ಕಡಲ ಅಲೆಯಲ್ಲಿ ಗುಲಾಬಿ ದಳದಂತೆ ತೇಲಿದ ನಿವೇದಿತಾ!

1 Min Read

ಕಿರುತೆರೆ ಹಾಗೂ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ನಿವೇದಿತಾ ಗೌಡ (Niveditha Gowda) ಸದಾ ರೀಲ್ಸ್ ಮಾಡುತ್ತಾ ಫುಲ್ ಆ್ಯಕ್ಟಿವ್ ಆಗಿರ್ತಾರೆ. ಅದೇ ರೀತಿ ಈಗ ಫ್ಲೋರಿಡಾದ (Florida) ಪಾಮ್‌ ಬೀಚ್‌ನಲ್ಲಿ (Palm Beach) ನಿವೇದಿತಾ ಸಕತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.

ಗುಲಾಬಿ ಬಣ್ಣದ ಸ್ವಿಮ್‌ ಸೂಟ್‌ನಲ್ಲಿ ನಿವೇದಿತಾ ಕಡಲ ಅಲೆಗಳಲ್ಲಿ ತೇಲಾಡಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ, Sea Level Calm ಎಂದು ಬರೆದುಕೊಂಡಿದ್ದಾರೆ. ಕಡಲ ಅಲೆಯಲ್ಲಿ ನಿವಿಯ ಕ್ಯೂಟ್‌ ಕ್ಯೂಟ್ ನಗುವಿನ ಅಲೆ ಸೇರಿ ಗುಲಾಬಿ ದಳವೇ ತೇಲುವಂತೆ ಭಾಸವಾಗುತ್ತಿದೆ. ಇದನ್ನೂ ಓದಿ: ಮುಸ್ಸಂಜೆ ವೇಳೆಯಲ್ಲಿ ಬೀಚ್‍ನಲ್ಲಿ ನಿವೇದಿತಾ ಜಾಲಿ ಜಾಲಿ

ಈ ಫೊಟೋಗೆ ಅಭಿಮಾನಿಗಳು ಬೆಂಕಿ ಕಾಮೆಂಟ್‌ ಮಾಡುತ್ತಿದ್ದಾರೆ. ಕೊನೆಯಲ್ಲಿ ಪುಟ್ಟ ಸೀ ಬರ್ಡ್‌ ಫೋಟೋವನ್ನು ಸಹ ಹಂಚಿಕೊಂಡು‌ ಸಂಭ್ರಮಿಸಿದ್ದಾರೆ.

ನಿವೇದಿತಾ ಗೌಡ ಬಿಗ್‍ಬಾಸ್ ಹಾಗೂ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಎಷ್ಟು ಖ್ಯಾತಿ ಪಡೆದಿದ್ದರೋ ಅದಕ್ಕಿಂತ ಹೆಚ್ಚು ಅವರ ರೀಲ್ಸ್‌ನಿಂದ ಖ್ಯಾತಿ ಗಳಿಸಿದ್ದಾರೆ ಎಂದರೆ ತಪ್ಪಾಗ್ಲಿಕ್ಕಿಲ್ಲ. ತಮ್ಮ ವೈಯಕ್ತಿ ಜೀವನದಲ್ಲಿ ಆದ ಎಲ್ಲಾ ತೊಡಕುಗಳನ್ನ ಬದಿಗೊತ್ತಿ ಜಾಲಿಯಾಗಿ ರೀಲ್ಸ್ ಮಾಡುತ್ತಾ ದೇಶ ವಿದೇಶ ಸುತ್ತುತ್ತಾ ಕಾಲ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಎಷ್ಟೇ ಕೆಟ್ಟ ಕಾಮೆಂಟ್ಸ್ ಬಂದ್ರೂ ಡೋಂಟ್ ಕೇರ್ ಎಂದ ನಿವೇದಿತಾ ಗೌಡ

Share This Article