ಹಂಪಿಗೆ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್‌ – ದೇಶದ ಹೆಸರಲ್ಲಿ ಪೂಜೆ ಸಲ್ಲಿಕೆ

Public TV
1 Min Read

– ಹಂಪಿಗೆ ಭೇಟಿ ನೀಡಿರೋದು ನನ್ನ ಪುಣ್ಯ ಎಂದ ಸಚಿವೆ

ಬಳ್ಳಾರಿ: ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ಐತಿಹಾಸಿಕ ಹಂಪಿಯ ವಿರುಪಾಕ್ಷೇಶ್ವರನ ಸನ್ನಿಧಿಗೆ (Virupaksha Temple) ಭೇಟಿ ನೀಡಿ ದರ್ಶನ ಪಡೆದು, ಆನೆ ಲಕ್ಷ್ಮೀಯಿಂದ ಹೂವಿನ ಹಾರ ಹಾಕಿಸಿಕೊಂಡರು. ಇದೇ ವೇಳೆ ದೇಶಕ್ಕೆ ಒಳ್ಳೆಯದಾಗಲಿ ಎಂದು ನಿರ್ಮಲಾ ಸೀತಾರಾಮನ್ ಹಂಪಿಯ ವಿರುಪಾಕ್ಷೇಶ್ವರನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

ಪೂಜೆ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್, ನನಗೆ ಬಹಳಷ್ಟು ಜನ ಹಂಪಿಯನ್ನ ವೀಕ್ಷಣೆ ಮಾಡಿ ಎಂದು ಹೇಳುತ್ತಿದ್ದರು. ಇಂದು ಆ ಅವಕಾಶ ನನಗೆ ಸಿಕ್ಕಿರೊದು ನನ್ನ ಅದೃಷ್ಟ. ಹಂಪಿಯ ಸಾಂಸ್ಕೃತಿಕ ಪರಂಪರೆಯನ್ನ ಕಣ್ತುಂಬಿಕೊಂಡಿರೋದು ತುಂಬಾ ಹೆಮ್ಮಯ ಅನುಭವ ಎಂದರು. ಇದನ್ನೂ ಓದಿ: RSS ಸಂಸ್ಕೃತಿ ತೋರಿಸುವ 20 ವಿಡಿಯೋ ರಿಲೀಸ್ ಮಾಡಿದ್ದೇನೆ: ಪ್ರಿಯಾಂಕ್ ಖರ್ಗೆ ಬಾಂಬ್

ಇಲ್ಲಿಯ ಕಲೆ ಸಂಸ್ಕೃತಿ ಈ ನಾಡಿನ ಪರಂಪರೆಯ ಪ್ರತೀಕವಾಗಿದೆ. ಯುನೆಸ್ಕೊ ಗುರುತಿಸಿರುವ ಐತಿಹಾಸಿಕ ತಾಣ ಹಂಪಿಯ ಪ್ರತಿಯೊಂದು ಶಿಲೆಯು ಇಲ್ಲಿನ ಪರಂಪರೆಯನ್ನ ಪ್ರತಿಬಿಂಬಿಸುವಂತಿದೆ. ಇಲ್ಲಿ ಅನೇಕ ಉತ್ಖನನ ಕಾರ್ಯಗಳ ಜೊತೆಗೆ ಹಂಪಿಯ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿವೆ. ನನಗೆ ಇಲ್ಲಿಯ ಇತಿಹಾಸ ಪರಂಪರೆಯ ಬಗ್ಗೆ ಸಂಸದ ತುಕರಾಂ ಹಾಗೂ ರಾಜ ವಶಂಸ್ಥ ಶ್ರೀ ಕೃಷ್ಣದೇವರಾಯ ವಿವರಿಸಿದ್ದರು. ಹಂಪಿಯ ಪ್ರಾಚೀನ ಸಂಸ್ಕೃತಿ ಕಣ್ತುಂಬಿಕೊಳ್ಳುವುದು ಹೆಮ್ಮೆಯ ಸಂಗತಿ ಎನಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಬಿಹಾರ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ – ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್

Share This Article