ಒಂದು ತಿಂಗಳಿಗೆ ನಿವೇದಿತಾ ಖರ್ಚು ಕೇಳಿದ್ರೆ ಶಾಕ್ ಆಗ್ತೀರಿ!

Public TV
1 Min Read

ವೈಭೋಗದ ಜೀವನದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ನಿವೇದಿತಾಗೆ ತಿಂಗಳಿಗೆ ಎಷ್ಟು ಹಣ ಬೇಕಾಗುತ್ತದೆ..? ತಿಂಗಳೊಂದರಂತೆ ಲೆಕ್ಕ ಹಾಕಿಕೊಂಡತೆ ಅವರ ಗಳಿಕೆ ಎಷ್ಟು..? ಇಂಥಹ ಹಲವು ಪ್ರಶ್ನೆಗಳು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ ಫಾಲೋವರ್ಸ್ಗಳಿಗೆ ಕಾಡುವ ಪ್ರಶ್ನೆ. ಇದೀಗ ನಿವೇದಿತಾ (Niveditha Gowda) ಆದಾಯ ಹಾಗೂ ಖರ್ಚಿನ ಕುರಿತು ಮೊದಲ ಬಾರಿ ಮನಬಿಚ್ಚಿ ಮಾತನಾಡಿದ್ದಾರೆ.

ಸೋಶಿಯಲ್ ಮೀಡಿಯಾವೇ ನಿವೇದಿತಾ ಆದಾಯದ ಮೂಲವಾಗಿದ್ದು, ತಿಂಗಳಿಗೆ ಲಕ್ಷಕ್ಕೂ ಹೆಚ್ಚು ಆದಾಯ ಸಾಮಾನ್ಯವಾಗಿದೆ. ಇದರ ಜೊತೆ ಜೊತೆಗೆ ಹಲವು ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡುತ್ತಾರೆ. ಜೊತೆಗೆ ಜಾಹೀರಾತುಗಳನ್ನೂ ಮಾಡಿ ಕೊಡುತ್ತಾರೆ. ಇದರಿಂದಲೇ ಹೆಚ್ಚಿನ ಗಳಿಕೆ ನಿವೇದಿತಾ ಗೌಡ ಪಡೆಯುತ್ತಾರಂತೆ. ಇದನ್ನೂ ಓದಿ: ‘ನನಗೆ ಫಾರಿನ್ ಟ್ರಿಪ್ ಮಾಡೋಕೆ ದುಡ್ಡು ಯಾರ್ ಕೊಡ್ತಾರೆ ಗೊತ್ತಾ?’ – ನಿವಿ ಸೀಕ್ರೆಟ್ ರಿವೀಲ್

ಲೆಕ್ಕ ಇಟ್ಟುಕೊಂಡು ಖರ್ಚು ಮಾಡುವ ಅಭ್ಯಾಸವನ್ನ ನಿವೇದಿತಾ ರೂಢಿಸಿಕೊಂಡಿಲ್ಲವಂತೆ. ಒಂದಷ್ಟು ಹಣ ಖಾಯಂ ಆಗಿ ಖರ್ಚಾಗುತ್ತದೆ. ಹಾಗೇ ಒಂದಷ್ಟು ಹಣ ಖಾಯಂ ಆದಾಯವಾಗಿದೆ. ಹೀಗಾಗಿ, ಅವರು ಅಗತ್ಯಕ್ಕೆ ಬೇಕಾದಂತೆ ಯಾರ ಮೇಲೂ ಡಿಪೆಂಡ್ ಆಗದಂತೆ ಖರ್ಚು ಮಾಡುತ್ತಾರಂತೆ. ಆದರೆ, ಆ ಮೊತ್ತವನ್ನ ನಾನು ಹೇಳಲು ಇಷ್ಟಪಡುವುದಿಲ್ಲ ಎಂದು ‘ಪಬ್ಲಿಕ್ ಟಿವಿ’ಯ ಸಂದರ್ಶನದಲ್ಲಿ ನಿವೇದಿತಾ ಹೇಳಿದ್ದಾರೆ.

ಕೆಲವೊಮ್ಮೆ ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡುವ ನಿವೇದಿತಾ ಹೆಚ್ಚಿನ ಹಣ ಗಳಿಕೆಯಾದರೆ, ಪ್ರವಾಸಕ್ಕೆ ತೆರಳುತ್ತಾರಂತೆ. ರೀಲ್ಸ್ ಹಾಕೋದ್ರ ಮೇಲೆ ಆದಾಯ ನಿಂತಿರುತ್ತೆ ಎಂದಿದ್ದಾರೆ ನಿವೇದಿತಾ. ಅಲ್ಲಿಗೆ ನಿವೇದಿತಾ ಪೋಸ್ಟ್ ಮಾಡುವ ಪ್ರತಿ ರೀಲ್ಸ್‌ಗೂ ಆದಾಯ ಇರುತ್ತೆ ಅನ್ನೋದು ರಿವೀಲ್ ಆಗಿದೆ. ಹೀಗಾಗಿ, ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಿಂದಲೇ ನಿವೇದಿತಾ ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಇದನ್ನೂ ಓದಿ: ಎರಡನೇ ಮದುವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ

Share This Article