ಅಪ್ಪು, ಶಿವಣ್ಣನ ಹೆಸರಲ್ಲೂ ವಂಚನೆ – ಬಗೆದಷ್ಟೂ ಬಯಲಾಗ್ತಿದೆ ಮಾಡೆಲ್ ನಿಶಾಳ ಕರಾಳ ಮುಖ!

By
2 Min Read

– ಈವರೆಗೆ 130ಕ್ಕೂ ಹೆಚ್ಚು ಜನರಿಂದ ನಿಶಾ ನರಸಪ್ಪ ವಿರುದ್ಧ ದೂರು

ಬೆಂಗಳೂರು: ನಟ ಮಾಸ್ಟರ್ ಆನಂದ್ (Master Anand) ಪುತ್ರಿಯ ಹೆಸರಲ್ಲಿ ವಂಚನೆ ಮಾಡಿದ್ದ ಆರೋಪಿ ನಿಶಾ ನರಸಪ್ಪ (Nisha Narsappa) ಸದ್ಯ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಳೆ. ಆದ್ರೆ ನಿಶಾ ವಿರುದ್ಧ ಹರಿದು ಬರುತ್ತಿರೋ ದೂರಿನ ಸುರಿಮಳೆ ನಿಂತಿಲ್ಲ. ಸಾಲು-ಸಾಲು ದೂರುಗಳು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತಿದ್ದು, ಆಕೆಯ ಮೋಸ ಮಾಡುವ ಮನಸ್ಸಿನ ಒಂದೊಂದೇ ಮುಖಗಳು ತೆರೆದುಕೊಳ್ತಿವೆ.

ಅಪ್ಪು-ಶಿವಣ್ಣನ ಹೆಸ್ರಲ್ಲೂ ವಂಚನೆ:
ದೊಡ್ದ-ದೊಡ್ಡ ಸ್ಟಾರ್‌ಗಳ ಹೆಸರು ಬಳಸಿಕೊಳ್ಳುತ್ತಿದ್ದ ನಿಶಾ, ದಿ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಹೆಸ್ರನ್ನೂ ಬಿಟ್ಟಿಲ್ಲ. ಅಪ್ಪುಗೆ ಟ್ರಿಬ್ಯೂಟ್ ಸಾಂಗ್ ಮಾಡ್ತಿದ್ದೀವಿ, ಅದ್ರಲ್ಲಿ ನಿಮ್ಮ ಮಕ್ಕಳನ್ನ ಕುಣಿಸ್ತೀವಿ ಅಂತಲೂ ಹಲವರಿಂದ ಹಣ ಪಡೆದಿರೋ ಆರೋಪ ಈಗ ಕೇಳಿ ಬಂದಿದೆ. ಅಲ್ಲದೇ ಶಿವರಾಜ್ ಕುಮಾರ್ (Shivarajkumar), ವಿಜಯರಾಘವೇಂದ್ರ ಸೇರಿದಂತೆ ಹಲವು ಸಿನಿಮಾ ನಟರ ಸಿನಿಮಾಗಳಲ್ಲಿ ಚಾನ್ಸ್ ಕೊಡಿಸೋದಾಗಿಯೂ ಹಣ ಪಡೆದು ವಂಚಿಸಿದ್ದಾಳೆ ಅನ್ನೋ ಸಾಲು ಸಾಲು ಆರೋಪಗಳು ನಿಶಾ ವಿರುದ್ದ ಕೇಳಿ ಬರ್ತಿವೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

ಲಕ್ಷ-ಲಕ್ಷ ವಂಚನೆ:
ಈವರೆಗೆ ಆನ್ಲೈನ್, ವಾಟ್ಸಪ್ ಹಾಗೂ ನೇರವಾಗಿ ಠಾಣೆಯಲ್ಲಿ ದಾಖಲಾದ ದೂರುಗಳು ಸೇರಿ 130ಕ್ಕೂ ಹೆಚ್ಚು ಜನರಿಂದ ಕಂಪ್ಲೇಟ್‌ಗಳು ಬಂದಿದ್ದು ಲಕ್ಷ-ಲಕ್ಷ ಹಣ ವಂಚಿಸಿದ್ದಾಳೆ ಅಂತಾ ಹೇಳಲಾಗ್ತಿದೆ. ಸದ್ಯಕ್ಕೆ ವಂಚನೆ ಮಾಡಿರೋ ಆರೋಪದಡಿ ಅರೆಸ್ಟ್ ಆಗಿದ್ದ ನಿಶಾಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶ ನೀಡಿತ್ತು. ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಅಡ್ಮಿಷನ್ ಬ್ಯಾರಕ್ ನಲ್ಲಿ ಇರಿಸಿದ್ದಾರೆ. ಇದನ್ನೂ ಓದಿ: ಮಾಡೆಲ್ ನಿಶಾ ವಂಚಿಸಿದ್ದು 2 ಕೋಟಿಗೂ ಅಧಿಕ?: ಹಣ ಕಳೆದುಕೊಂಡವರಿಂದ ಹಿಡಿಶಾಪ

ಮತ್ತೆ ಬಲೆ ಬೀಸಿರೋ ನಿಶಾ ಟೀಂ:
ನಿಶಾ ಜೈಲಿನಲ್ಲಿದ್ದರೂ ಆಕೆ ಮೇಲಿನ ಆರೋಪಗಳು ಹೆಚ್ಚಾಗುತ್ತಲೇ ಇವೆ. ಇನ್ನೂ ಬಹಳ ಮಂದಿ ದೂರು ನೀಡೋಕೆ ಬರ್ತಿದ್ದಾರೆ. ಈ ನಡುವೆ ಆಕೆಯ ಟೀಂ ಇನ್ಸ್ಟಾಗ್ರಾಮ್ ನಲ್ಲಿ ಎಲ್ಲದಕ್ಕೂ ಉತ್ತರ ಕೊಡ್ತೀವಿ, ಏನೂ ಆಗಿಲ್ಲ. ಹೊಸದಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳೋರು ಮಾಡಿಕೊಳ್ಳಿ ಅಂತಾ ಮತ್ತೆ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಬನ್ನೆ ತನಿಖೆ ಮುಂದುವರಿದಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್