ವೋಟ್‌ ಮಾಡಿದ ಮೋದಿ ಕೈ ಬೆರಳು ನೋಡಿದ ನಿತೀಶ್‌ ವೀಡಿಯೋ ವೈರಲ್‌

Public TV
1 Min Read

ಪಾಟ್ನಾ: ನೂತನ ನಳಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ ಉದ್ಘಾಟನಾ ಸಮಾರಂಭದಲ್ಲಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರ ನಡುವಿನ ಸಂಭಾಷಣೆಯ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ರಾಜ್‌ಗಿರ್‌ನಲ್ಲಿ ನೂತನ ನಳಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ ಉದ್ಘಾಟನಾ ಸಮಾರಂಭದಲ್ಲಿ ಉಭಯ ನಾಯಕರು ಭಾಗವಹಿಸಿದ ಬಳಿಕ ಈ ಪ್ರಸಂಗ ನಡೆದಿದೆ. ವೀಡಿಯೋದಲ್ಲಿ ಇಬ್ಬರು ನಾಯಕರು ವೇದಿಕೆ ಮೇಲೆ ಕುಳಿತಿದ್ದಾರೆ. ಈ ವೇಳೆ ನಿತೀಶ್‌ ಅವರು ಏಕಾಏಕಿ ಮೋದಿಯವರ ಕೈ ಹಿಡಿದು ಬೆರಳು ನೋಡಿ ಏನೋ ಹೇಳಿ ನಗುತ್ತಾರೆ. ಈ ಘಟನೆಯು ನಾಯಕರ ಹಿಂದೆ ಕುಳಿತಿದ್ದ ಭದ್ರತಾ ಸಿಬ್ಬಂದಿಯನ್ನು ಎಚ್ಚರಿಸಿತು.

ಬಿಹಾರದ ರಾಜ್‌ಗೀರ್‌ನಲ್ಲಿ ನಳಂದಾ ವಿಶ್ವವಿದ್ಯಾಲಯದ (Nalanda University) ಹೊಸ ಕ್ಯಾಂಪಸ್ ನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಉದ್ಘಾಟನೆ ಮಾಡಿದರು. ಈ ಸಮಾರಂಭದಲ್ಲಿ ಬಿಹಾರ ರಾಜ್ಯಪಾಲ ರಾಜೇಂದ್ರ ವಿ ಅರ್ಲೇಕರ್ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್ ಜೈಶಂಕರ್ ಉಪಸ್ಥಿತರಿದ್ದರು.

ನಳಂದ ಭೇಟಿಗೆ ಮುನ್ನ ಪ್ರಧಾನಿಯವರು ತಮ್ಮ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, ಇದು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಬಹಳ ವಿಶೇಷವಾದ ದಿನವಾಗಿದೆ. ನಳಂದ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ರಾಜಗೀರ್‌ನಲ್ಲಿ ಉದ್ಘಾಟನೆಯಾಗಲಿದೆ. ನಳಂದವು ನಮ್ಮ ಅದ್ಭುತ ಗತಕಾಲದ ಬಾಂಧವ್ಯ ಹೊಂದಿದೆ. ಈ ವಿಶ್ವವಿದ್ಯಾನಿಲಯವು ಯುವಕರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವಲ್ಲಿ ಖಂಡಿತವಾಗಿಯೂ ಬಹು ದೂರ ಸಾಗುತ್ತದೆ ಎಂದು ಬರೆದಿದ್ದರು.

Share This Article