ನಿರ್ಭಯಾ ದಳ: ಮಹಿಳೆಯರ ರಕ್ಷಣೆಗಾಗಿ ಮುಂಬೈ ಪೊಲೀಸರ ಕಾರ್ಯಕ್ಕೆ ಬಿಟೌನ್ ಮಂದಿ ಮೆಚ್ಚುಗೆ

Public TV
2 Min Read

ಮುಂಬೈ: ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿರುವ ಮುಂಬೈ ಪೊಲೀಸರ ಕಾರ್ಯಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್, ಶಾಹಿದ್ ಕಪೂರ್, ಕತ್ರಿನಾ ಕೈಫ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡ ಪೊಲೀಸರು ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಲಾಗಿದ್ದು, ಅಧಿಕೃತವಾಗಿ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದೆ. ಸದ್ಯ ಈ ಕುರಿತ ಸಣ್ಣ ವೀಡಿಯೋ ಬಿಡುಗಡೆ ಮಾಡುವ ಮೂಲಕ ಮುಂಬೈ ಪೊಲೀಸರು ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಈ ವೀಡಿಯೋಗೆ ಬಿಟೌನ್ ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರದಲ್ಲೇ ಬಿಜೆಪಿ ಸರ್ಕಾರ ಕಾಲ ಕಳೆಯುತ್ತಿದೆ: ಪ್ರಿಯಾಂಕ್ ಖರ್ಗೆ

 

View this post on Instagram

 

A post shared by Katrina Kaif (@katrinakaif)

ಈ ಕುರಿತಂತೆ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್, ಮಹಿಳೆಯರ ಸುರಕ್ಷತೆಗಾಗಿ ನಿರ್ಭಯಾ ದಳವನ್ನು ಆರಂಭಿಸಿದ ಮುಂಬೈ ಪೊಲೀಸರಿಗೆ ನಿಜವಾಗಿಯೂ ಧನ್ಯವಾದ ತಿಳಿಸಬೇಕು. ಈ ಕಾರ್ಯದಿಂದ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳಿಗೆ ತುಂಬಾ ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

ನಟ ಶಾಹಿದ್ ಕಪೂರ್ ಅವರು ಕೂಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ನಿರ್ಭಯಾ ದಳವನ್ನು ಆರಂಭಿಸಿದ ಮುಂಬೈ ಪೊಲೀಸರಿಗೆ ಧನ್ಯವಾದಗಳು. ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಅಪರಾಧಗಳನ್ನು ತಡೆಗಟ್ಟಲು ನಿರ್ಭಯಾ ದಳ ರಚಿಸಲಾಗಿದ್ದು, ಬಿಕ್ಕಟ್ಟಿನ ಸಮಯದಲ್ಲಿರುವ ಮಹಿಳೆಯರು 103 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್

 

View this post on Instagram

 

A post shared by Shahid Kapoor (@shahidkapoor)

ನಟಿ ಕತ್ರಿನಾ ಕೈಫ್ ಕೂಡ ನಿರ್ಭಯಾ ದಳ ಮಹಿಳೆಯರಿಗಾಗಿ ರಚಿಸಲಾಗಿರುವ ತಂಡವಾಗಿದ್ದು, ಮಹಿಳೆಯರು ಸಂಕಷ್ಟದಲ್ಲಿದ್ದಾಗ 103 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಮುಂಬೈನಲ್ಲಿ ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *