ವಾರದ 5 ದಿನ ಮಾತ್ರ ಬ್ಯಾಂಕ್ ಕೆಲಸ!- ಆರ್​ಬಿಐ ಸ್ಪಷ್ಟಣೆ

Public TV
1 Min Read

ಮುಂಬೈ: ದೇಶದಲ್ಲಿರುವ ವಾಣಿಜ್ಯ ವ್ಯವಹಾರದ ಬ್ಯಾಂಕ್‍ಗಳಿಗೆ ಇನ್ಮುಂದೆ ವಾರಕ್ಕೆ 5 ದಿನ ಮಾತ್ರ ಕೆಲಸ, ಪ್ರತಿ ಶನಿವಾರ ಭಾನುವಾರ ರಜೆ ಎಂಬುದು ಸುದ್ದಿ ಸುಳ್ಳು. ಈ ರೀತಿ ಯಾವುದೇ ನಿರ್ದೇಶನವನ್ನು ನಾವು ನೀಡಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

ಈ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಆರ್​ಬಿಐ ಸ್ಪಷ್ಟನೆ ನೀಡಿದೆ. ವಾಣಿಜ್ಯ ಬ್ಯಾಂಕ್‍ಗಳು ವಾರಕ್ಕೆ 5 ದಿನ ಮಾತ್ರವೇ ಕೆಲಸ ನಿರ್ವಹಿಸಬೇಕು ಎಂದು ಆರ್​ಬಿಐ ಸೂಚನೆ ನೀಡಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದ್ರೆ ಇದು ಸುಳ್ಳು ಸುದ್ದಿ. ನಾವು ಈ ರೀತಿಯ ಯಾವುದೇ ನಿರ್ದೇಶನ ನೀಡಿಲ್ಲ ಎಂದಿದೆ.

ಭಾನುವಾರ ರಜೆ ಹೊರತುಪಡಿಸಿ ಎಲ್ಲಾ ವಾಣಿಜ್ಯ ವ್ಯವಹಾರಗಳ ಬ್ಯಾಂಕ್‍ಗಳಿಗೆ ತಿಂಗಳ 2ನೇ ಮತ್ತು 4ನೇ ಶನಿವಾರ ಎಂದಿನಂತೆ ರಜೆ ಇರುತ್ತದೆ. ಉಳಿದ ಶನಿವಾರದಂದು ಬ್ಯಾಂಕ್‍ಗಳಲ್ಲಿ ದಿನಪೂರ್ತಿ ಕೆಲಸ ನಡೆಯುತ್ತದೆ ಎಂದು ಆರ್​ಬಿಐ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *