ಹೊಸ ವಿವಾದದಲ್ಲಿ ನಿತ್ಯಾನಂದ – ವರ್ಷಕ್ಕೆ 8.96 ಲಕ್ಷ, ಬೊಲಿವಿಯಾದಲ್ಲಿ ಬೆಂಗಳೂರಿನ 5 ಪಟ್ಟು ಭೂಮಿ ಲೀಸ್‌ಗೆ ಪಡೆದು ವಂಚನೆ

Public TV
1 Min Read

ನವದೆಹಲಿ: ಭಾರತದಿಂದ ಓಡಿಹೋಗಿ ತನ್ನದೇ ಆದ ಕೈಲಾಸ ದೇಶ ಸ್ಥಾಪಿಸಿರುವ ನಿತ್ಯಾನಂದ (Nithyananda) ವಿರುದ್ಧ ಭೂ ವಂಚನೆ (Land Scam) ಯತ್ನ ಆರೋಪ ಕೇಳಿ ಬಂದಿದೆ. ದಕ್ಷಿಣ ಅಮೆರಿಕ ಖಂಡದಲ್ಲಿರುವ ಬೊಲಿವಿಯಾ (Bolivia) ದೇಶದಲ್ಲಿ 3,900 ಚದರ ಕಿಲೋಮೀಟರ್ ಭೂ ಕಬಳಿಕೆ ಆರೋಪ ಎದುರಿಸುತ್ತಿದ್ದಾರೆ.

ಬೊಲಿವಿಯಾದ ಅಮೇಜಾನ್ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಅಸ್ತಿತ್ವದಲ್ಲಿಲ್ಲದ ಕೈಲಾಸ ದೇಶ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಅಮೆಜಾನ್ ಮಳೆ ಕಾಡು ಪ್ರದೇಶದ ಭೂಮಿಯನ್ನು ನಿತ್ಯಾನಂದ ಗ್ಯಾಂಗ್ 1 ಸಾವಿರ ವರ್ಷ ಲೀಸ್‌ಗೆ ಪಡೆದು ವಂಚಿಸಿದ ಆರೋಪ ಕೇಳಿಬಂದಿದೆ.


2024ರ ಅಕ್ಟೋಬರ್- ನವೆಂಬರ್ ನಡುವೆ ಈ ಅನಧಿಕೃತ ಭೂವ್ಯವಹಾರ ನಡೆದಿದೆ. 1,08,000 ಡಾಲರ್‌ಗೆ (ವರ್ಷಕ್ಕೆ 8.96 ಲಕ್ಷ ರೂ.) ಈ ಭೂಮಿಯನ್ನು ಅಕ್ರಮವಾಗಿ ಲೀಸ್‌ಗೆ ಪಡೆದಿದೆ. ಪ್ರಕರಣ ಸಂಬಂಧ ಇದೀಗ ನಿತ್ಯಾನಂದನ 20ಕ್ಕೂ ಅಧಿಕ ಅನುಯಾಯಿಗಳನ್ನು ಬೊಲಿವಿಯಾದಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ‘ಸೌಗತ್-ಎ-ಮೋದಿ’ ಅಭಿಯಾನದಡಿ 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಬಿಜೆಪಿ ಈದ್‌ ಕಿಟ್‌

ಈ ಭೂಮಿಯು ದೆಹಲಿಯ ಗಾತ್ರಕ್ಕಿಂತ 2.6 ಪಟ್ಟು, ಮುಂಬೈನ ಗಾತ್ರಕ್ಕಿಂತ 6.5 ಪಟ್ಟು, ಬೆಂಗಳೂರಿನ ಗಾತ್ರಕ್ಕಿಂತ 5.3 ಪಟ್ಟು, ಕೋಲ್ಕತ್ತಾದ ಗಾತ್ರಕ್ಕಿಂತ 19 ಪಟ್ಟು ದೊಡ್ಡದಾಗಿದೆ.

ಬಂಧಿತರ ಪೈಕಿ ಬಹುತೇಕ ಮಹಿಳೆಯರಿದ್ದಾರೆ. 122 ಚೀನಿಯರು, 7 ಜನ ಭಾರತೀಯರಿದ್ದಾರೆ. ಕೆಲವರನ್ನ ಬೊಲಿವಿಯಾದಿಂದ ಗಡೀಪಾರು ಮಾಡಲಾಗಿದೆ. ನಿತ್ಯಾನಂದ ತಂಡ ಆರೋಪ ನಿರಾಕರಿಸಿದೆ. ತಪ್ಪು ವರದಿಯಿಂದ ಹಿಂದು ಸನ್ಯಾಸಿಗಳನ್ನ ಬಂಧಿಸಿ ಹಲ್ಲೆ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದೆ.

 

Share This Article