಂಟಲ್ ಪ್ರಕ್ರಿಯೆಯೂ ಬದಲಾಗುವುದಿಲ್ಲ ಎಂದು ಸೇನಾ ವ್ಯವಹಾರಗಳ ಇಲಾಖೆ ಮಂಗಳವಾರ ಸ್ಪಷ್ಟಪಡಿಸಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, ಉದ್ಯೋಗಾಕಾಂಕ್ಷಿಗಳು ಯೋಜನೆ ವಿರೋಧಿಸಿ ನಾವು ಯಾವುದೇ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ನಮಗೆ ಸಾಬೀತುಪಡಿಸಬೇಕು. ಅಂತಹವರನ್ನು ಮಾತ್ರ ನಾವು ಪರಿಗಣಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಗ್ನಿಪಥ್‌ ಯೋಜನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ದೋವಲ್‌

ಭಾರತದಲ್ಲಿರುವಷ್ಟು ಜನಸಂಖ್ಯಾ ಲಾಭಾಂಶವನ್ನು ಜಗತ್ತಿನ ಯಾವುದೇ ದೇಶ ಹೊಂದಿಲ್ಲ. 50 ರಷ್ಟು ಯುವಕರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಸೇನೆಯು ಇದರ ಸದುಪಯೋಗ ಪಡೆದುಕೊಳ್ಳಬೇಕು. ನಾವು ಈ ಜನಸಂಖ್ಯಾ ಲಾಭಾಂಶವನ್ನು ಪ್ರತಿಬಿಂಬಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೂನ್ 17 ರಂದು ಭಾರತೀಯ ರಕ್ಷಣಾ ಸೇವೆಗಳ ಮೂವರು ಮುಖ್ಯಸ್ಥರು, ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಭಾರತೀಯ ಯುವಕರಿಗೆ ನೇಮಕಾತಿ ಪ್ರಕ್ರಿಯೆಯಾದ ʼಅಗ್ನಿಪಥ್ʼ ಯೋಜನೆಗೆ ಅನುಮೋದನೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದರು. ಇದನ್ನೂ ಓದಿ: ಅಗ್ನಿಪಥ್ ಆದೇಶ ನೀಡೋ ಮುನ್ನ ನಮ್ಮ ಮನವಿ ಆಲಿಸಿ- ಸುಪ್ರೀಂಗೆ ಕೇಂದ್ರದಿಂದ ಕೇವಿಯಟ್

ಈ ಯೋಜನೆ ವಿರೋಧಿಸಿ ದೇಶಾದ್ಯಂತ ಯುವಸಮುದಾಯ ವ್ಯಾಪಕ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಯು ಹಿಂಸಾಚಾರ ಸ್ವರೂಪ ಪಡೆದುಕೊಂಡಿದೆ. ಯೋಜನೆ ಕುರಿತು ಕೇಂದ್ರ ಸರ್ಕಾರ ಹಾಗೂ ಸೇನಾಧಿಕಾರಿಗಳು ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *