ವೇದಿಕೆ ಮೇಲೆ ಮದುವೆ ಆಗಿದ್ರೆ ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ: ನಿವೇದಿತಾ ಗೌಡ

Public TV
2 Min Read

ಮೈಸೂರು: ದಸರಾ ಯುವ ವೇದಿಕೆ ಮೇಲೆ ನಮ್ಮಿಂದ ಯಾವುದೇ ತಪ್ಪಾಗಿಲ್ಲ. ಒಂದು ವೇಳೆ ವೇದಿಕೆ ಮದುವೆ ಆಗಿದ್ರೆ ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ ಎಂದು ನಿವೇದಿತಾ ಗೌಡ ಹೇಳಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿಗೆ ಜೊತೆಗೆ ಮಾತನಾಡಿದ ನಿವೇದಿತಾ ಗೌಡ, ಚಂದನ್ ಶೆಟ್ಟಿ ಪ್ರಪೋಸ್ ಮಾಡುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ರಿಂಗ್ ಹಾಕುತ್ತಿದ್ದಂತೆ ಶಾಕ್ ಆಯಿತು, ಒಂದು ಕ್ಷಣ ಬ್ಲ್ಯಾಂಕ್ ಆಗಿಬಿಟ್ಟೆ. ಇದು ನಿಜಾನಾ ಎಂಬ ಭಾವನೆ ಮೂಡಿತ್ತು. ರಿಂಗ್ ಹಾಕಿಸಿಕೊಳ್ಳಲು ಹೋದಾಗ ಕೈ ನಡುಗುತ್ತಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ನಿಶ್ಚಿತಾರ್ಥ ಅಲ್ಲ, ನಮ್ಗೂ ಸರ್ಪ್ರೈಸ್ ಆಗಿದೆ- ನಿವೇದಿತಾ ಹೆತ್ತವರು

ನಮ್ಮಿಬ್ಬರ ಮಧ್ಯೆ ಇದ್ದ ಸ್ನೇಹ ಫ್ಲೋ ಆಗಿ ಹೋಗುತಿತ್ತು. ನಾಳೆಯಿಂದ ಕಪಲ್ಸ್ ಆಗೋಣ ಎಂದು ಯಾವತ್ತೂ ಮಾತನಾಡಿರಲಿಲ್ಲ. ಇಬ್ಬರ ಮಧ್ಯೆ ಉತ್ತಮ ಹೊಂದಾಣಿಕೆ ಇತ್ತು. ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದೇವು. ಆದರೆ ಪ್ರೀತಿಯನ್ನ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ ಎಂದರು. ಇದನ್ನೂ ಓದಿ: ತಪ್ಪಾಗಿದ್ದರೆ ಕ್ಷಮೆ ಇರಲಿ, ಸರ್ಪ್ರೈಸ್ ಕೊಡಲು ಈ ರೀತಿ ಮಾಡಿದೆ: ಚಂದನ್ ಶೆಟ್ಟಿ

ಯುವ ದಸರಾ ವೇದಿಕೆಯನ್ನು ಚಂದನ್ ಶೆಟ್ಟಿ ದುರ್ಬಳಕೆ ಮಾಡಿಕೊಂಡರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ನಿವೇದಿತಾ ಗೌಡ, ನಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕರು ಮಾತನಾಡಿದ್ದಾರೆ. ನಾವು ಕಪಲ್ಸ್, ಫ್ರೆಂಡ್ಸ್ ಅಂತ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಕೆಲವರು ರೂಮರ್ಸ್ ಎಬ್ಬಿಸಿದರು. ಯುವ ದಸರಾದಲ್ಲಿ ಪ್ರಪೋಸ್ ಮಾಡಿದ್ದರಲ್ಲಿ ತಪ್ಪೇನಿದೆ? ವೇದಿಕೆಯನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಂಡಿಲ್ಲ. ಒಂದು ವೇಳೆ ವೇದಿಕೆ ಮೇಲೆ ಮದುವೆ ಆಗಿದ್ದರೆ ತಪ್ಪಾಗುತಿತ್ತು ಎಂದು ಸ್ಪಷ್ಟನೆ ನೀಡಿದರು.

ವೇದಿಕೆ ಮೇಲೆ, ಜನ ಸಮೂಹದ ಮುಂದೆ ‘ನೀನು ನನ್ನ ಮದುವೆ ಆಗುತ್ತೀಯಾ’ ಅಂತ ಚಂದನ್ ಪ್ರಪೋಸ್ ಮಾಡಿದ್ದಾರೆ. ಐದು ನಿಮಿಷದಲ್ಲಿ ಎಲ್ಲವೂ ನಡೆದು ಹೋಯಿತು. ಕಾರ್ಯಕ್ರಮದಲ್ಲಿ ಸೇರಿದ್ದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ, ಆಶೀರ್ವಾದ ಮಾಡಿದ್ದಾರೆ. ಇದರಲ್ಲಿ ನನಗೆ ಖುಷಿ ಇದೆ. ಇದರಲ್ಲಿ ತಪ್ಪು ಆಗಿದ್ದೇನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಚಂದನ್-ನಿವೇದಿತಾ ನಿಶ್ಚಿತಾರ್ಥ ಮಾಡ್ಕೊಂಡಿರೋದು ಅಕ್ಷಮ್ಯ ಅಪರಾಧ- ವಿ.ಸೋಮಣ್ಣ

ಚಂದನ್ ಹಾಗೂ ನಮ್ಮ ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ. ನಾನು ಯೋಚನೆ ಮಾಡಿಯೇ ನಿರ್ಧಾರ ಕೈಗೊಳ್ಳುತ್ತೇನೆ ಎನ್ನುವುದು ನನ್ನ ತಂದೆ-ತಾಯಿಗೆ ಗೊತ್ತು. ಚಂದನ್ ಒಳ್ಳೆ ಹುಡುಗ ಅಂತ ಅವರಿಗೂ ತಿಳಿದಿದೆ ಎಂದು ತಿಳಿಸಿದರು.

ಬಿಗ್ ಬಾಸ್‍ನಲ್ಲಿ ಇದ್ದಾಗ ಇಬ್ಬರ ಮಧ್ಯೆ ಉತ್ತಮ ಸ್ನೇಹವಿತ್ತು. ಆದರೆ ಅಲ್ಲಿಂದ ಹೊರಗೆ ಬಂದಾಗ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಬಗ್ಗೆ ರೂಮರ್ಸ್ ಹರಿದಾಡುತಿತ್ತು. ಇದರಿಂದಾಗಿ ನಮ್ಮಿಬ್ಬರ ಸ್ನೇಹ ಬೆಳೆದು, ಮದುವೆ ಹಂತಕ್ಕೆ ಬಂದಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *