ಸಿಎಂ ನಿತೀಶ್ ಕುಮಾರ್ ಪಕ್ಷದ ನಾಯಕನ ಬರ್ಬರ ಹತ್ಯೆ – ನಾಲ್ಕೇ ದಿನಗಳಲ್ಲಿ 2ನೇ ರಾಜಕೀಯ ಹತ್ಯೆ

Public TV
1 Min Read

ಪಾಟ್ನಾ: ಬಿಜೆಪಿ (BJP) ನಾಯಕನ ಹತ್ಯೆಯಾದ ಎರಡೇ ದಿನಕ್ಕೆ ಓರ್ವ ಜೆಡಿಯು (JDU) ನಾಯಕನನ್ನು ಹತ್ಯೆ ಮಾಡಿರುವ ಘಟನೆ ಬಿಹಾರದ (Bihar) ಖಗಾರಿಯಾದಲ್ಲಿ ನಡೆದಿದೆ.

ಗುರುವಾರ ಹಾಡಹಗಲೇ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಪಕ್ಷದ ನಾಯಕ ರಾಜ್‌ಕಿಶೋರ್ ನಿಶಾದ್ (Rajkishor Nishad) ಅವರನ್ನು ಕಬ್ಬಿಣ ರಾಡ್‌ನಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಇದನ್ನೂ ಓದಿ: ಹಿಮಾಚಲ – ಭಾರೀ ಮಳೆಗೆ ಒಂದು ತಿಂಗಳಲ್ಲಿ 109 ಮಂದಿ ಸಾವು

ಎರಡು ದಿನಗಳ ಹಿಂದೆ ಪಾಟ್ನಾದಲ್ಲಿ ಬಿಜೆಪಿ ನಾಯಕ ಸುರೇಂದ್ರ ಕೆವಾತ್ (52) ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಲೆಗೈದಿದ್ದರು. ಕೂಡಲೇ ಅವರನ್ನು ಪಾಟ್ನಾದ ಏಮ್ಸ್‌ಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.

ಸದ್ಯ ಈ ವರ್ಷದಲ್ಲೇ ಚುನಾವಣೆಯಿರುವ ಹಿನ್ನೆಲೆ ಈ ಕೃತ್ಯ ನಿತೀಶ್ ಕುಮಾರ್ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ವಿಷಯವನ್ನಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಯು ಮೈತ್ರಿಕೂಟವನ್ನು ಮೂಲೆಗುಂಪು ಮಾಡಲು ಆರ್‌ಜೆಡಿ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಪ್ರಯತ್ನಿಸುತ್ತಿದೆ. ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರ ಹತ್ಯೆಯ ನಂತರ ರಾಜ್ಯದಲ್ಲಿ ಸರಣಿ ಹತ್ಯೆಗಳು ಹೆಚ್ಚಾಗಿವೆ.

ಪ್ರತ್ಯೇಕ ಘಟನೆಯಲ್ಲಿ, ಇಂದು ಪಾಟ್ನಾದ ಆಸ್ಪತ್ರೆಯೊಂದಕ್ಕೆ ಐವರ ಗ್ಯಾಂಗೊಂದು ನುಗ್ಗಿ ಪೆರೋಲ್ ಮೇಲೆ ಹೊರಗಿದ್ದು ಚಿಕಿತ್ಸೆ ಪಡೆಯುತ್ತಿದ್ದ ಆರೋಪಿಯನ್ನು ಹತ್ಯೆಗೈದಿದ್ದಾರೆ.ಇದನ್ನೂ ಓದಿ:ಪಾಟ್ನಾ ಆಸ್ಪತ್ರೆಯಲ್ಲಿ ಐವರ ಗ್ಯಾಂಗ್‌ನಿಂದ ಫೈರಿಂಗ್ – ಚಿಕಿತ್ಸೆ ಪಡೆಯುತ್ತಿದ್ದ ಕೊಲೆ ಆರೋಪಿ ಸಾವು

Share This Article