ನವದೆಹಲಿ: ಪ್ಯಾರಿಸ್ನಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ಭಾರತದ ಕ್ರೀಡಾ ತಾರೆ ನೀರಜ್ ಚೋಪ್ರಾ (Neeraj Chopra) ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇದು 2025ನೇ ಸಾಲಿನಲ್ಲಿ ಚೋಪ್ರಾ ಪಾಲಿಗೆ ಒಲಿದ ಮೊದಲ ಪ್ರಶಸ್ತಿಯಾಗಿದೆ. ಈ ಮೂಲಕ 2 ವರ್ಷಗಳ ಬಳಿಕ ಡೈಮಂಡ್ ಲೀಗ್ನಲ್ಲಿ (Paris Diamond League) ಗೆದ್ದ ಮೊದಲ ಪ್ರಶಸ್ತಿಯೂ ಆಗಿದೆ.
ಪ್ಯಾರಿಸ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಜರ್ಮನಿಯ ಜೂಲಿಯನ್ ವೆಬರ್ (Julian Weber) ಅವರನ್ನು ಹಿಂದಿಕ್ಕಿ ಚೋಪ್ರಾ ಈ ಸಾಧನೆ ಮಾಡಿದರು. 2023ರ ಜೂನ್ನಲ್ಲಿ ಲಾಸೆನ್ನಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ನೀರಜ್ ಚೋಪ್ರಾ ಕೊನೆಯ ಬಾರಿಗೆ ಗೆದ್ದಿದ್ದರು. ಈಗ ಮತ್ತೆ ಗೆದ್ದು ಮಿಂಚಿದ್ದಾರೆ. ಆದ್ರೆ ನೀರಜ್ 90 ಮೀಟರ್ ಗುರಿ ತಲುಪಲೇ ಇಲ್ಲ ಅನ್ನೋದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇದನ್ನೂ ಓದಿ: ಆರ್ಸಿಬಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ – ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಬಾಂಬ್
ಶುಕ್ರವಾರ ಪ್ಯಾರಿಸ್ನಲ್ಲಿ (Paris) ನಡೆದ ಡೈಮಂಡ್ ಲೀಗ್ ಅವರು 88.16 ಮೀಟರ್ ದೂರ ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ಹಿಂದೆ ದೋಹಾ ಡೈಮಂಡ್ ಲೀಗ್ನಲ್ಲಿ 90.23 ಮೀಟರ್ ಎಸೆದಿದ್ದರೂ, ವೆಬರ್ ಅವರನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಆದ್ರೆ ಈ ಬಾರಿ ನೀರಜ್ 88.16 ಮೀಟರ್ ಎಸೆದರೂ ಪ್ರಥಮ ಸ್ಥಾನಕ್ಕೆ ಜಿಗಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ನಾನು ಮಹಿಳಾ ಕ್ರಿಕೆಟ್ಗೆ ಅರ್ಹಳು: ಟ್ರಾನ್ಸ್ಜೆಂಡರ್ ಕ್ರೀಡಾಪಟುಗಳನ್ನು ಸೇರಿಸಿಕೊಳ್ಳುವಂತೆ ICC, BCCIಗೆ ಅನಯಾ ಮನವಿ
ಸ್ಪರ್ಧೆಯಲ್ಲಿ ಐವರು ಅಥ್ಲೀಟ್ಗಳು 90 ಮೀಟರ್ಗಿಂತ ಹೆಚ್ಚು ದೂರ ಎಸೆಯುವ ಸಾಮರ್ಥ್ಯ ಹೊಂದಿದ್ದರು. ಚೋಪ್ರಾ ಅವರ ಮೊದಲ ಪ್ರಯತ್ನವೇ ಅವರನ್ನು ಗೆಲ್ಲಿಸಿತು. ನಂತರದ ಪ್ರಯತ್ನಗಳಲ್ಲಿ 85.10 ಮೀಟರ್ ಎಸೆದರು. ಮೂರು ಬಾರಿ ಫೌಲ್ ಮಾಡಿಕೊಂಡರು. ಕೊನೆಯ ಪ್ರಯತ್ನದಲ್ಲಿ 82.89 ಮೀಟರ್ ಎಸೆದರು. ಜೂಲಿಯನ್ ವೆಬರ್ 87.88 ಮೀಟರ್ ಎಸೆದು 2ನೇ ಸ್ಥಾನ ಪಡೆದರು. ಬ್ರೆಜಿಲ್ನ ಲೂಯಿಸ್ ಮೌರಿಸಿಯೊ ಡಾ ಸಿಲ್ವಾ 86.62 ಮೀಟರ್ ಎಸೆದು 3ನೇ ಸ್ಥಾನ ಪಡೆದರು. ಇದನ್ನೂ ಓದಿ: England vs India 1st Test – ಭಾರತಕ್ಕೆ 2 ಬಾರಿ 5 ರನ್!
ಕಳೆದ ಮೇ ತಿಂಗಳಲ್ಲಿ ನಡೆದ ದೋಹಾ ಡೈಮಂಡ್ ಲೀಗ್ನಲ್ಲಿ ಚೊಪ್ರಾ 90.23 ಮೀಟರ್ ಎಸೆದಿದ್ದರು, ವೆಬರ್ 91.06 ಮೀಟರ್ ಎಸೆದು ಗೆದ್ದಿದ್ದರು. ಇದನ್ನೂ ಓದಿ: England vs India, 1st Test: ಇಂಗ್ಲೆಂಡ್ ನೆಲದಲ್ಲಿ ಮೊದಲ ಪಂದ್ಯದಲ್ಲೇ ಜೈಸ್ವಾಲ್, ಗಿಲ್ ಶತಕದ ಸಾಧನೆ