ರೀಲ್ಸ್ (Reels) ರಾಣಿ ನಿವೇದಿತಾ ಗೌಡಗೆ (Niveditha Gowda) ಕೆಟ್ಟ ಕಾಮೆಂಟ್‍ಗಳ ಸುರಿಮಳೆ ಬರುತ್ತೆ. ಮೈಕಾಣುವಂತೆ ಬಟ್ಟೆ ಧರಿಸಿ ಇನ್ಸ್ಟಾಗ್ರಾಮ್‍ನಲ್ಲಿ ರೀಲ್ಸ್ ಪೋಸ್ಟ್ ಮಾಡುವ ನಿವೇದಿತಾ ಅಸಲಿಗೆ ಕಾಮೆಂಟ್ಸ್‍ಗಳನ್ನೇ ಓದೋದಿಲ್ವಂತೆ, ಈ ವಿಚಾರವನ್ನ `ಪಬ್ಲಿಕ್ ಟಿವಿ’ ಜೊತೆ ಹಂಚಿಕೊಂಡಿದ್ದಾರೆ.
ನಿವೇದಿತಾ ಗೌಡಾಗೆ ಎಷ್ಟೇ ಕೆಟ್ಟ ಕಾಮೆಂಟ್ಸ್ ಬರುತ್ತಿದ್ದರೂ ಅವರು ಕಾಮೆಂಟ್ ಬಾಕ್ಸ್ ಆಫ್ ಮಾಡೋದಿಲ್ಲ. ಏಕೆಂದರೆ ಅವರು ಕಾಮೆಂಟ್ಸ್ ಓದೋದೇ ಇಲ್ವಂತೆ. ಬ್ಯಾಡ್ ಆಗಿ ಮಾತನಾಡುವುದು ಅವರ ವ್ಯಕ್ತಿತ್ವ ಬಿಂಬಿಸುತ್ತದೆ ಹೊರತು ನನಗೆ ಎಫೆಕ್ಟ್ ಆಗೋದಿಲ್ಲ. ಬೇರೆಯವರು ಬ್ಯಾಡ್ ಅಂತಾರೆ ಎಂದು ನಾನು ತಲೆಕೆಡಿಸಿಕೊಳ್ಳಲ್ಲ. ನನ್ನ ಗಮನ ರೀಲ್ಸ್ ಮಾಡೋ ಕಡೆ ಮಾತ್ರ ಇರುತ್ತೆ ಎಂದು ಹೇಳಿಕೋಂಡಿದ್ದಾರೆ. ಇದನ್ನೂ ಓದಿ: ಖ್ಯಾತ ಗಾಯಕಿ ಜೊತೆ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ರೆಡಿ
ಬ್ಯಾಡ್ ಕಾಮೆಂಟ್ಸ್ ಬಗ್ಗೆ ನಿವೇದಿತಾ ಹೇಳಿದ್ದೇನು?
ನಾನು ಕಾಮೆಂಟ್ಸ್ ಓದೋದಕ್ಕೇನೇ ಹೋಗಲ್ಲ, ನನ್ನ ಗಮನ ಏನಿದ್ರೂ ಈಗ ಏನ್ ರೀಲ್ಸ್ ಪೋಸ್ಟ್ ಮಾಡ್ಬೇಕು..? ನೆಕ್ಸ್ಟ್ ಯಾವುದು ಮಾಡೋದು ಅನ್ನೋದ್ರ ಕಡೆ ಮಾತ್ರ ಇರುತ್ತೆ. ಕಾಮೆಂಟ್ಸ್‍ನ್ನ ನಾನು ನೋಡೊದೇ ಇಲ್ಲ. ಡಸಂಟ್ ಮ್ಯಾಟರ್ ಟು ಮಿ, ಜಸ್ಟ್ ಆ ಮೂಮೆಂಟ್‍ನಲ್ಲಿ ಹ್ಯಾಪಿಯಾಗಿರ್ತೀನಿ, ಅದಕ್ಕೆ ನಾನು ಪೋಸ್ಟ್ ಮಾಡ್ತೀನಿ. ಕೆಟ್ಟ ಕಾಮೆಂಟ್ಸ್ ಮಾಡೋದು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತೆ. ಅದರಿಂದ ನನಗೆ ಎಫೆಕ್ಟ್ ಆಗೋದಿಲ್ಲ. ಬೇರೆಯವ್ರು ಬ್ಯಾಡ್ ಆಗಿ ಅಂತಾರೆ ಅಂತ ನಾನು ತಲೆ ಕೆಡಿಸ್ಕೊಳ್ಳೋಕೆ ಹೋಗಲ್ಲ. ಇದನ್ನೂ ಓದಿ: ಐಷಾರಾಮಿ ಕಾರು ಖರೀದಿಸಿದ ದಿಯಾ ಸ್ಟಾರ್ ದೀಕ್ಷಿತ್ ಶೆಟ್ಟಿ