‘ನಿಂಬಿಯಾ ಬನಾದ ಮ್ಯಾಗ’ ಬೆರಗು ಮೂಡಿಸಿದ ಅಶೋಕ್ ಕಡಬ!

Public TV
2 Min Read

ರಮಹಾಲಕ್ಷ್ಮಿ ಹಬ್ಬದ ಶುಭ ಘಳಿಗೆಯಲ್ಲಿ ಅಶೋಕ್ ಕಡಬ (Ashok Kadaba)ನಿರ್ದೇಶನದ ‘ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗೆಗೊಂಡಿದೆ. ಅದರಲ್ಲಿ ತೆರೆದುಕೊಂಡ ಸುಂದರ ದೃಶ್ಯಾವಳಿ, ಸಂವೇದನಾಶೀಲ ಕಥೆಯ ಸುಳಿವು ಕಂಡೇ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಜನಪ್ರಿಯ ಧಾಟಿಯ ಸಿನಿಮಾಗಳ ರಾಟೆಯ ನಡುವೆ, ಆಗಾಗ ಪ್ರೇಕ್ಷಕರು ತಂಗಾಳಿ ತೀಡಿದಂಥಾ ಕಥೆಯನ್ನು ಕನವರಿಸುತ್ತಾರೆ. ಕುಟುಂಬ ಸಮೇತರಾಗಿ ಕೂತು ನೋಡುವ ಸಂಭ್ರಮವನ್ನು ಎದುರು ನೋಡುತ್ತಾರೆ. ಅದೆಲ್ಲವೂ ‘ನಿಂಬಿಯಾ ಬನಾದ ಮ್ಯಾಗ’ (Nimbiya Banada Myaga) ಚಿತ್ರದ ಮೂಲಕ ಸಿಗುವ ಭರವಸೆ ಮೂಡಿದೆ.

ವರನಟ ಡಾ.ರಾಜ್‌ಕುಮಾರ್ (Rajakumar) ಅವರ ಮೊಮ್ಮಗ ಶಣ್ಮುಖ ಗೋವಿಂದರಾಜ್ (Shanmukha Govindraj) ಈ ಸಿನಿಮಾ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಖಾಸಗಿ ವಲಯದಲ್ಲಿ ಒಂದಷ್ಟು ಕಾಲ ಕಾರ್ಯ ನಿರ್ವಹಿಸುತ್ತಾ, ಅದರ ನಡುವೆಯೇ ನಟನಾಗಬೇಕೆಂಬ ಹಂಬಲ ಹೊಂದಿದ್ದವರು ಶಣ್ಮುಖ. ಕಡೆಗೂ ಸೂಕ್ಷ್ಮ ಕಥಾ ಹಂದರದೊಂದಿಗೆ ನಿರ್ದೇಶಕ ಅಶೋಕ್ ಕಡಬ ಶಣ್ಮುಖರ ಕನಸನ್ನು ನನಸು ಮಾಡಿದ್ದಾರೆ. ಈ ಫಸ್ಟ್ ಲುಕ್ ಚದುರಿಕೊಂಡಿರುವ ದೃಶ್ಯಾವಳಿ, ಸಂಭಾಷಣೆಗಳು ಈ ಸಿನಿಮಾ ಮೇಲೆ ಒಂದಷ್ಟು ನಿರೀಕ್ಷೆ ಮೂಡಿಸಿರೋದು ನಿಜ. ಇದನ್ನೂ ಓದಿ:ನಂಜನಗೂಡು ರಾಘವೇಂದ್ರ ಸ್ವಾಮಿ ಮಠಕ್ಕೆ ರಜನಿಕಾಂತ್‌ ಭೇಟಿ

ಫಸ್ಟ್ ಲುಕ್ ಟೀಸರ್ ಮೂಲಕವೇ ಈ ಸಿನಿಮಾವನ್ನು ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ತಂದು ನಿಲ್ಲಿಸುವಲ್ಲಿ ಅಶೋಕ್ ಕಡಬ ಗೆದ್ದಿದ್ದಾರೆ. ಕಥಾ ನಾಯಕ ಇಪ್ಪತೈದು ವರ್ಷದ ನಂತರ ಮಲೆನಾಡಿನ ಗರ್ಭದಲ್ಲಿರುವ ಬೆಂಗಾಡಿಗೆ ಯಾಕೆ ಬರುತ್ತಾನೆ? ಆ ನಂತರ ಯಾವ ಬಗೆಗಿನ ಕಥನ ಬಿಚ್ಚಿಕೊಳ್ಳುತ್ತದೆ. ಈ ದಿಕ್ಕಿನಲ್ಲಿ ಪ್ರೇಕ್ಷಕರ ಮನಸಲ್ಲಿಯೇ ಸಂಭಾವ್ಯ ಕಥೆ ಕಾವುಗಟ್ಟಲಾರಂಭಿಸಿದೆ. ಅಷ್ಟರ ಮಟ್ಟಿಗೆ ಈ ಫಸ್ಟ್ ಲುಕ್ ಟೀಸರ್ ಪರಿಣಾಮಕಾರಿಯಾಗಿದೆ.

ಈಗಾಗಲೇ ಅಣ್ಣಾವ್ರ ಕುಟುಂಬದ ಬಹುತೇಕರು ಈ ಫಸ್ಟ್ ಲುಕ್ ಟೀಸರ್ ಅನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇನ್ನು ಪ್ರೇಕ್ಷಕರ ವಲಯದಿಂದಲೂ ದೊಡ್ಡ ಸಿನಿಮಾಗಳಿಗೆ ಬರುವಂಥಾದ್ದೇ ಪ್ರತಿಕ್ರಿಯೆಗಳು ಬರುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಈ ಫಸ್ಟ್ ಲುಕ್ ಟೀಸರ್ ಲಕ್ಷ ವೀಕ್ಷಣೆಯ ಗಡಿ ದಾಟಿಕೊಂಡಿದೆ. ಎಮ್.ಜಿ.ಪಿ.ಎಕ್ಸ್ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ವಿ. ಮಾದೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಹಿರಿಯ ನಟ ರಾಮಕೃಷ್ಣ, ಉಮೇಶ್, ಶಶಿಧರ ಕೋಟೆ ಮೊದಲಾದ ಘಟಾನುಘಟಿ ಕಲಾವಿದರ ತಾರಾಗಣ ಈ ಚಿತ್ರದಲ್ಲಿದೆ. ಹಿರಿಯ ನಿರ್ದೇಶಕ ಎಸ್.ನಾರಾಯಣ್ ಪುತ್ರ ಪಂಕಜ್ ಕೂಡಾ ಇಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟಿ ಭವ್ಯಾ ಬಹು ಕಾಲದ ನಂತರ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರವೂ ಕೂಡಾ ಕಾಡುವಂತಿದೆಯಂತೆ. ಇನ್ನುಳಿದಂತೆ ಸ್ಟಾರ್ ನಟರೋರ್ವರು ಈ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಆ ನಟ ಯಾರೆಂಬುದು ಸೇರಿದಂತೆ ಇನ್ನೊಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ಮುಂದಿನ ದಿನಗಳಲ್ಲಿ ಅಪ್‌ಡೇಟ್ ಸಿಗಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್