ಪಕ್ಷದ ಉಳಿವಿಗಾಗಿ ನಿಖಿಲ್ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕು: ಸಾ.ರಾ ಮಹೇಶ್

Public TV
1 Min Read

ಬೆಂಗಳೂರು: ಪಕ್ಷದ ಉಳಿವಿಗಾಗಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಚನ್ನಪಟ್ಟಣದಿಂದ (Channapatna) ಸ್ಪರ್ಧೆ ಮಾಡಬೇಕು ಎಂದು ಮಾಜಿ ಸಚಿವ ಸಾ.ರಾ ಮಹೇಶ್ (SR Mahesh) ಮನವಿ ಮಾಡಿದ್ದಾರೆ.

ಚನ್ನಪಟ್ಟಣ ಅಭ್ಯರ್ಥಿ ಕುರಿತು ಜೆಪಿ ಭವನದಲ್ಲಿ ಮಾತನಾಡಿದ ಅವರು, ಚನ್ನಚನ್ನಪಟ್ಟಣದಿಂದ ನಿಖಿಲ್ ನಿಲ್ಲಬೇಕು ಎಂದು ಕಾರ್ಯಕರ್ತರು, ಮುಖಂಡರು ಒತ್ತಾಯ ಮಾಡುತ್ತಿದ್ದಾರೆ. ಆದರೆ ನಿಖಿಲ್ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂದು ಹೇಳುತ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಅವರು ನಿಖಿಲ್ ಜೊತೆ ಮಾತನಾಡುತ್ತಿದ್ದಾರೆ. ಎಲ್ಲರು ನಿಖಿಲ್ ಅಭ್ಯರ್ಥಿ ಆಗಬೇಕು ಎಂದು ಹೇಳುತ್ತಿದ್ದಾರೆ. ಇವತ್ತು ಕುಮಾರಸ್ವಾಮಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ| ಕಾರ್ಮಿಕನ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ

ಪಕ್ಷ ಉಳಿಯಬೇಕಾದರೆ ನಿಖಿಲ್ ಸ್ಪರ್ಧೆ ಆಗಬೇಕು ಎಂದು ನಾವು ಹೇಳುತ್ತಿದ್ದೇವೆ. ನಿಖಿಲ್ ನಿಂತರೆ ದೇವೇಗೌಡರ ಕುಟುಂಬ ಮಾತ್ರ ಇರೋದಾ ಎನ್ನುತ್ತಾರೆ. ಅನಿತಾ ಕುಮಾರಸ್ವಾಮಿ ನಿಂತಿದ್ದರೂ ಇದೇ ಹೇಳಿದ್ದರು. ಈಗ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಕೊಡಿ ಎಂದರೆ ನಿಖಿಲ್‌ಗೆ ಭಯ ಎನ್ನುತ್ತಾರೆ. ವಯನಾಡ್‌ನಲ್ಲಿ ರಾಜೀನಾಮೆ ಕೊಟ್ಟು ಪ್ರಿಯಾಂಕಾ ನಿಂತರೆ ಅದು ಕುಟುಂಬ ರಾಜಕೀಯ ಅಲ್ಲ. ಇಲ್ಲಿ ಮಾತ್ರ ನಿಖಿಲ್ ನಿಂತರೆ ಕುಟುಂಬ ರಾಜಕೀಯ ಎನ್ನುತ್ತಾರೆ. ಇದು ಹೇಗೆ ಎಂದು ಕಾಂಗ್ರೆಸ್‌ಗೆ ಪ್ರಶ್ನಿಸಿದರು. ಇದನ್ನೂ ಓದಿ: ಸಿಜೆಐ ಸೋಗಿನಲ್ಲಿ ವೃದ್ಧನಿಗೆ 1.26 ಕೋಟಿ ವಂಚನೆ – ನಾಲ್ವರು ಆರೋಪಿಗಳ ಬಂಧನ

ಜೆಡಿಎಸ್‌ಗೆ ಇದು ಸಂದಿಗ್ಧ ಪರಿಸ್ಥಿತಿ. ನೋಡೋಣ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ನಾವು ಸೋಲು, ಗೆಲುವು ಎರಡೂ ನೋಡಿದ್ದೇವೆ. ಜೆಡಿಎಸ್ ಮುಗಿದೇ ಹೋಯಿತು ಎಂದಾಗಲೂ ಜೆಡಿಎಸ್ ಗೆದ್ದಿದೆ. ಪಕ್ಷದ ಉಳಿವಿಗಾಗಿ ಇಂದು ಸಭೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪರಿಷತ್‌ ಉಪ ಚುನಾವಣೆ| ಬಿಜೆಪಿಯ ಕಿಶೋರ್ ಕುಮಾರ್‌ಗೆ ಭರ್ಜರಿ ಜಯ

Share This Article